ಕಲಬುರಗಿ –
ಲಾಕ್ ಡೌನ್ ಸಮಯದಲ್ಲಿ ಶಿಕ್ಷಕಿಯೊಬ್ಬರು ಮಾನ ವೀಯತೆಯ ಕಾರ್ಯವನ್ನು ಮಾಡಿ ಮಾನವೀಯತೆ ಮೆರೆದಿದ್ದಾರೆ.ಹೌದು ಇಂಥಹ ಮಾನವೀಯತೆ ಮೆರೆ ದ ಗುರು ಮಾತೆಯೇ ಜ್ಯೋತಿ ಮಲ್ಲಪ್ಪ. ಸಾಮಾನ್ಯ ವಾಗಿ ನಮ್ಮ ಸಮಾಜದಲ್ಲಿ ಗುರವಿಗೆ ಶಿಕ್ಷಕರನ್ನು ಈ ದೇಶದ ರಕ್ಷಕರು ಸಮಾಜದ ಅಕ್ಷರದಾತರು ಎಂಬ ಮಾತಿದೆ.ಈ ಒಂದು ಮಾತನ್ನು ಸತ್ಯ ಮಾಡಿದವರು ಹರಸೂರ ಪ್ರಾಥಮಿಕ ಶಾಲೆಯ ಶಿಕ್ಷಕಿ ಜ್ಯೋತಿ ಮಲ್ಲಪ್ಪನವರು.

ಇವರ ವೃತ್ತಿಯ ಸಂಬಳದಲ್ಲಿ ಆಹಾರ ಧಾನ್ಯದ ಕಿಟ್ ನ್ನು ಬಡ ನೌಕರರಿಗೆ ಕೊಡುವದರೊಂದಿಗೆ ಧನ್ಯರಾ ಗಿದ್ದಾರೆ. ಕಲಬುರಗಿ ನಗರದ ಮಹಿಳಾ ನಿಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರಿಗೆ ಉಚಿತ ವಾಗಿ ಆಹಾರದ ಕಿಟ್ ಗಳನ್ನು ಕೊಟ್ಟಿದ್ದಾರೆ. ಹತ್ತ ಕ್ಕೂ ಹೆಚ್ಚು ಮಹಿಳಾ ನೌಕರರ ಟೀಮ್ ಗೆ ಇವರು ಸಧ್ಯದ ಪರಸ್ಥಿತಿಯಲ್ಲಿ ಕೆಲವೊಂದಿಷ್ಟು ಬಳಕೆಗೆ ಬೇಕಾಗುವ ಆಹಾರ ಧಾನ್ಯಗಳನ್ನು ನೀಡಿ ನೆರವಾ ಗಿದ್ದಾರೆ.ಒಂದು ಕಡೆ ಲಾಕ್ ಡೌನ್ ಮತ್ತು ಇಂಥಹ ಸಮಯದಲ್ಲಿ ಬದುಕು ಜೀವನ ಸಾಗಿಸೋದು ತುಂಬಾ ಕಷ್ಟಕರ ಇದರ ನಡುವೆ ಶಿಕ್ಷಕಿ ತಮ್ಮದೇ ಯಾದ ಸಂಬಳದಲ್ಲಿ ಮಹಿಳಾ ನೌಕರರಿಗೆ ಕಿಟ್ ನೀಡಿ ಆಸರೆಯಾಗಿದ್ದಾರೆ.ಇನ್ನೂ ಈ ಒಂದು ಕಾರ್ಯಕ್ರಮವು ಸಾಹಿತ್ಯ ಸಂಘಟಕ ಹಾಗು ಶರಣ ಸಾಹಿತಿ ವಿಜಯಕುಮಾರ ತೇಗಲತಿಪ್ಪಿ ಸಾರಥ್ಯದಲ್ಲಿ ಈ ಮಾನವೀಯತೆಯ ಸರಳ ಸಮಾರಂಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ, ಸಾಹಿತ್ಯ ಚಿಂತಕ ಮುಡಬಿ ಗುಂಡೇರಾವ, ಶಿಕ್ಷಕರಾದ ದೇವೇಂದ್ರಪ್ಪ ಗಣಮುಖಿ,ಚಂದ್ರಕಾಂತ ಬಿರಾದಾರ, ನಾಗನ್ನಾಥ ಕಸೆಟ್ಟಿ, ಪ್ರಭುಲಿಂಗ ಮೂಲ ಗೆ ಮಹಿಳಾ ನಿಲಯದ ಅಧಿಕಾರಿ ಭರತೇಶ್ ಶೀಲ ವಂತ ಸೇರಿದಂತೆ ನಿಲಯದ ಸಿಬ್ಬಂಧಿಯವರು ಉಪಸ್ಥಿತರಿದ್ದರು