ಕಲಹಾಳ –
ಗ್ರಾಮ ಪಂಚಾಯತ ಚುನಾವಣೆ 2020 ಸಂಗಳ ಗ್ರಾಮ ಪಂಚಾಯತನ ಕಲಹಾಳ ಗ್ರಾಮದಿಂದ ಹನಮಂತ ಮಡಿವಾಳರ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸುವ ಮುನ್ನ ಸಂಗಳದ ಶಾಲಾ ಆವರಣದಲ್ಲಿರುವ BSF ನ ವೀರಯೋಧ ಶ್ರೀ ಮೇಗುಂಡೆಪ್ಪ ಹಡಪದ ಅವರ ಸಮಾಧಿಗೆ ಬೆಂಬಲಿಗರೊಂದಿಗೆ ಮಾಲಾರ್ಪಣೆ ಮಾಡಿದರು.
ನಂತರ ಸಂಗಳ ಗ್ರಾಮ ಪಂಚಾಯತಿಯ ಕಲಹಾಳ ಗ್ರಾಮದ ವಾರ್ಡ ನಂಬರ 4 ಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಜೈ ಜವಾನ ಜೈ ಕಿಸಾನ ಎನ್ನುವ ಘೋಷಣೆಯೊಂದಿಗೆ ಈ ಹಿಂದೆ ಇದ್ದ ಮಾದರಿ ಗ್ರಾಮದ ಹಾಗೇ ಮತ್ತೇ ಕಲಹಾಳ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಲು ಪಣ ತೊಟ್ಟು ಸ್ಪರ್ಧೆ ಮಾಡಿದ್ದಾರೆ.
ಮಹಾದಾಯಿ ಹೋರಾಟಗಾರ , ರೈತಸೇನಾ ಕರ್ನಾಟಕದ ರಾಮದುರ್ಗ ತಾಲೂಕಾ ಪ್ರಧಾನ ಕಾರ್ಯದರ್ಶಿ ಹಾಗೂ ರಾಮದುರ್ಗ ತಾಲೂಕಾ ಮಡಿವಾಳರ ಸಂಘದ ಅಧ್ಯಕ್ಷ ಹನಮಪ್ಪ ಸಂಗಪ್ಪ ಮಡಿವಾಳರ ಎಲ್ಲರಿಗೂ ಅಚ್ಚು ಮೆಚ್ಚಿನ ಪ್ರೀತಿಯ ‘ಕಾಕಾ’ ಎಂದೇ ಕರೆಯಿಸಿಕೊಳ್ಳುವ ಇವರಿಗೆ ಗೆಳೆಯರ ಬಳಗ ಸೇರಿದಂತೆ ಎಲ್ಲರೂ ಈಗಾಗಲೇ ಸಾಮಾಜಿಕ ಜಾಲ ತಾಣಗಳಲ್ಲಿ ಶುಭ ಹಾರೈಸಿದ್ದಾರೆ.
ಒಳ್ಳೇಯದಾಗಲಿ ಗೆದ್ದು ಬಾ ‘ಕಾಕಾ’ ಎಂದು ಹಾರೈಸಿದ್ದಾರೆ. ಗ್ರಾಮದಲ್ಲಿ ಏನಾದರೂ ಮಾಡಿ ಹೊಸ ಬದಲಾವಣೆ ಮಾಡಬೇಕು ಎಂದು ಪಣ ತೊಟ್ಟಿರುವ ಇವರಿಗೆ “ಸುದ್ದಿ ಸಂತೆ” ಪರವಾಗಿ ಆಲ್ ದಿ ಬೆಸ್ಟ್