ಕಲಬುರಗಿ –
ಶ್ರಾವಣ ಮಾಸದ ಹಿನ್ನಲೆಯಲ್ಲಿ ಪ್ರತಿ ಸೋಮವಾರ ಅರ್ಧ ದಿನ ರಜೆ ಹಾಗೆ ಮಧ್ಯ ಸೋಮವಾರ ಸಂಪೂರ್ಣ ಬಿಡುವು ನೀಡುವ ಕುರಿತು ಕಲಬುರಗಿ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘದವರು ಜಿಲ್ಲೆಯ DDPI ಅವರಿಗೆ ಮನವಿ ಯನ್ನು ನೀಡಿದ್ದರು. ಶಿಕ್ಷಕರ ಮನವಿಗೆ ಸ್ಪಂದಿಸಿದ ಉಪ ನಿರ್ದೇಶಕರು ರಜೆಯನ್ನು ಘೋಷಣೆ ಮಾಡಿದ್ದಾರೆ.

ಶ್ರಾವಣ ಸೋಮವಾರ ಅರ್ಧ ದಿನ ರಜೆಯನ್ನು ನೀಡಿ ಶನಿವಾರ ಪೂರ್ಣ ಪ್ರಮಾಣದಲ್ಲಿ ಶಾಲೆ ನಡೆಸಿ ಅವಧಿಗಳನ್ನು ಸರಿದೂಗಿಸಿಕೊಳ್ಳುವಂತೆ ಆದೇಶವನ್ನು ಮಾಡಿದ್ದಾರೆ.