ಹುಬ್ಬಳ್ಳಿ –
ಪೊಲೀಸ್ ಅಧಿಕಾರಿಗಳು ಸನ್‌ಫ್ಲವರ್ ಇದ್ದ ಹಾಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ – ಐಎಸ್‌ಐಎಸ್ ಸರ್ಕಾರ ಅಂತಾ ಸಿದ್ದರಾಮಯ್ಯ ತಿಳಿದುಕೊಂಡಿದ್ದಾರೆಂದ ಕೇಂದ್ರ ಸಚಿವರು ಹೌದು ಪೊಲೀಸ್ ಅಧಿಕಾರಿಗಳು ಸನ್ ಪ್ವವರ್ ಇದ್ದ ಹಾಗೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಐಎಸ್‌ಐಎಸ್ ಸರ್ಕಾರ ಅಂತಾ ಸಿದ್ದರಾಮಯ್ಯ ತಿಳಿದುಕೊಂಡಿದ್ದಾರೆಂದರು.ಇನ್ನೂ ರಾಮ ಭಕ್ತನ ಬಂಧನ ಸರ್ಕಾರದ ಕುಹಕ,ನೀಚತನ.ರಾಮ ಮಂದಿರ ನಿರ್ಮಾಣವಾದರೆ ನಿಮಗೇಕೆ ಹೊಟ್ಟೆ ಕಿಚ್ಚು ಎಂದು ಪ್ರಶ್ನಿಸಿದರು.ಕೋರ್ಟ್ ವಾರಂಟ್ ಅಂತಾ ಸುಳ್ಳು ಹೇಳ್ತಾರೆ.
ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ಕಲ್ಲೆಸೆದ ದೇಶದ್ರೋಹಿಗಳ ಬಿಡುಗಡೆಗೆ ಪತ್ರ ಬರೀತಾರೆ. ಕೆಜೆ ಹಳ್ಳಿ, ಡಿಜೆ ಹಳ್ಳಿ, ಪಿಎಫ್‌ಐ ಪ್ರಕರಣ ಹಿಂಪ ಡೆಯೋದು ಮಾಡ್ತಾರೆ ಎನ್ನುತ್ತಾ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಮುಖಂಡರನ್ನು ಪ್ರಹ್ಲಾದ್ ಜೋಶಿಯವರು ಪ್ರಶ್ನೆಯನ್ನು ಮಾಡಿದರು.
ಐಎಸ್‌ಐಎಸ್ ಸರ್ಕಾರ ಅಂತಾ ಸಿದ್ದರಾಮಯ್ಯ ತಿಳಿದುಕೊಂಡಿದ್ದಾರೆ.ಮುಸಲ್ಮಾನರ ತುಷ್ಟೀಕರ ಣದ ಪರಾಕಾಷ್ಟೆ ಇದಾಗಿದ್ದು ಸಿದ್ದರಾಮಯ್ಯ ಅನಗತ್ಯವಾಗಿ ದ್ವೇಷ,ಅಸೂಯೆ ಹುಟ್ಟು ಹಾಕುತ್ತಿ ದ್ದಾರೆಂದರು.ಸಿದ್ದರಾಮಯ್ಯನವರ ಹಿಂದೂ ದ್ವೇಷದ,ಮುಸ್ಲೀಮ್ ತುಷ್ಟೀಕರಣದ ಪರಾಕಾಷ್ಟೆ ಯಾಗಿದ್ದು ನಾವು ಹಿಂದೂ ಕಾರ್ಯಕರ್ತರ ಪರ ವಕೀಲರನ್ನು ಇಟ್ಟಿದ್ದೇವೆ.
ಈ ಕೇಸ್ ನಮ್ಮ ಗಮನಕ್ಕೆ ಬಂದಿಲ್ಲ, ಬಂದಿದ್ರೆ ಹಿಂಪಡೀತಾ ಇದ್ವಿ ಎಂದರು.ರಾಮ ಮಂದಿರ ಉದ್ಘಾಟನೆ ಆಗುವಾಗ ಅರೆಸ್ಟ್ ಮಾಡುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದರು.ಪೊಲೀಸ್ ಅಧಿಕಾರಿಗಳು ಸನ್‌ಫ್ಲವರ್ ಇದ್ದ ಹಾಗೆ.ಸರ್ಕಾರ ಅನ್ನೋ ಸೂರ್ಯ ಎತ್ತ ಕಡೆ ತಿರಗ್ತಾನೆ,ಅತ್ತ ಕಡೆ ತಿರಗ್ತಾರೆ.
ಎಮ್.ಬಿ. ಪಾಟೀಲ್ ಅವರ ಪಕ್ಷದ ಪರಿಸ್ಥಿತಿ ನೋಡಿಕೊಳ್ಳಲಿ.ಕಾಂಗ್ರೆಸ್ ರಾಮನ ಬಗ್ಗೆ ಅವ ಹೇಳನ ಮಾಡದಿದ್ದರೆ ಈ ಸ್ಥಿತಿ ಬರ್ತಿರಲಿಲ್ಲ. ಕಾಂಗ್ರೆಸ್‌ನವರು ಹುಚ್ಚುಹುಚ್ಚು ತನ ಮಾಡಿ ಈಗ ಮಾತನಾಡ್ತಿದ್ದಾರೆ.ಸಿದ್ದರಾಮಯ್ಯ ರಾಮ ಭಕ್ತರಾಗಿದ್ದರೆ
ಅಯೋಧ್ಯೆಗೆ ಹೋಗಲಿ.ಹಳೇ ಕೇಸ್ ಅಂದರೆ ರಾಮ ಮಂದಿರ ಹೋರಾಟದ ಕೇಸ್ ಹೊರಗೆ ತೆಗೆಯಲು ಸಿಎಮ್ ಹೇಳಿದ್ದಾರೆ.ಇದರ ವಿರುದ್ಧ ನಾಳೆ ಬಿಜೆಪಿಯಿಂದ ಹೋರಾಟ ಮಾಡುತ್ತಿ ದ್ದೇವೆಂದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..