ಕುಂದಗೋಳ –
ಕಲ್ಲುನಾಗರ ಹಾವಿಗೆ ಹಾಲು ಎರೆಯುವುದು ನಿಜ ಹಾವು ಕಂಡರೆ ಕಲ್ಲಿನಲ್ಲಿ ಹೊಡೆದು ಸಾಯಿಸುವುದು ನಾವು ನೋಡಿದ್ದೇವೆ ಆದರೆ ಹಾವುಗಳನ್ನು ಕಂಡರೆ ಅವುಗಳನ್ನು ರಕ್ಷಿಸಿ ಕಾಡುಗಳಿಗೆ ಬಿಡುವಂತಹ ವ್ಯಕ್ತಿ ಗಳನ್ನು ನಾವು ಕಾಣುವುದು ವಿರಳ ಅಂತಹದೇ ಒಂದು ಅಪರೂಪದ ಘಟನೆ ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದ ಕುಮಾರಸ್ವಾಮಿ ಗುರುಮಠ ಅವರ ಮನೆಯ ಹಿತ್ತಿಲಿನಲ್ಲಿ ನಡೆದಿದೆ.

ಹೌದು ಕಳೆದ ಸುಮಾರು ದಿನಗಳಿಂದ ಕಾಣಿಸಿಕೊ ಳ್ಳುತ್ತಿದ್ದ ಎರಡು ಮಾರು ನಾಗರಹಾವು ಇಂದು ಸಂಜೆ ತಂಪಾದ ಗಾಳಿ ಗೆ ಹಿತ್ತಿಲಿನಲ್ಲಿ ಹೆಡೆ ತಗೋದು ಕಂಡು ಗಾಬರಿಗೊಂಡ ಮನೆಯವರು ಹಾಗೂ ಅಕ್ಕ ಪಕ್ಕದ ಜನತೆ ಆತಂಕ ಮನೆಮಾಡಿತ್ತು ಇದೇ ಸಮ ಯಕ್ಕೆ ಗ್ರಾಮದಲ್ಲಿ ಕೋವಿಡ್ 19 ಕರ್ತವ್ಯದ ಮೇಲೆ ಗ್ರಾಮಕ್ಕೆ ಆಗಮಿಸಿದ ಹಾವೇರಿಯ ಜಿಲ್ಲಾ ಪೊಲೀಸ ಇಲಾಖೆಯ ಹೆಡ್ ಕಾನ್ಸ್ಟೇಬಲ್ ರಮೇಶ್ ಡoಬಳ್ಳಿ ಆಗಮಿಸಿದಾಗ ನಾಗರಹಾವು ಕಂಡು ತಕ್ಷಣವೇ ಹಾವನ್ನು ರಚಿಸಿ ಸುರಕ್ಷಿತವಾಗಿ ಡಬ್ಬಿಯ ಒಳಗೆ ಹಾಕಿಕೊಂಡು ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ನಾಗರಹಾವು ರಕ್ಷಿಸುವುದರ ಜೊತೆ ಗುರು ಮಠ ಹಾಗೂ ಅಕ್ಕಪಕ್ಕದ ಜನತೆಯಲ್ಲಿ ಆತಂಕ ದೂರ ಮಾಡಿದ್ದಾರೆ

ಇನ್ನೂ ಇವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೋವಿಡ್ ತಡೆಗಟ್ಟಲು ಲಾಕ್ ಡೌನ್ ಹಿನ್ನೆಲೆಯಲ್ಲಿ ಕರ್ತವ್ಯದ ಮೇಲೆ ಆಲದಕಟ್ಟಿ ಗ್ರಾಮದ ಆಗಮಿಸಿದ ಸಂದರ್ಭದಲ್ಲಿ ಕರ್ತವ್ಯದ ಜೊತೆ ನಾಗರ ಹಾವನ್ನು ರಕ್ಷಿಸಿ ಜನರ ಆತಂಕ ದೂರ ಮಾಡಿದ ಪೊಲೀಸ್ ಕಾನ್ಸ್ಟೇಬಲ್ ರಮೇಶ್ ಡoಬ ಳ್ಳಿ ಅವರು ಸುಮಾರು 20 ವರ್ಷಗಳಿಂದ ಆರು ಸಾವಿರಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಅವುಗ ಳನ್ನು ರಕ್ಷಿಸಿ ನಿರ್ಜನ ಪ್ರದೇಶ ಹಾಗೂ ಕಾಡುಗಳಿಗೆ ಹೋಗಿ ಬಿಟ್ಟು ಬರುವಂತಹ ಕೆಲಸ ಕಾರ್ಯ ಮಾಡ ತಾ ಇದ್ದಾರೆ
ಮಾಡುವುದರ ಜೊತೆ ಪೊಲೀಸ್ ಇಲಾಖೆ ಯಲ್ಲಿ ಸೇವೆ ಮಾಡುತ್ತಿರುವುದು ಸಾರ್ವಜನಿಕರ ಮೆಚ್ಚು ಗೆಗೆ ಪಾತ್ರರಾಗಿದ್ದಾರೆ ಇವರು ಹಾವೇರಿ ಜಿಲ್ಲೆಯಲ್ಲಿ ಸ್ನೇಕ್ ರಮೇಶ್ ಎಂದೇ ಪ್ರಖ್ಯಾತಿ ಪಡೆದಿದ್ದಾರೆ.