ಸರ್ಕಾರಿ ಶಾಲೆಯಲ್ಲಿ ಓದಿದ್ರೆ ತಾಯಂದಿರ ಅಕೌಂಟ್ ಗೆ ವರ್ಷಕ್ಕೆ 15 ಸಾವಿರ – ಸರ್ಕಾರಿ ಶಾಲೆ ಉಳಿಸಲು ಹೊಸ ಯೋಜನೆ…..ಅದು ಇದು ಕೊಡೊದು ಬದಲಿಗೆ ಹೀಗೆ ಮಾಡಿ ಆರಂಭಗೊಂಡ ಅಭಿಯಾನ…..

Suddi Sante Desk
ಸರ್ಕಾರಿ ಶಾಲೆಯಲ್ಲಿ ಓದಿದ್ರೆ ತಾಯಂದಿರ ಅಕೌಂಟ್ ಗೆ ವರ್ಷಕ್ಕೆ 15 ಸಾವಿರ – ಸರ್ಕಾರಿ ಶಾಲೆ ಉಳಿಸಲು ಹೊಸ ಯೋಜನೆ…..ಅದು ಇದು ಕೊಡೊದು ಬದಲಿಗೆ ಹೀಗೆ ಮಾಡಿ ಆರಂಭಗೊಂಡ ಅಭಿಯಾನ…..

ಬೆಂಗಳೂರು

ಸರ್ಕಾರಿ ಶಾಲೆಯಲ್ಲಿ ಓದಿದ್ರೆ ತಾಯಂದಿರ ಅಕೌಂಟ್ ಗೆ ವರ್ಷಕ್ಕೆ 15 ಸಾವಿರ ಹೌದು ಇಂತಹ ದೊಂದು ಜನಪರ ಜನಪ್ರಿಯ ಯೋಜನೆ ಯನ್ನು ಆಂಧ್ರಪ್ರದೇಶ ರಾಜ್ಯ ಸರ್ಕಾರ ಜಾರಿಗೆ ತೆಗೆದುಕೊಂಡು ಬಂದಿದೆ

ಹಲವು ವರ್ಷಗಳಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳೇ ಬಾರದೆ ಎಷ್ಟೋ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆತರಲು ಆಂಧ್ರ ಸಿಎಂ ಹೊಸ ಪ್ಲಾನ್ ಒಂದನ್ನು ಮಾಡಿದ್ದಾರೆ

ಸರ್ಕಾರಿ ಶಾಲೆಯಲ್ಲಿ ಮಕ್ಕಳನ್ನು ಓದಿಸಿದ ಪೋಷಕರಿಗೆ ಪ್ರತಿ ವರ್ಷ 15,000 ಹಣ ಹಾಕು ವುದಾಗಿ ತಿಳಿಸಿದ್ದಾರೆ ಅಮ್ಮನ ಮಡಿಲು ಸ್ಕೀಮ್ ನಲ್ಲಿ ಈ ಅಮ್ಮಂದಿರಿಗೆ ಹಣ ಹಾಕಲಾಗುತ್ತಿದೆ.

ಈ ಯೋಜನೆಯನ್ನು ಈಗಾಗಲೇ ಜಾರಿಗೆ ತಂದಿದ್ದಾರೆ ಸರ್ಕಾರಿ ಶಾಲೆ ಮಕ್ಕಳಿಗೆ ಪೋಷ ಕರಿಗೆ 19,617 ಕೋಟಿ ಹಣ ಖರ್ಚು ಮಾಡಿರು ವುದಾಗಿ ತಿಳಿಸಿದ್ದಾರೆ ಈ ಸಂಬಂಧ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಮಾತನಾಡಿದ್ದು ಅಮ್ಮ ವೋಡಿ ಅಂದ್ರೆ ಅಮ್ಮನ ಮಡಿಲು ಯೋಜನೆಗೆ  ಇಂದಿಗೆ ಮೂರು ವರ್ಷ ಮಕ್ಕಳನ್ನ ಸರ್ಕಾರಿ ಶಾಲೆಗೆ ಕಳುಹಿಸುತ್ತಾ ಇರೋದಕ್ಕೆ ತಾಯಂದಿರಿಗೆ ಪ್ರತಿ ವರ್ಷ 15000 ಹಣ ನೀಡುತ್ತಿದ್ದೇವೆ

ಈ ಯೋಜನೆ ಬಿಪಿಎಲ್ ಕಾರ್ಡ್ ಹೊಂದಿರು ವಂತ ಕುಟುಂಬಸ್ಥರಿಗೆ ಅನ್ವಯವಾಗಲಿದೆ ಎಂದಿದ್ದಾರೆ.ಇದುವರೆಗೂ 84 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈ ಸ್ಕೀಮ್ ಅಡಿಯಲ್ಲಿ ಆರ್ಥಿಕ ಸಹಾಯ ಸಿಕ್ಕಿದೆ.

ಇದರ ನೇರ ಫಲಾನುಭವಿಗಳು 44.5 ಲಕ್ಷಕ್ಕೂ ಹೆಚ್ಚು ತಾಯಂದಿರು ಇದ್ದಾರೆ. ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ, ಬಡವರ ಮಕ್ಕಳನ್ನು ಓದಿ ಸಲು ಈ ಸ್ಕೀಮ್​​​ ಜಾರಿಗೆ ತರಲಾಗಿದೆ ಎಂದಿದ್ದಾರೆ ಇನ್ನೂ ಈ ಒಂದು ಯೋಜನೆ ನೋಡಿ ನಮ್ಮ ರಾಜ್ಯದಲ್ಲಿ ಅದನ್ನು ಇದನ್ನು ಉಚಿತವಾಗಿ ನೀಡುವ ಬದಲಿಗೆ ಇಂತಹ ಯೋಜನೆ ನೀಡಿ ಎಂಬ ಆಂದೋಲನ ಆರಂಭ ಮಾಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.