ಪ್ರಾಥಮಿಕ ಹಂತದ ಶಾಲಾ ಆರಂಭಕ್ಕೆ ಗ್ರೀನ್ ಸಿಗ್ನಲ್ ಅಕ್ಟೋಬರ್ 25 ರಿಂದ ಆರಂಭವಾಗಲಿವೆ ಶಾಲೆಗಳು….

Suddi Sante Desk

ಬೆಂಗಳೂರು –

ಈಗಾಗಲೇ ಎರಡು ಹಂತದಲ್ಲಿ ರಾಜ್ಯದಲ್ಲಿ ಶಾಲೆಗಳನ್ನು ಆರಂಭ ಮಾಡಿದ ಬೆನ್ನಲ್ಲೇ ಈಗ ಮತ್ತೊಂದು ಹಂತದಲ್ಲಿ ಅಂದರೆ ಪ್ರಾಥಮಿಕ ಹಂತದ 1 ರಿಂದ 5 ನೇ ತರಗತಿ ಯವರೆಗೆ ಶಾಲೆಗಳನ್ನು ಆರಂಭ ಮಾಡಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಸಧ್ಯ ರಾಜ್ಯದಲ್ಲಿ ಒಂದು ಕಡೆ ಮೂರನೇಯ ಹಂತದ ಕೋವಿಡ್ ಆತಂಕ ಮತ್ತೊಂದು ಕಡೆಗೆ ಕಡಿಮೆಯಾಗುತ್ತಿರುವ ಪ್ರಕರಣಗಳು ಹೀಗಾಗಿ ಇಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 1 ರಿಂದ 5ನೇ ತರಗತಿಯ ವರೆಗೆ ತರಗತಿ ಗಳನ್ನು ಆರಂಭ ಮಾಡಲು ಅನುಮತಿಯನ್ನು ನೀಡಲಾಗಿದೆ.

ಹೌದು ಆಕ್ಟೋಬರ್‌ 25 ರಿಂದ 1ರಿಂದ 5ರ ತನಕ ಶಾಲೆ ಶುರು ಮಾಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಶಾಲೆ ಆರಂಭಕ್ಕೆ ಕೋವಿಡ್‌ ತಾಂತ್ರಿಕ ಸಮಿತಿ ಒಪ್ಪಿಗೆ ನೀಡಲಾಗಿದೆ. ಕರ್ನಾಟಕದಲ್ಲಿ ಈಗಾಗಲೇ 6 ನೇ ತರಗತಿಯಿಂದ ಉನ್ನತ ಶಿಕ್ಷಣ ಹಂತದವರೆಗಿನ ಎಲ್ಲ ತರಗತಿಗಳ ಭೌತಿಕ ಕ್ಲಾಸ್‌ ಅನುಮತಿ ನೀಡಿದೆ. ಕೊರೊನಾ ಮೂರನೇ ಅಲೆಯ ಭಯದ ಹಿನ್ನೆಲೆಯಿಂದ 1 ರಿಂದ 5 ನೇ ತರಗತಿ ಆರಂಭವಾಗಿರಲಿಲ್ಲ, ಇದಲ್ಲದೇ ಮಕ್ಕಳಿಗೆ ಕರೋನ ಸೊಂಕಿಗೆ ಲಸಿಕೆ ಬಂದಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಮತ್ತೆ ಶಾಲೆಗಳನ್ನು ಪುನರ್‌ ಆರಂಭ ಮಾಡಲು ಮುಂದಾಗಿದೆ.ಇನ್ನೂ ಶಾಲೆಗೆ ಮಕ್ಕಳಿಗೆ ಬರಲು ಯಾವುದೇ ಪ್ರಯತ್ನ ಮಾಡುವಂತಿಲ್ಲ ಜೊತೆಗೆ ಮಕ್ಕಳು ಶಾಲೆಗೆ ಬರಲು ಹಾಜರಾತಿ ಕಡ್ಡಾಯವಲ್ಲ ಅಂತ ಸಚಿವ ಬಿ.ಸಿ ನಾಗೇಶ್‌ ಹೇಳಿದ್ದಾರೆ.

ಇದೇ ವೇಳೆ ಒಂದು ವಾರದ ಮಟ್ಟಿಗೆ ಶಾಲೆಯ ಅವಧಿ ಯನ್ನು ಕಡಿತ ಮಾಡಲಾಗು ವುದು ಬಳಿಕ ಎಂದಿನಂತೆ ಸಮಯವನ್ನು ಮುಂದುವರೆಯಲಿದೆ ಅಂತ ಹೇಳಿದ್ದಾರೆ. ಇದಲ್ಲದೇ ಮಕ್ಕಳ ಪೋಷಕರ ಈಗಾಗಲೇ ಶಾಲೆ ಆರಂಭವಾಗಿರುವುದಕ್ಕೆ ಉತ್ತಮವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.ಕರೋನ ಸಾಂಕ್ರಮಿಕ ರೋಗದ ವಿರುದ್ದ ಸರ್ಕಾರ ಯಶಸ್ವಿಯಾಗಿ ಹೋರಾಡುತ್ತಿದೆ ಅಂತ ತಿಳಿಸಿ ದ್ದಾರೆ. ಇನ್ನೂ ಮಾರ್ಗಸೂಚಿಗಳ ಬಗ್ಗೆ ನಾಡಿದ್ದು ಎಲ್ಲಾ ಶಾಲೆಗಳಿಗೆ ಮಾಹಿತಿ ನೀಡಲಾಗುವುದು ಅಂತ ತಿಳಿಸಿದ ಅವರು ಮಕ್ಕಳಲ್ಲೂ ಕೂಡ ಕೋವಿಡ್‌ ಸೊಂಕು ಕಾಣಿಸಿಕೊಂಡಿದ್ದರೆ ಅದು ಅವರ ಮನೆಯಲ್ಲಿ ಆಗಿದ್ದ ಹಿರಿಯರಿಂದ ಹೊರತು ಮಕ್ಕಳಿಂದ ಮಕ್ಕಳಿಗೆ ಕರೋನ ಸೊಂಕು ಹರಡಿಲ್ಲ ಅಂತ ಹೇಳಿದರು.

• ಕೋವಿಡ್‌ ಮಾರ್ಗಸೂಚಿ ಪಾಲಿಸಿ ಶಾಲೆ ಆರಂಭಕ್ಕೆ ಸೂಚನೆ
• ಶಾಲೆಗೆ ಮಕ್ಕಳನ್ನು ಕಳುಹಿಸಲು ಹೆತ್ತವರ ಅನುಮತಿ ಅವಶ್ಯಕ
• ಕ್ಲಾಸ್‌ ರೂಮ್‌ನಲ್ಲಿ ಶೇ 50 ಮಂದಿ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ
• ಶಾಲೆಗಳಲ್ಲಿ ಥರ್ಮಲ್‌ ಸ್ಕ್ರೀನಿಂಗ್‌ ಕಡ್ಡಾಯ
• ಸಾಮಾಜಿಕ ಅಂತರವನ್ನು ಕಾಪಾಡುವಂತೆ ಸೂಚನೆ ನೀಡಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.