ಬೆಂಗಳೂರು –
ಕೊರೊನಾ ಎರಡನೇಯ ಅಲೆಯಿಂದ ಮತ್ತೆ ರಾಜ್ಯದಲ್ಲಿ ಕೆಲ ವರ್ಗಗಳನ್ನು ಈಗಾಗಲೇ ಬಂದ್ ಮಾಡಲಾಗಿದೆ. ಇನ್ನೂ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಶುರುವಾಗಿದ್ದು ಹೀಗಾಗಿ ಸೋಂಕಿನ ಆತಂಕ ಎಲ್ಲರಲ್ಲೂ ಮನೆ ಮಾಡುತ್ತಿದ್ದು ಹೀಗಾಗಿ ಏಪ್ರಿಲ್ 20ರ ವರೆಗೆ ಶಾಲೆಗಳಿಗೆ ರಜೆ ನೀಡಲಾಗಿದೆ.

ಸದ್ಯ ರಾಜ್ಯದಲ್ಲಿ ಪ್ರತಿದಿನ ಸರಾಸರಿ 5 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆ ಯಲ್ಲಿ ಶಾಲೆಗಳನ್ನು ಪ್ರಾರಂಭ ಮಾಡುವುದು ಬೇಡ ಎಂದು ತಜ್ಞರ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ ಎನ್ನಲಾಗುತ್ತಿದೆ.

ಈ ಹಿಂದೆಯೂ ಸರ್ಕಾರ, ತಜ್ಞರ ಸಲಹೆ ಮೇರೆಗೆ ಎರಡು ವಾರ ಶಾಲೆಗಳಿಗೆ ರಜೆ ನೀಡಿತ್ತು. ಸದ್ಯ ದಿನ ದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿ ರುವ ಹಿನ್ನೆಲೆಯಲ್ಲಿ ರಜೆ ಅವಧಿ ವಿಸ್ತರಿಸಲು ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

20 ರ ವರೆಗೆ ನೀಡಿರುವ ರಜೆಯನ್ನು ಏಪ್ರೀಲ್ ಅಂತ್ಯದವರೆಗೂ ವಿಸ್ತರಣೆ ಮಾಡಬೇಕು. ಸೋಂಕು ಹತೋಟಿಗೆ ಬರುವವರೆಗೂ ಶಾಲೆಗಳನ್ನು ತೆರೆಯಬಾರದು. ಈ ಸಂದರ್ಭದಲ್ಲಿ ಶಾಲೆಗಳನ್ನು ತೆರೆದರು ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಳವಾಗಬ ಹುದು. 10 ಮತ್ತು 12 ನೇ ತರಗತಿಗಳಿಗೆ ಈಗ ನಡೆ ಯುತ್ತಿರುವಂತೆಯೇ ಶಾಲೆ ನಡೆಸಬೇಕು ಎಂದು ತಜ್ಞರು ಹೇಳಿದ್ದಾರೆ.

1 ರಿಂದ 9ನೇ ತರಗತಿಯವರೆಗಿನ ಶಾಲೆಗಳನ್ನು ಯಾವುದೇ ಕಾರಣಕ್ಕೂ ಸದ್ಯ ತೆರೆಯಬಾರದು. ಪರೀಕ್ಷೆಗಳನ್ನು ನಡೆಸಬೇಕಾದರು ಆನ್ ಲೈನ್ ಮೂಲಕ ನಡೆಸಬೇಕು. ಅಲ್ಲದೇ, ದೂರದರ್ಶನ, ಆನ್ ಲೈನ್, ಯೂಟ್ಯೂಬ್ ಮೂಲಕ ತರಗತಿ ಗಳನ್ನು ನಡೆಸಬೇಕು ಎಂದು ತಜ್ಞರು ಹೇಳಿದ್ದಾರೆ.