ಹುಬ್ಬಳ್ಳಿ –
ಕಸಹಾಕುವ ಸ್ಥಳದಲ್ಲಿಯೇ ಮತದಾನ ಜಾಗೃತಿ ಕಾರ್ಯಕ್ರಮದೊಂದಿಗೆ ರಾಜ್ಯಕ್ಕೆ ಮಾದರಿ ಯಾದ HDMC ಪೌರಕಾರ್ಮಿಕರು – ಪೌರ. ಕಾರ್ಮಿಕರ ವಿಶೇಷ ಜಾಗೃತಿ ಅಭಿಯಾನಕ್ಕೆ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ ಮೆಚ್ಚುಗೆ ಹೌದು
ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮತದಾನ ಕುರಿತಂತೆ ಎಲ್ಲೇಡೆ ಜಾಗೃತಿ ಕಾರ್ಯ ಕ್ರಮಗಳು ನಡೆಯುತ್ತಿವೆ.ಮತದಾನ ಹೆಚ್ಚಳ ಕುರಿತಂತೆ ವಿಶೇಷವಾದ ಕಾರ್ಯಕ್ರಮಗ ಳೊಂದಿಗೆ ಮತದಾರರಲ್ಲಿ ಬೇರೆ ಬೇರೆ ಕಾರ್ಯ ಕ್ರಮಗಳನ್ನು ಮಾಡಲಾಗುತ್ತಿದ್ದು ಈ ನಡುವೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು ವಿಶೇಷವಾದ ಕಾರ್ಯಕ್ರಮದ ಮೂಲಕ ಮತದಾನ ಹೆಚ್ಚಳ ಕುರಿತಂತೆ ಜಾಗೃತಿ ಮೂಡಿಸಿದ್ದಾರೆ.
ಹೌದು ಮತದಾನದ ಜಾಗೃತಿ ಹಿನ್ನಲೆಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿ 9 ರ ವ್ಯಾಪ್ತಿಯಲ್ಲಿನ ಗವಿ ಓಣಿ ಬಡಾವಣೆಯಲ್ಲಿ ಅನಧೀಕೃತವಾಗಿ ಕಸ ಹಾಕುತ್ತಿದ್ದ ಸ್ಥಳವನ್ನು ಪೌರಕಾರ್ಮಿಕರ ಸಹ ಯೋಗದೊಂದಿಗೆ ಸಂಪೂರ್ಣವಾಗಿ ಸ್ವಚ್ಛ ಗೊಳಿಸಿ ನಿರ್ಮೂಲನೆ ಮಾಡಲಾಯಿತು.ಕಸದ ಸ್ಥಳವನ್ನು ಸಂಪೂರ್ಣವಾಗಿ ಸ್ವಚ್ಚಗೊಳಿಸಿ ಅದೇ ಸ್ಥಳದಲ್ಲಿ ಮತದಾನ ಮಹತ್ವದ ಕುರಿತು ರಂಗೋ ಲಿಯನ್ನು ಬಿಡಿಸಿ ಸಾರ್ವಜನಿಕರಿಗೆ ತಿಳುವಳಿಕೆ ಯನ್ನು ಮೂಡಿಸಲಾಯಿತು.
ಎಲ್ಲೆಂದರಲ್ಲಿ ಕಸ ಚೆಲ್ಲದಂತೆ ಅರಿವು ಮೂಡಿ ಸುವುದರೊಂದಿಗೆ ಸುತ್ತ ಮುತ್ತಲಿನ ನಿವಾಸಿಗಳಿಗೆ ಮೇ7 ರಂದು ತಪ್ಪದೇ ಮತ ಚಲಾಯಿಸಿಬೇ ಕೆಂದು ಮನವರಿಕೆ ಮಾಡಲಾಯಿತು. ಪೌರ ಕಾರ್ಮಿಕರ ಮತದಾನ ಜಾಗೃತಿ ಅಭಿಯಾನಕ್ಕೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ ಈಶ್ವರ ಉಳ್ಳಾಗಡ್ಡಿ ರವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನೂ ಈ ಜಾಗೃತಿ ಕಾರ್ಯಕ್ರಮದಲ್ಲಿ ವಲಯ ಕಚೇರಿ 9ರ ಆರೋಗ್ಯ ನಿರೀಕ್ಷರಾದ ಕು ಯಲ್ಲಮ್ಮ ಚಳಗೇರಿ, ಇಂಟರ್ನ್ವಿ ವಿದ್ಯಾರ್ಥಿಗಳು, ಪೌರ ಕಾರ್ಮಿಕರು ಹಾಗೂ ಗವಿ ಓಣಿ ನಿವಾಸಿಗಳು ಸೇರಿದಂತೆ ಹಲವರು ಭಾಗವಹಿಸಿದ್ದರು ಎಂದು ಪಾಲಿಕೆಯ ಅಧಿಕಾರಿ ಗಣೇಶ ಅವರು ತಿಳಿಸಿದ್ದಾರೆ
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……