ಬೆಂಗಳೂರು –
ಹೋಗಲೇಬೇಕಾ NPS ಹೋರಾಟಕ್ಕೆ ಎನ್ನು ವವರಿಗೆ ಉತ್ತರ ಇಲ್ಲಿದೆ – ಮಾಡು ಇಲ್ಲವೆ ಮಡಿ ಹೋರಾಟಕ್ಕೆ ಬನ್ನಿ ಪಾಲ್ಗೊಂಡು ಯಶಸ್ವಿ ಗೊಳಿಸಿ ಶಕ್ತಿ ತುಂಬಿ ಹೌದು ಇತಿಹಾಸದ ಪ್ರತಿ ಯೊಂದು ಗುರುತರ ಬದಲಾವಣೆಗೆ ಮತ್ತು ಕ್ರಾಂತಿಗೆ ಕಾರಣವೇ ಬಹುಸಂಖ್ಯಾತ ಜನ ಸಮೂಹದ ಧ್ವನಿ ರಾಜಪ್ರಭುತ್ವ, ಸರ್ವಾಧಿಕಾ ರದ ಸರ್ಕಾರಗಳಿದ್ದಾಗಿಯೂ ಕೂಡಾ ಜನ ಸಾಮಾನ್ಯರ ಒಗ್ಗಟ್ಟಿನ ಧ್ವನಿಗಳೇ ಕ್ರಾಂತಿಯ ಕಹಳೆಯಾಗಿ ಮಾರ್ಪಟ್ಟು ಹೊಸದಾದ ಬದಲಾವಣೆಯಾಗಿದೆ
ಶಿಕ್ಷಕರಾದ,ನೌಕರರಾದ ನಾವುಗಳೆಲ್ಲರೂ ಓದಿದ್ದೇವೆ ಅರ್ಥೈಸಿಕೊಂಡಿದ್ದೇವೆ ಅದರ ಕುರಿತಾಗಿ ಸಾಕಷ್ಟು ಮಾತನಾಡುತ್ತೇವೆ ಗ್ರೀಕ್ ನ ಕ್ರಾಂತಿ,ಪ್ರಾನ್ಸ್ ನ ಕ್ರಾಂತಿ, ಚೀನಾ ಕ್ರಾಂತಿ ಮತ್ತು ನಮ್ಮದೇ ದೇಶದ ಸ್ವಾತಂತ್ರ್ಯದ ಕ್ರಾಂತಿಯನ್ನು ಒಮ್ಮೆ ಕಣ್ಮುಂದೆ ಕಟ್ಟಕಟ್ಟಿಕೊಳ್ಳಲೇಬೇಕಾದ ಕಾಲಘಟ್ಟದಲ್ಲಿದ್ದೇವೆ
ಹನಿ ಹನಿ ಕೂಡಿದರೆ ಹಳ್ಳ ಪ್ರತಿಯೊಬ್ಬ ನೌಕರ ಕೂಡಿ ಬಲ ತುಂಬಿದಾಗಲೇ ಎನ್‌ಪಿಎಸ್ ವಿರುದ್ಧ ಧ್ವನಿ ಬಹುದೊಡ್ಡ ಕಹಳೆಯಾಗಿ ಮಾರ್ಧನಿಸು ತ್ತದೆ ಫ್ರೀಡಂ ಪಾರ್ಕ್ ಬೆಂಗಳೂರಿನಲ್ಲಿ ಕಹಳೆ ದೊಡ್ಡ ದನಿಯಾಗಿ ಮೊಳಗಿದಾಗ ಮಾತ್ರ ಸರ್ಕಾರಿ ನೌಕರರ ಕೂಗು ಆಳುವ ಜಾಣ ಕುರುಡನ ಕಿವಿಯ ತಮಟೆ ಮುಟ್ಟುವುದು ಖಂಡಿತ ಇಲ್ಲದಿದ್ದರೆ ಸಮಾಜದಲ್ಲಿ ಮತ್ತು ಸರ್ಕಾರದ ದೃಷ್ಟಿಯಿಂದ ನಗೆಪಾಟಲಂತೂ ತಪ್ಪಿದ್ದಲ್ಲ
ಕಳೆದ 6 ತಿಂಗಳಿನಿಂದ ಎನ್‌ಪಿಎಸ್ ವಿರುದ್ಧದ ಹೋರಾಟ ತೀವ್ರ ಕಾವು ಪಡೆದಿದೆ ಕಬ್ಬಿಣ ಪೂರ್ಣವಾಗಿ ಕಾದು ಕೆಂಪಾಗಿದೆ.ಈಗೇನಿಲ್ಲ ಪ್ರತಿಯೊಬ್ಬ ನೌಕರ ಕೇವಲ ಒಂದು ಸುತ್ತಿಗೆಯ ಏಟು ಕೊಡಬೇಕಿದೆ ಅಷ್ಟೇ ಒಂದೇ ಒಂದು ಏಟು ಓ,ಪಿ,ಎಸ್ ಎಂಬ ಸುಂದರ ನಾಳೆಗಳ ಆಕೃತಿ ಮಾಡಲು ಕಾರಣವಾಗುತ್ತದೆ.
ರಾಜ್ಯ ಹಂತದಲ್ಲಿ ನಿಜವಾದ ನಾಯಕ ಶಾಂತರಾಮ್ ಮತ್ತು ಅವರ ತಂಡ ಕಷ್ಟಪಟ್ಟಿದ್ದು ಅಷ್ಟಿಷ್ಟಲ್ಲ ಅವರ ಕೈ ಬಲಪಡಿಸಬೇಕಿದೆ ಪ್ರತಿ ಯೊಬ್ಬ ನೌಕರ ಇದೆ ಡಿಸೆಂಬರ್ 18 ರ ಸಂಜೆ ಬೆಂಗಳೂರಿನತ್ತ ಖಂಡಿತವಾಗಿಯೂ ಪಯಣ ಬೆಳೆಸಲು ಇವತ್ತೆ ಬ್ಯಾಗ ಸಿದ್ಧಪಡಿಸಬೇಕಿದೆ ದಿನನಿತ್ಯವೂ ಪ್ರತಿಯೊಬ್ಬ ನೌಕರರಬದುಕ ಲ್ಲಿಯೂ ಪರಿತಪಿಸುವ ಕ್ಷುಲ್ಲಕ ಕಾರಣಗಳನ್ನು ಬದಿಗೊತ್ತಿ ಇಚ್ಛಾಶಕ್ತಿಯ ಗದೆಯೆತ್ತಿ ಬೆಂಗಳೂ ರಿಗೆ ಹೋಗಲೇಬೇಕಿದೆ
ಪುರುