ಬೆಂಗಳೂರು –

ಕರೋನಾ ಸ್ವಲ್ಪ ಮಟ್ಟಿಗೆ ಕಡಿಮೆಯಾದ ಹಿನ್ನಲೆ ಯಲ್ಲಿ ರಾಜ್ಯದ ಹನ್ನೊಂದು ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆಸಿದ್ದರೆ ಇನ್ನೂಳಿದ ಜಿಲ್ಲೆಗಳಲ್ಲಿ ಸ್ವಲ್ಪು ಮಟ್ಟಿಗೆ ಲಾಕ್ ಡೌನ್ ಸಡಿಲಿಕೆ ಮಾಡಲಾಗಿ ದೆ ಆದ್ರೂ ಕೂಡಾ ಪೂರ್ಣ ಪ್ರಮಾಣದಲ್ಲಿ ಯಾವು ದಕ್ಕೂ ಅನುಮತಿಯನ್ನು ನೀಡಿಲ್ಲ ಬಸ್ ಸಂಚಾರಕ್ಕೆ ಅವಕಾಶವನ್ನು ನೀಡಿಲ್ಲ.ಇದು ಒಂದು ಕಥೆಯಾದರೆ ಇನ್ನೂ ಪ್ರಮುಖವಾಗಿ ನಾಳೆ ಬೆಳಗಾದರೆ ಹೊಸ ವರ್ಷದ ಶೈಕ್ಷಣಿಕ ವರ್ಷ ಆರಂಭ ಹೀಗಾಗಿ ನಾಳೆ ಯಿಂದಲೇ ಶಿಕ್ಷಕರು ಶಾಲೆಗೆ ಹೊಗಲೆಬೇಕು ಆದೇಶ ವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಮಾಡಿದ್ದು ಹೀಗಾಗಿ ಒಂದು ಕಡೆ ಬಸ್ ವ್ಯವಸ್ಥೆ ಇಲ್ಲ ಮತ್ತೊಂ ದು ಕಡೆ ಬಿಟ್ಟು ಬಿಡಲಾರದೆ ಜಿಟಿ ಜಿಟಿಯಾಗಿ ಮಳೆಯಾಗುತ್ತಿದ್ದು ಇದರ ನಡುವೆ ನಾಳೆ ಶಾಲೆಗೆ ಹೇಗೆ ಹೋಗಬೇಕು ಎಂಬ ದೊಡ್ಡದಾದ ಚಿಂತೆ ಯಲ್ಲಿ ಆತಂಕದಲ್ಲಿ ಶಿಕ್ಷಕರಿದ್ದಾರೆ.

ಬಸ್ ಇಲ್ಲ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ ಎಂಬ ಮಾಹಿತಿ ಕೂಡಾ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸಚಿವರಿಗೆ ಇದೆ ಆದ್ರೂ ಕೂಡಾ ಯಾವುದನ್ನು ನೋಡದೆ ಲೆಕ್ಕಿಸದೇ ತಲೆ ಕೆಡಿಸಿಕೊಳ್ಳದೇ ಹಿಂದೆ ಮುಂದೆ ನೊಡದೇ ಶಿಕ್ಷಕರೊಂದಿಗೆ ಚಲ್ಲಾಟವಾಡುತ್ತಿದ್ದಂತೆ ಕಾಣುತ್ತಿದೆ ಹೀಗಾಗಿ ತಾವೇ ಮಾಡಿದ್ದೇ ಆದೇಶ ಆಡಿದ್ದೇ ಆಟ ಎಂಬಂತಾಗಿದ್ದು ಯಾರು ಹೇಳಿದರೂ ಹೇಳಿದ್ದನ್ನು ಕೇಳುವಷ್ಟು ತಾಳ್ಮೆಯಂತೂ ಇದ್ದಂತೆ ಕಾಣುತ್ತಿಲ್ಲ ಹೀಗಾಗಿ ಹನ್ನೊಂದು ಜಿಲ್ಲೆಗಳ ಶಿಕ್ಷಕರಿಗೆ ಮನೆಯಿಂ ದಲೇ ಕೆಲಸವನ್ನು ಮಾಡುವ ಅವಕಾಶವನ್ನು ಮಾಡಿ ಇನ್ನೂಳಿದ ಜಿಲ್ಲೆಗಳ ಶಿಕ್ಷಕರಿಗೆ ಬಸ್ ಇಲ್ಲದಿ ದ್ದರೂ ಮಳೆಯಾಗುತ್ತಿದ್ದರೂ ಹೇಗಾದರೂ ಮಾಡಿ ಶಾಲೆಗೆ ಹೋಗಿ ಎಂಬ ಆದೇಶವನ್ನು ಮಾಡಿದ್ದು ಇದರಿಂದ ಬೆಳಗಾದರೆ ಮಳೆಯ ನಡುವೆ ಬಸ್ ಸಂಚಾರವಿಲ್ಲದಿದ್ದರೂ ಹೇಗೆ ಶಾಲೆಗಳಿಗೆ ಹೋಗಬೇ ಕು ಎಂಬ ದೊಡ್ಡ ಪ್ರಶ್ನೆ ಕಾಡುತ್ತಿದೆ ಇನ್ನೊಂದು ದೊಡ್ಡ ಸಮಸ್ಯೆ ಶಾಲೆಗಳಿಗೆ ರಜೆ ಘೋಷಣೆ ಮಾಡಿದ ನಂತರ ಈವರೆಗೆ ಬಹುತೇಕ ಶಿಕ್ಷಕರು ಕುಟುಂಬ ಸಮೇತವಾಗಿ ತಮ್ಮ ತಮ್ಮ ಊರುಗಳ ಲ್ಲಿದ್ದಾರೆ ಹೀಗಾಗಿ ಅಲ್ಲಿಂದ ನೌಕರಿ ಮಾಡುವ ಸ್ಥಳಕ್ಕೆ ಬರೊದು ಕೂಡಾ ಮತ್ತೊಂದು ಸಮಸ್ಯೆಯಾ ಗಿದ್ದು ಒಟ್ಟಾರೆ ಅದ್ಯೋಕೋ ಎನೋ ತಾವೊಬ್ಬರು ಶಿಕ್ಷಕಿ ಯೊಬ್ಬರ ಮಗನಾಗಿದ್ದುಕೊಂಡು ಶಿಕ್ಷಕರ ಸಮಸ್ಯೆಗಳಿಗೆ ಯಾವಾಗಲೂ ಸ್ಪಂದಿಸುತ್ತಿರುವ ಶಿಕ್ಷಣ ಸಚಿವರು ಯಾಕೇ ಹೀಗೆ ಮಾಡಿದರು ಎಂಬ ದೊಡ್ಡ ಅನುಮಾನ ಕಾಡುತ್ತಿದ್ದು ಈಗಲಾದರೂ ಕಾಲ ಮಿಂಚಿಲ್ಲ ಈ ಎಲ್ಲಾ ಸಮಸ್ಯೆಗಳನ್ನು ಅರಿತು ಕೊಂಡು ಸಮಸ್ಯೆಯನ್ನು ಸರಿ ಮಾಡುತ್ತರೆನಾ ಎಂಬ ನಿರೀಕ್ಷೆಯಲ್ಲಿ ಶಿಕ್ಷಕರಿದ್ದಾರೆ.