ಗೋಟುರ್ —
ಸಾಮಾನ್ಯವಾಗಿ ಪಾರ್ಟಿ ಮಾಡಿ ಇಲ್ಲವೇ ಪರಸ್ಪರ ಸಿಹಿ ಕೊಟ್ಟು ಇಲ್ಲವೇ ಗ್ರಿಟಿಂಗ್ಸ್ ಕಾರ್ಡ್ ಕೊಟ್ಟು ಇಲ್ಲ ಏನಾದರೂ ಮಾಡಿ ಹೊಸ ವರ್ಷದ ಶುಭಾಶಯ ಕೋರೊ ದನ್ನು ನೋಡಿದ್ದೇವೆ ಕೇಳಿದ್ದೇವೆ ಆದರೆ ಇಲೊಬ್ಬ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ಮಕ್ಕಳಿಗೆ ವಿಶೇಷವಾಗಿ ಗಿಪ್ಟ್ ನೀಡಿ ಹೊಸ ವರ್ಷದ ಶುಭಾಶಯ ಕೋರಿದ್ದಾರೆ
ಹೌದು ಗೋಟುರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಲೆಯ ಶಿಕ್ಷಕಿ ಶ್ರೀಮತಿ ಹೇಮಾವತಿ ನರೋಣಿ ಅವರು ಶಾಲಾ ಮಕ್ಕಳಿಗೆ ಹೊಸವರ್ಷದ ಶುಭಾಶಯಗಳು ಸಲ್ಲಿಸು ವುದರ ಜೊತೆಗೆ 7 ನೇ ತರಗತಿ ಮಕ್ಕಳಿಗೆ ಇಂಗ್ಲಿಷ್ ಕಲಿಕೆಗೆ ಅನುಕೂಲವಾಗುವುದುಕ್ಕಾಗಿ ಸ್ವಂತ ಖರ್ಚಿನಲ್ಲಿ ಡಿಕ್ಷನರಿ ಪುಸ್ತಕವನ್ನು ನೀಡಿದ್ದಾರೆ.
7 ನೇ ತರಗತಿಯ ಎಲ್ಲಾ ಮಕ್ಕಳಿಗೆ ಇವುಗಳನ್ನು ನೀಡಿ ಕಲಿಕೆಗೆ ನೆರವಾದರು.ಇನ್ನೂ ಗುರುಮಾತೆ ಈ ಒಂದು ಕಾರ್ಯಕ್ಕೆ ಶಾಲೆಯ ಮುಖ್ಯಗುರುಗಳು ಹಾಗೂ ಸಿಬ್ಬಂದಿ ವರ್ಗ ಮತ್ತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪರವಾಗಿ ತುಂಬು ಹೃದಯದ ಕೃತಜ್ಞತೆಗಳು ಮತ್ತು ಅಭಿನಂದನೆಗಳನ್ನು ಸಲ್ಲಿಸಲಾಯಿತು.