ಲಕ್ಷ್ಮೇಶ್ವರ –
ಲಕ್ಷ್ಮೇಶ್ವರ ದಲ್ಲಿ ಆರಂಭಗೊಂಡ ಗ್ರಾಮ ಚಲೋ ಅಭಿಯಾನ – ಶಾಸಕ ಚಂದ್ರು ಲಮಾಣಿ ಯವ ರೊಂದಿಗೆ ಅಭಿಯಾನದಲ್ಲಿ ಪಾಲ್ಗೊಂಡ ಶರಣು ಅಂಗಡಿ ಮತ್ತು ಟೀಮ್ ಹೌದು
ಬಿಜೆಪಿ ರಾಜ್ಯ ಘಟಕ ಕರೆ ನೀಡಿರುವ ಗ್ರಾಮ ಚಲೋ ಅಭಿಯಾನ ರಾಜ್ಯಾಧ್ಯಂತ ಆರಂಭ ಗೊಂಡಿದ್ದು ಗದಗ ಜಿಲ್ಲೆಯಲ್ಲೂ ಕೂಡಾ ಆರಂಭ ಗೊಂಡಿದೆ.ಹೌದು ಜಿಲ್ಲೆಯ ತುಂಬೆಲ್ಲಾ ಗ್ರಾಮ ಚಲೋ ಅಭಿಯಾನ ಆರಂಭಗೊಂಡಿದ್ದು ಶಿರಹಟ್ಟಿಯಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಚಲೋ ಅಭಿಯಾನಕ್ಕೆ ಶಾಸಕ ಡಾ ಚಂದ್ರ ಲಮಾಣಿ ಚಾಲನೆ ನೀಡಿದರು.
ಭಾರತೀಯ ಜನತಾ ಪಾರ್ಟಿ ಶಿರಹಟ್ಟಿ ಮಂಡಲದ ನಗರ ಘಟಕ ವತಿಯಿಂದ ಹಮ್ಮಿಕೊಂಡಿದ್ದ ಈ ಒಂದು ಅಭಿಯಾನಕ್ಕೆ ಚಾಲನೆ ಸಿಕ್ಕಿದೆ.”ಗ್ರಾಮ ಚಲೋ ಅಭಿಯಾನ” ದಡಿ ಗೋಡೆ ಬರಹ ಕಾರ್ಯಕ್ರಮವನ್ನು ಲಕ್ಷ್ಮೇಶ್ವರ ನಗರದ ವಾರ್ಡ್ ಸಂಖ್ಯೆ 02 ರಲ್ಲಿ ಚಾಲನೆ ನೀಡಲಾಯಿತು.
ತಹಶೀಲ್ದಾರ್ ಆಫೀಸ್ ಹತ್ತಿರ ಶಿರಹಟ್ಟಿ ಮತಕ್ಷೇತ್ರದ ಶಾಸಕರಾದ ಡಾ. ಚಂದ್ರು ಲಮಾಣಿ ಈ ಒಂದು ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದರು.ಶಾಸಕರೊಂದಿಗೆ ಶರಣು ಅಂಗಡಿ ಅವರೊಂದಿಗೆ ಕಾರ್ಯಕ್ರಮದಲ್ಲಿ ಪಕ್ಷದ ಪದಾಧಿಕಾರಿಗಳು,ಬೂತ್ ಅಧ್ಯಕ್ಷರು, ಹಿರಿಯರು ಹಾಗೂ ಗಣ್ಯರು ಪಾಲ್ಗೊಂಡಿದ್ದರು.
ಸುದ್ದಿ ಸಂತೆ ನ್ಯೂಸ್ ಲಕ್ಷೇಶ್ವರ.























