ಸುಳ್ಯ –
ಮಾಡಬಾರದ ಕೆಲಸವನ್ನು ಮಾಡಿ ಶಿಕ್ಷಕನೊಬ್ಬ ಜೈಲು ಸೇರಿದ್ದಾನೆ.ಹೌದು ಮಂಗಳೂರಿನ ಕುಕ್ಕೆ ಸುಬ್ರಮಣ್ಯ ದಲ್ಲಿನ ಪ್ರೌಢ ಶಾಲೆಯಲ್ಲಿನ ಶಿಕ್ಷಕ ಗುರುರಾಜ್ ಪ್ರಾಜೆಕ್ಟ್ ವರ್ಕ್ ವಿಚಾರದಲ್ಲಿ ವಿದ್ಯಾರ್ಥಿನಿಯನ್ನು ಮನೆಗೆ ಕರೆಯಿಸಿಕೊಂಡು ಅತ್ಯಾಚಾರ ಮಾಡಿದ ಆರೋಪ ಕೇಳಿ ಬಂದಿತ್ತು. ಈ ಒಂದು ಕುರಿತಂತೆ ಪ್ರಕರಣ ಕೂಡಾ ದಾಖಲಾಗಿತ್ತು. ದೂರಿನ ಹಿನ್ನಲೆಯಲ್ಲಿ ಶಿಕ್ಷಕ ಗುರುರಾಜ್ ಎಂಬಾತ ನನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿದ್ದಾರೆ.
ಬಾಲಕಿ ಠಾಣೆಯಲ್ಲಿ ದೂರನ್ನು ದಾಖಲು ಮಾಡಿದ ಹಿನ್ನಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಗುರುರಾಜ್ ಪ್ರಾಜೆಕ್ಟ್ ವರ್ಕ್ ನೆಪದಲ್ಲಿ ಸುಮಾರು ಮೂರು ವರ್ಷಗಳಿಂದ ವಿದ್ಯಾರ್ಥಿನಿಯನ್ನು ತನ್ನ ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸಗುತ್ತಿದ್ದ ನಂತೆ.ಈ ಮಹಾಶಯನ ಮಹಾನ್ ಕೃತ್ಯಕ್ಕೆ ಪತ್ನಿ ಕೂಡಾ ಸಹಕರಿಸುತ್ತಿದ್ದಳಂತೆ ವಿದ್ಯಾರ್ಥಿನಿಯನ್ನು ವಿವಸ್ತ್ರಗೊಳಿಸಿ ಮೊಬೈಲ್ ಮೂಲಕ ಫೊಟೊ ತೆಗೆಯುತ್ತಿದ್ದರು ಹಾಗೂ ಪೊಟೊ ತೋರಿಸಿ ಬೆದರಿಸಿ ಮನೆಯಿಂದ ಹಣ ತರುವಂತೆ ಒತ್ತಡ ಹೇರುತ್ತಿದ್ದರು ಎಂದು ತಿಳಿದು ಬಂದಿದೆ.
2018 ರಿಂದ ನಿರಂತರವಾಗಿ ಅತ್ಯಾಚಾರ ಎಸಗಿ, ಬೆದರಿಕೆ ಹಾಕಿ ಹಣಕ್ಕಾಗಿ ಪಿಡಿಸುತ್ತಿದ್ದರು ಎಂದು ವಿದ್ಯಾರ್ಥಿನಿ ಹಾಗು ಆಕೆಯ ತಾಯಿ ದೂರಿದ್ದಾರೆ.ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಿಕ್ಷಕ ರಾಯಚೂರು ಮೂಲದ ಗುರುರಾಜ್ ನನ್ನು ಸುಬ್ರಹ್ಮಣ್ಯ ಪೊಲೀಲಿಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಸಧ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಹಿನ್ನಲೆಯಲ್ಲಿ ಕಾಮುಕ ಶಿಕ್ಷಕನನ್ನು ಜೈಲಿಗೆ ಪೊಲೀಸರು ಕಳಿಸಿ ದ್ದಾರೆ.