ಧಾರವಾಡ –
HDMC ಲೆಕ್ಕಪತ್ರ ವಿಭಾಗದ ಲೆಕ್ಕ ಅಧೀಕ್ಷಕ ಶೌಕತಲಿ ಸುಂಕದ ಅವರಿಗೆ ಎರಡನೇಯ ಬಾರಿಗೆ ಚುನಾವಣಾ ಆಯೋಗದಿಂದ ಶ್ಲಾಘನೀಯ ಗೌರವ – ದಕ್ಷ ಪ್ರಾಮಾಣಿಕ ಅಧಿಕಾರಿ ಕಾರ್ಯಕ್ಕೆ ಮೆಚ್ಚುಗೆ ಎರಡನೇಯ ಬಾರಿಗೆ ಅಭಿನಂದನಾ ಗೌರವ….
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಹುಬ್ಬಳ್ಳಿಯ ಲೆಕ್ಕಪತ್ರ ವಿಭಾಗದಲ್ಲಿ ಲೆಕ್ಕ ಅಧೀಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿ ರುವ ಶೌಕತಲಿ ಸುಂಕದ ಅವರಿಗೆ ಮತ್ತೆ ಚುನಾವಣಾ ಆಯೋಗವು ಶ್ಲಾಘನೀಯ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಿದೆ.ಹೌದು ಈ ಹಿಂದೆ ಚುನಾವಣೆ ಯಲ್ಲಿ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದಲ್ಲಿ ಮತದಾನ ಕುರಿತಂತೆ ಸಾರ್ವಜನಿಕರಿಗೆ ಜಾಗೃತಿಯನ್ನುಂಟು ಮಾಡಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಒಳ್ಳೇಯ ಕರ್ತವ್ಯ ನಿರ್ವಹಿಸಿದ ಇವರನ್ನು ಚುನಾವಣಾ ಆಯೋಗವು ಮತ್ತು ಜಿಲ್ಲಾಡಳಿತವು ಸುಂಕದ ಅವರನ್ನು ಅಭಿನಂದಿಸಿ ಗೌರವಿಸಿತ್ತು,

ಸಧ್ಯ 73ನೇ ವಿಧಾನ ಸಭಾ ಕ್ಷೇತ್ರದಲ್ಲಿ ಮತಗಟ್ಟೆಯ ಮಟ್ಟದಲ್ಲಿ ಅಧಿಕಾರಿಗಳೊಂದಿಗೆ ಉತ್ತಮವಾಗಿ ಸಮನ್ವಯ ಸಾಧಿಸಿ 2002 ರ ಮ್ಯಾಪಿಂಗ್ ಕಾರ್ಯದಲ್ಲಿ ತೋರಿರುವ ಕಾರ್ಯಕ್ಕೆ ಹಾಗೂ ಚುನಾವಣಾ ಆಯೋಗಗಳ ಮಾರ್ಗ ಸೂಚಿಗಳನ್ನು ಅಳವಡಿಸಿ ಕೊಂಡು ಮತದಾರರ ಪಟ್ಟಿ ಶುದ್ದಿಕರಣ ಹಾಗೂ ನಿಖರತೆಯ ಬಗ್ಗೆ ಕಾಲಮಿತಿಯೊಳಗೆ ಅನುಷ್ಠಾನಗೊಳಿಸುವ ಬಗ್ಗೆ ಕಾರ್ಯದಲ್ಲಿ ತೋರಿದ ಶ್ರೇಷ್ಠ ಸೇವೆಗಾಗಿ ಮತ್ತೊಮ್ಮೆ ಅಭಿನಂದನೆಯನ್ನು ಸಲ್ಲಿಸಿ ಗೌರವಿಸಿದೆ.
ರಾಷ್ಟ್ರೀಯ ಮತದಾರರ ದಿನಾಚರಣೆಯ ಹಿನ್ನಲೆಯಲ್ಲಿ ಧಾರವಾಡದಲ್ಲಿ ಜಿಲ್ಲಾಡಳಿತ ಮತ್ತು ಚುನಾವಣಾ ಆಯೋಗವು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶೌಕತಲಿ ಸುಂಕದ ಅವರಿಗೆ ಈ ಒಂದು ಅಭಿನಂದನಾ ಪತ್ರವನ್ನು ನೀಡಿ ಗೌರವಿಸಿ ದರು.ಧಾರವಾಡದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ದಲ್ಲಿ ಸುಂಕದ ಅವರನ್ನು ಅಭಿನಂದಿಸಿ ಎರಡನೇಯ ಬಾರಿಗೆ ಗೌರವಿಸಲಾಯಿತು.
ತಮ್ಮ ಕರ್ತವ್ಯದೊಂದಿಗೆ ಚುನಾವಣೆಯಲ್ಲಿ ಒಳ್ಳೇಯ ಸೇವೆ ಸಲ್ಲಿಸಿದ ಇವರ ಸೇವೆಯನ್ನು ಪರಿಗಣಿಸಿ ಈ ಒಂದು ಅಭಿನಂ ದನಾ ಪತ್ರವನ್ನು ನೀಡಿ ಗೌರವಿಸಿ ಶುಭಹಾರೈಸಲಾಯಿತು.ಇನ್ನೂ ಈ ಒಂದು ಗೌರವಕ್ಕೆ ಪಾತ್ರರಾದ ಶೌಕತಲಿ ಸುಂಕದ ಅವರನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ ರುದ್ರೇಶ ಘಾಳಿ,ಮುಖ್ಯಲೆಕ್ಕಾಧಿಕಾರಿ ಶಂಕರನಾಂದ ಬನಶಂಕರಿ, ಉಪ ಆಯುಕ್ತರಾದ ವಿಜಯಕುಮಾರ,ಲೆಕ್ಕ ಪತ್ರವಿಭಾಗದ ಸಿಬ್ಬಂದಿಗಳಾದ ಗುರುನಾಥ ತಾಳಿಕೋಟಿ,ಎಮ್ ಎ ಸಿಂಗೋಟಿ, ಮುಕುಂದ ಕಟ್ಟಿ,ಚೌಹಾನ್,ಉಮೇಶ ಸವಣೂರು ಸೇರಿದಂತೆ ಹಲವರು ಅಭಿನಂದಿಸಿ ಶುಭಹಾರೈಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..



