ಬೆಂಗಳೂರು –
ಮನೆಯ ಟೆರೇಸ ಮೇಲಿಂದ ಬಿದ್ದು ಶಿಕ್ಷಕ ರೊಬ್ಬರು ಮೃತಪಟ್ಟಿರುವ ಘಟನೆ ಮರ್ಣಿ ಗ್ರಾಮದಲ್ಲಿ ನಡೆದಿದೆ.ಮನೆಯ ಟೆರೇಸಿಯಿಂದ ಕೆಳಗೆ ಬಿದ್ದು ಮುಖ್ಯ ಶಿಕ್ಷಕರೊಬ್ಬರು ಮೃತಪಟ್ಟ ಘಟನೆ ಮರ್ಣೆ ಗ್ರಾಮದಲ್ಲಿ
ರಾತ್ರಿ ವೇಳೆ ಈ ಒಂದು ಘಟನೆ ನಡೆದಿದೆ. ಮೃತರನ್ನು ಎಣ್ಣೆಹೊಳೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕ ಸುಂದರ (55) ಎಂದು ಗುರುತಿಸಲಾಗಿದೆ.ಇವರು ರಾತ್ರಿ ಮನೆಯ ಟೆರೇಸ್ ಮೇಲೆ ಮಲಗಿದ್ದು ಬೆಳಗ್ಗೆ ನೋಡುವಾಗ ಮನೆಯ ಅಂಗಳದ ಬಳಿ ಬಿದ್ದಿರುವುದು ಕಂಡುಬಂದಿದೆ.
ರಾತ್ರಿ ವೇಳೆ ನಿದ್ರೆಯ ಮಂಪರಿನಲ್ಲಿಯೋ ಅಥವಾ ಇನ್ಯಾವುದೋ ಕಾರಣದಿಂದ ಎದ್ದು ನಡೆದಾಡುವಾಗ ಆಯತಪ್ಪಿ ಟೆರೇಸಿನಿಂದ ಕೆಳಗೆ ಬಿದ್ದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು……