ದಾವಣಗೇರೆ –
ಸಾಮಾನ್ಯವಾಗಿ ನಮಗೆ ಯಾರಾದರೂ ಏನಾದರೂ ಮಾಡಿದರು ಕೂಡಾ ಮೊದಲು ಅವರೊಂದಿಗೆ ಜಗಳ ಮಾಡುತ್ತೇವೆ ಇಲ್ಲವೇ ಹೊಡೆದು ಬಡಿಯುತ್ತವೇ ಕೊನೆಗೆ ಪೊಲೀಸರಿಗೆ ದೂರನ್ನು ದಾಖಲು ಮಾಡುತ್ತೇವೆ.ಇದು ಸರ್ವೆ ಸಾಮಾನ್ಯದ ಮಾತು ವಿಚಾರವಾದರೆ ಇಲ್ಲೊಬ್ಬ ಹಿರಿಯ ಶಿಕ್ಷಕರೊಬ್ಬರು ಕ್ಲಾಸ್ ರೂಮ್ ನಲ್ಲಿ ಪಾಠವನ್ನು ಮಾಡುತ್ತಿರುವಾಗ ನಾಲ್ಕೈದು ವಿದ್ಯಾರ್ಥಿಗಳು ಕೀಟಲೆ ಮಾಡಿದ್ದಾರೆ.
ಪಾಠವನ್ನು ಕೇಳದೆ ಅವರನ್ನು ಕಾಡಿಸಿ ಕೀಟಲೆ ಮಾಡಿದ್ದಾರೆ ಇದ್ಯಾವುದನ್ನು ಗಮನಿಸಿದೇ ನಿರ್ಲಕ್ಷ್ಯವನ್ನು ಮಾಡಿದ ಮೇಷ್ಟ್ರು ತಮ್ಮ ಪಾಡಿಗೆ ತಾವು ಪಾಠವನ್ನು ಮಾಡಿದ್ದಾರೆ.
ಈ ಒಂದು ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.ಹೌದು ದಾವಣಗೆರೆ ಚನ್ನಗಿರಿಯ ನಲ್ಲೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಈ ಒಂದು ಘಟನೆ ನಡೆದಿದ್ದು ಹಿರಿಯ ಹಿಂದಿ ಶಿಕ್ಷಕರಾಗಿರುವ ಪ್ರಕಾಶ್ ಅವರಿಗೆ ಹೀಗೆ ಪುಂಡ ವಿದ್ಯಾರ್ಥಿಗಳು ಮಾಡಿದ್ದರು. ಇನ್ನೂ ಕ್ಲಾಸ್ ರೂಮ್ ನಲ್ಲಿ ವಿದ್ಯಾರ್ಥಿಗಳು ತಮಗೆ ಇಷ್ಟೇಲ್ಲಾ ಮಾಡುತ್ತಿ ದ್ದರು
ಇಷ್ಷಾದರೂ ಕೂಡಾ ಈ ಪ್ರಕಾಶ್ ಮೇಷ್ಟ್ರು ಸುಮ್ಮನಿರಲು ಒಂದು ಕಾರಣವಿದೆ ಏನು ತಿಳಿಯಲಾರದೇ ಸಮಾಧಾನ ವನ್ನು ತಗೆದುಕೊಂಡು ಸುಮ್ಮನಿದ್ದರೆ ಸುಮ್ಮನರಾಗು ತ್ತಾರೆ ಎಂದುಕೊಂಡು ಸುಮ್ಮನಿದ್ದಾರೆ.ಹೃದಯ ಕಾಯಿಲೆಯಿಂದ ಬಳಲುತ್ತಿದ್ದಾರೆ.ಇನ್ನೂ ನಿವೃತ್ತಿಗೆ ಇನ್ನೇನು ಒಂದೇ ವರ್ಷ ಇದೆ ಹೀಗಾಗಿ ಅವರ ಸಹವಾಸ ಪೊಲೀಸ್ ದೂರುಯಾಕೇ ಬೇಕು ಎಂಬ ಕಾರಣಕ್ಕಾಗಿ
ಇದರೊಂದಿಗೆ ಹಿರಿಯ ಶಿಕ್ಷಕರಾಗಿರುವ ಇವರು ಯಾವಾಗ ಲೂ ತಾವಾಯಿತು ತಮ್ಮ ಕೆಲಸ ಆಯಿತು ಎಂದುಕೊಂಡು ಶಾಲೆ ಮನೆ ಇರತ್ತಾರೆ ಹೀಗಾಗಿ ತಿಳಿಯಲಾರದೇ ಮಕ್ಕಳು ಏನೋ ಮಾಡಿದ್ದಾರೆ ಎಂದುಕೊಂಡಿ ಇದ್ದಾರೆ.ಗುರು ದೇವ ರಿಗೆ ಸಮಾನ.ಅವರಿಗೆ ತಲೆ ಬಾಗಿ ನಮಿಸಿದರೆ ಸರಸ್ವತಿಯ ಆಶೀರ್ವಾದ ವಿದ್ಯಾರ್ಥಿಗೆ ಸಿಗದೆ ಇರದು.ಆದ್ರೆ ಅಂಥ ಮಹಾನ್ ಗುರುಗಳನ್ನೇ ಅವಮಾನಿಸೋದು ಎಷ್ಟರಮ ಟ್ಟಿಗೆ ಸರಿ ಅಲ್ವಾ.
