ತುಮಕೂರು –
ಕಾಲ ಬದಲಾದಂತೆ ರಾಜ್ಯದಲ್ಲಿನ ಸರ್ಕಾರಿ ಶಾಲೆಗಳು ಬದಲಾವಣೆ ಯಾಗುತ್ತಿದ್ದು ಹೈಟೆಕ್ ರೀತಿಯಲ್ಲಿ ಹೊಸ ಹೊಸ ತಂತ್ರಜ್ಞಾನ ನುರಿತ ಶಿಕ್ಷಕರು ಪರಿಣಾಮ ಕಾರಿ ಯಾದ ಬೋಧನೆ ಹೀಗೆ ಎಲ್ಲವೂ ಇದರೊಂದಿಗೆ ಇನ್ನೂ ಹತ್ತು ಹಲವಾರು ವ್ಯವಸ್ಥೆ ಗಳು ನೂರಾರು ರೂಪಾಯಿ ಶಾಲಾ ಶುಲ್ಕ ಯಾವುದೇ ರೀತಿಯ ಡೋನೆಶನ್ ಕೂಡಾ ಇಲ್ಲದೇ ರಾಜ್ಯದ ಸರ್ಕಾರಿ ಶಾಲೆಗಳು ಇವೆ ಇದರ ನಡುವೆ ಖಾಸಗಿ ಶಾಲೆ ಗಳಿಗೆ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲ ಎಂಬಂತೆ ಸರ್ಕಾರಿ ಶಾಲೆಗಳಿದ್ದು ಈ ಒಂದು ಮಾತಿಗೆ ತುಮಕೂರಿನ ತಿಪಟೂರು ಸರ್ಕಾರಿ ಶಾಲೆ ಈಗ ಮತ್ತೊಂದು ವಿಶೇಷ ರೀತಿಯ ವ್ಯವಸ್ಥೆ ಮೂಲಕ ಗಮನ ಸೆಳೆದಿದೆ.

ಹೌದು ಸರ್ಕಾರಿ ಶಾಲೆ ಗಳಿಗೆ ಬರುವ ಮಕ್ಕಳಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆ ಗೆ ಬರುವ ಮಕ್ಕಳ ಅನುಕೂಲ ಕ್ಕಾಗಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಎರಡು ಮಿನಿ ಕಾರು ಗಳನ್ನು ನೀಡಲಾಯಿತು ಅರಳಗುಪ್ಪೆ ಹಾಗೂ ಈಚನೂರು
ಸರ್ಕಾರಿ ಮಾದರಿ ಶಾಲೆ ಗೆ ವಿದ್ಯಾರ್ಥಿಗಳನ್ನು ಪಿಕಪ್ ಮತ್ತು ಡ್ರಾಪ್ ಮಾಡಲು ಕೆನರಾ ಬ್ಯಾಂಕ್‌ನಿಂದ ಈ ಒಂದು ವಾಹನಗಳನ್ನು ಒದಗಿಸಿದ್ದು ಹಸ್ತಾಂತರ ಮಾಡಲಾಯಿತು

ಎರಡು ಮಾರುತಿ ಇಕೋ ವಾಹನಗಳನ್ನು ತಿಪಟೂರಿನ ಕೆನರಾ ಬ್ಯಾಂಕ್ ಎದುರು ನಡೆದ ಸರಳ ಕಾರ್ಯಕ್ರಮದಲ್ಲಿ ಶಾಲೆಗಳಿಗೆ ಬ್ಯಾಂಕ್ ನ ಅಧಿಕಾರಿ ಗಳು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮತ್ತು ಮಕ್ಕಳ ಕೈಗೆ ಬೀಗ ನೀಡುವ ಮೂಲಕ ಹಸ್ತಾಂತರ ಮಾಡಿದರು.