ಬೆಂಗಳೂರು –
FDA ಪ್ರಶ್ನೆ ಪತ್ರಿಕೆ ಸೋರಿಕೆ ಬೆನ್ನಲ್ಲೇ ಆರೋಪಿಗಳ ಬಂಧನವಾಗಿದೆ.ಕಾರ್ಯಾಚರಣೆ ಮಾಡಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.ಕೆಪಿಎಸ್ ಸಿ ನಡೆಸುವ ಎಫ್ ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಿಸಿಬಿ ಪೊಲೀಸರ ಕಾರ್ಯಾಚರಣೆ ನಡೆಸಿ ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣರಾದ ಆರೋಪಿಗಳನ್ನ ಬಂಧನ ಮಾಡಲಾಗಿದೆ.ಪೇಪರ್ ಲೀಕ್ ಮಾಡಿದ್ದ ಆರೋಪಿಗಳಾದ ರಾಚಪ್ಪ ,ಚಂದ್ರು ಸೇರಿ ಆರು ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮೊದಲು ಎಫ್ ಡಿಎ ಪರೀಕ್ಷೆಯ ಒಂದು ಪೇಪರನ್ನು ಪೊಲೀಸರು ವಶಕ್ಕೆ ಪಡೆದು ಆಯೋಗದ ಅಧಿಕಾರಿಗಳಿಗೆ ಕಳಿಸಿದ್ರು.ಆಯೋಗ ಇದೇ ಪತ್ರಿಕೆ ಎಂದು ತಿಳಿಸಿದಾಗ ಸೋರಿಕೆಯಾಗಿರೋದು ಗೊತ್ತಾಗಿದೆ.ಕೂಡಲೇ ಆರೋಪಿಗಳು ಪತ್ರಿಕೆ ಸೋರಿಕೆ ಮಾಡಿ ಮಾರಾಟ ಮಾಡಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಸಿಸಿಬಿ ಟೀಮ್ ಆರೋಪಿಗಳನ್ನು ಬಂಧಿಸಿದೆ.

ಸದ್ಯ ಕಾರ್ಯಾಚರಣೆ ಮಾಡಿದ ಸಿಸಿಬಿ ಪೊಲೀಸರು ಆರು ಜನರನ್ನು ವಶಕ್ಕೆ ತೆಗೆದುಕೊಂಡು ಅದರಲ್ಲಿ ಸಧ್ಯ ಇಬ್ಬರನ್ನು ಬಂಧಿಸಿದ್ದಾರೆ. 24 ಲಕ್ಷ ಹಣ ,3 ವಾಹನಗಳು ಸಿಸಿಬಿ ವಶಕ್ಕೆ ಪಡೆದಿದ್ದು,ಪೇಪರ್ ಲೀಕ್ ಆಗಿರುವ ಬಗ್ಗೆ ‘ಕೆಪಿಎಸ್’ ಸಿಗೆ ಮಾಹಿತಿ ನೀಡಿದ್ದಾರೆ.

ಅತ್ತ ಸಿಸಿಬಿ ಪೊಲೀಸರಿಂದ ಮಾಹಿತಿ ಬರುತ್ತಿದ್ದಂತೆ ಇತ್ತ ನಾಳೆ ನಡೆಯಬೇಕಿದ್ದ FDA ಪರೀಕ್ಷೆಯನ್ನು ಲೋಕಸೇವಾ ಆಯೋಗ ಮುಂದೂಡಿದೆ.

ಒಟ್ಟು 1114 ಹುದ್ದೆ ಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ.3 ಲಕ್ಷಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದರು. ಏನೇ ಆಗಲಿ ಇನ್ನೇನು ದಿನ ಬೆಳಗಾದರೆ ಪರೀಕ್ಷೆ ಇತ್ತು ಎಲ್ಲಾ ಸಿದ್ದತೆ ನಡೆಸಿದ್ದರು ಇವೆಲ್ಲದರ ನಡುವೆ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.