ವಿದ್ಯಾರ್ಥಿಗಳಲ್ಲಿ ತುಂಟತನ ಇರೋದು ಸಹಜ.ಆದ್ರೆ ಆ ತುಂಟತನ ಶಿಕ್ಷಕರಿಗೆ ಖುಷಿ ಕೊಡಬೇಕೆ ವಿನಃ ನೋವು ಕೊಡಬಾರದು.ಈ ಶಾಲೆಯ ವಿದ್ಯಾರ್ಥಿಗಳು ಮಾಡಿದ ತಪ್ಪು ಅಂತಿದ್ದಲ್ಲ ವಿಡಿಯೋ ನೋಡಿದ ಪ್ರತಿಯೊಬ್ಬರಿಗೂ ಕೋಪ ನೆತ್ತಿಗೇರುತ್ತೆ.
ಯಾಕಂದ್ರೆ ಹಿರಿಯ ಶಿಕ್ಷಕರೊಬ್ಬರಿಗೆ ಮಾಡ ಬಾರದ ರೀತಿಯಲ್ಲಿ ಅವಮಾನ ಮಾಡಿದ್ದಾರೆ.ಡಸ್ಟ್ ಬಿನ್ ಶಿಕ್ಷಕರ ತಲೆಗೆ ಹಾಕಿದ್ದಾರೆ ಕುಣಿದು ಕೀಟಲೆ ಮಾಡಿದ್ದಾರೆ.ಇಷ್ಟೆಲ್ಲ ಮಾಡಿದ್ರು ಆ ಶಿಕ್ಷಕ ಪ್ರಕಾಶ್ ಎಂಬುವವರಿಗೆ ಮಾತ್ರ ಮಕ್ಕಳ ಮೇಲೆ ಕೋಪ ಬಂದಿಲ್ಲ ಸಮಾಧಾನವಾಗಿಯೇ ಮಾತನಾಡಿದ್ದಾರೆ ಹತ್ತನೇ ತರಗತಿ ನಾಲ್ವರು ವಿದ್ಯಾರ್ಥಿಗ ಳಿಂದ ಈ ಘಟನೆ ನಡೆದಿದೆ.
ಶಿಕ್ಷಕ ಪ್ರಕಾಶ್ ಗೆ ರಿಟೈಡ್ ಆಗಲು ಇನ್ನು ಒಂದು ವರ್ಷ ಬಾಕಿ ಇದೆ. ಜೊತೆಗೆ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಯೂ ಇದೆ. ಹೀಗಿರುವಾಗ ಮಕ್ಕಳು ಈ ರೀತಿಯೆಲ್ಲಾ ಮಾಡೋದಾ.ವಿಡಿಯೋ ವೈರಲ್ ಆಗುತ್ತಿದ್ದಂತೆ ಭಾರೀ ಆಕ್ರೋಶ ವ್ಯಕ್ತವಾಗಿದೆ.ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ.
ವಿದ್ಯಾರ್ಥಿಗಳನ್ನ ಅಮಾನತು ಮಾಡ ಬೇಕೆಂಬ ಮಾತು ಗಳು ಕೇಳಿ ಬಂದಿತ್ತು ಈ ಬೆನ್ನಲ್ಲೇ ವಿದ್ಯಾರ್ಥಿ ಗಳೆಲ್ಲಾ ಆ ಶಿಕ್ಷಕನ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ.ಗುರುಗಳ ಮನಸ್ಸು ಗೊತ್ತಲ್ವಾ ಅವರದು ಕ್ಷಮಿಸಿದ್ದಾರೆ ಆದ್ರೆ ಯಾವುದೇ ವಿದ್ಯಾರ್ಥಿಗಳು ಮತ್ತೆಂದು ಇಂಥ ತಪ್ಪನ್ನು ಮಾಡದಿರಿ.