ಕೋಲಾರ –
ನಾನೇನು ರಾಜಕೀಯ ನಿವೃತ್ತಿ ತಗೆದುಕೊಳ್ಳುತ್ತೇನೆ ಎಂದು ಹೇಳಿದ್ದೇನಾ ನಾನೇನು ಹೇಳಲಾರದೆ ನೀವೆ ನನ್ನ ರಾಜಕೀಯ ನಿವೃತ್ತಿಯ ಬಗ್ಗೆ ಘೋಷಣೆ ಮಾಡಿದ್ದು ನಿಜಕ್ಕೂ ಬೇಜಾರಾಗಿದೆ.ಈ ರೀತಿ ನೀವು ಮಾಡಿದ್ದು ಸರಿನಾ ಹೇಳಿ ಇದೇನಾ ನಿಮ್ಮ ಜವಾಬ್ದಾರಿ.ಹೀಗೆಂದು ಮಾಜಿ ಸಭಾಪತಿ ರಮೇಶ ಕುಮಾರ್ ಪ್ರಶ್ನೆ ಮಾಡಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಅವರು ರಾಜಕೀಯ ನಿವೃತ್ತಿ ಘೋಷಣೆಯನ್ನು ಪ್ರಚಾರ ಮಾಡಿದವರನ್ನು ತರಾಟೆಗೆ ತಗೆದುಕೊಂಡ್ರು.
ಕೈಯಲ್ಲಿ ಪೆನ್ನು ಇದೆ ಎಂದುಕೊಂಡು ಏನೇನು ಬರೆಯೊದಲ್ಲ ರೀ ನಿಮಗೂ ವೃತ್ತಿ ಧರ್ಮ ಅನ್ನೊದು ಇರಬೇಕು. ಅದನ್ನು ದಯಮಾಡಿ ಪಾಲಿಸಿ ಎಂದರು. ಇನ್ನೂ ನನ್ನ ರಾಜಕೀಯ ನಿವೃತ್ತಿಯನ್ನು ಯಾವಾಗ ತಗೆದುಕೊಳ್ಳಬೇಕು ಎಂಬುದು ನನಗೆ ಗೊತ್ತಿದೆ ನಿಮ್ಮಿಂದ ತಿಳಿದುಕೊಳ್ಳಬೇಕಾಗಿಲ್ಲ ಎಂದರು.ನನ್ನ ರಾಜಕೀಯ ನಿವೃತ್ತಿ ಕೇವಲ ವದಂತಿ ಅಷ್ಟೆ ಎಂದರು. ಕೋಲಾರ ತಾಲೂಕಿನ ಜನ್ನಘಟ್ಟ ಗ್ರಾಮದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿ ರಾಜಕೀಯ ನಿವೃತ್ತಿಯ ವಿಚಾರದಲ್ಲಿ ಬೆಳಿಗ್ಗೆಯಿಂದ ತುಂಬಾ ನೋವಾಗಿದೆ ಎಂದರು.ಯಾವುದೇ ಹೇಳಿಕೆ ಇಲ್ಲದೆ, ದಾಖಲೆ ಇಲ್ಲದೆ ನಮಗೆ ಮುಜುಗರ ತರುವ ಕೆಲಸ ಮಾಡಬೇಡಿ.ನನ್ನ ರಾಜಕೀಯ ನಿವೃತ್ತಿ ಬಗ್ಗೆ ಎಲ್ಲೂ ಹೇಳಿಕೆ ಕೊಟ್ಟಿಲ್ಲ. ಜನರು ಎಲ್ಲಾ ನನ್ನ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದಾರೆ, ಅವರಿಗೆ ಜವಬ್ದಾರಿ ಕೊಟ್ಟು ಅಮೇಲೆ ನಿವೃತ್ತಿಯಾಗುತ್ತೇನೆ ಎಂದು ಹೇಳಿದರು. ಇನ್ನೂ ಮಾಧ್ಯಮಗಳ ವಿರುದ್ಧ ಹರಿಹಾಯ್ದ ರಮೇಶ್ ಕುಮಾರ್. ನಿವೃತ್ತಿಯಾಗಲು ಫ್ರೀಯಾಗಿರುವ ಮನುಷ್ಯ ನಾನಲ್ಲ.ಜನರ ಪ್ರೀತಿಯ ಬಂಧನದಲ್ಲಿದ್ದೇನೆ, ಹೀಗೆ ಮಾಡಿದ್ರೆ ಮನಸ್ಸಿಗೆ ನೋವಾಗುತ್ತೆ. ನಾನು ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲವೆನ್ನುತ್ತಾ ಮಾತನ್ನು ಮುಗಿಸಿದ್ರು.