ಬಿಹಾರ –
ಬಿಹಾರದಲ್ಲಿ ಸರ್ಕಾರ ರಚನೆಯಾಗಿ ಇನ್ನೂ ಮೂರು ದಿನಗಳಾಗಿಲ್ಲ ಆಗವೇ ಬಿಹಾರ ಸರ್ಕಾರದ ವಿಕೇಟ್ ಪತವಾಗಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ರೊಂದಿಗೆ ಶಿಕ್ಷಣ ಸಚಿವರಾಗಿ ಅಧಿಕಾರ ಸ್ವೀಕಾರಪ ಮಾಡಿದ್ದ ಮೆವಾಲಾಲ್ ರಾಜೀನಾಮೆ ನೀಡಿದ್ದಾರೆ. ಕಳೆದ ಮೂರು ದಿನಗಳ ಹಿಂದೆಯಷ್ಟೇ ನಿತೀಶ್ ಕುಮಾರ್ ನೇತೃತ್ವದಲ್ಲಿ ಸರ್ಕಾರದಲ್ಲಿ ಬಿಹಾರ ಶಿಕ್ಷಣ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದ ಮೆವಾಲಾಲ್ ಚೌಧರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿಯಾಗಿ ಜಯ ಸಾಧಿಸಿ ಕೆಲವು ದಿನಗಳ ಹಿಂದೆ ಪ್ರಮಾಣ ವಚನ ಸ್ವೀಕರಿಸಿದ್ದ ಬಿಹಾರ ಸಿಎಂ ನಿತೀಶ್ ಕುಮಾರ್ ಗೆ ಶಾಕ್ ಎದುರಾಗಿದೆ.
ಬಿಹಾರದ ಮೈತ್ರಿ ಸರ್ಕಾರದ ಮೊದಲ ವಿಕೆಟ್ ಪತನವಾಗಿದ್ದು ಮೆವಾಲಾಲ್ ಚೌಧರಿ ರಾಜೀನಾಮೆ ನೀಡಿದ್ದಾರೆ.
ಮೆವಾಲಾಲ್ ಚೌಧರಿ ಈ ಹಿಂದೆ ಬಿಹಾರದಲ್ಲಿನ ಕೃಷಿ ವಿವಿ ಕುಲಪತಿಯಾಗಿದ್ದಾಗ ಪ್ರಾಧ್ಯಾಪಕರು, ಸಹಪ್ರಾಧ್ಯಾಪಕರ ನೇಮಕಾತಿಯಲ್ಲಿ ಅಕ್ರಮ ಎಸಗಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು, 2017ರಲ್ಲಿ ಮೆವಾಲಾಲ್ ವಿರುದ್ಧ FIR ದಾಖಲಾಗಿತ್ತು. ಸದ್ಯ, ಜೆಡಿಯು ಕೋಟಾದಲ್ಲಿ ಸಚಿವರಾಗಿದ್ದ ಮೆವಾಲಾಲ್ ಚೌಧರಿ ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು ರಾಜೀನಾಮೆ ಕೊಟ್ಟಿದ್ದಾರೊ ಅಥವಾ ಇನ್ಯಾವ ಕಾರಣಕ್ಕೇ ರಾಜಿನಾಮೆ ನೀಡಿದ್ದಾರೆ ಗೋತ್ತಿಲ್ಲ ಒಟ್ನಲ್ಲಿ ಬಿಹಾರ ಸರ್ಕಾರದಲ್ಲಿ ಆರಂಭದಲ್ಲಿಯೇ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ ಮೂರು ದಿನಗಳಲ್ಲಿಯೇ ಸರ್ಕಾರದ ಸಚಿವರೊಬ್ಬರು ರಾಜಿನಾಮೆ ನೀಡಿದ್ದು ಕುತೂಹಲ ಕೆರಳಿಸಿದೆ.