ವಿಜಯನಗರ –
ಕಟ್ಟಡಕ್ಕೆ ನೀರು ಬಿಡಲು ಹೋಗಿದ್ದ ಸಮಯದಲ್ಲಿ ವಿದ್ಯುತ್ ತಗುಲಿ ಈ ಒಂದು ಅವಘಡದಿಂದಾಗಿ ಗ್ರಾಮ ಪಂಚಾಯತ ಸದಸ್ಯರೊಬ್ಬರು ಸಾವಿಗೀಡಾದ ಘಟನೆ ವಿಜಯನಗರದಲ್ಲಿ ನಡೆದಿದೆ.ಹೌದು ನೀರು ಬಿಡುವ ವೇಳೆ ವಿದ್ಯುತ್ ಪ್ರವಹಿಸಿದ ಕಾರಣ ವಿದ್ಯುತ್ ತಗುಲಿ ಸ್ಥಳದಲ್ಲಿ ಯೇ ಸಾವಿಗೀಡಾಗಿದ್ದಾರೆ.

ಕೃಷ್ಣಮೂರ್ತಿ(35)ಮೃತಪಟ್ಟ ಗ್ರಾಮ ಪಂಚಾಯತ ಸದಸ್ಯರಾಗಿದ್ದಾರೆ.ಗ್ರಾಮ ಪಂಚಾಯತ ಸದಸ್ಯನಾಗಿದ್ದಾರೆ ಕೃಷ್ಣಮೂರ್ತಿ.ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಶಿವಪುರ ಗೊಲ್ಲರಹಟ್ಟಿ ಗ್ರಾಪಂ ಸದಸ್ಯರಾಗಿದ್ದಾರೆ. ದೇವಾ ಲಯದ ಕಟ್ಟಡಕ್ಕೆ ನೀರು ಬಿಡಲು ಹೋದಾಗ ಈ ಒಂದು ಅವಘಡ ನಡೆದಿದೆ.ಇನ್ನೂ ಇತ್ತ ಕೂಡ್ಲಿಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ದೂರನ್ನು ದಾಖಲು ಮಾಡಿಕೊಂಡಿರುವ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.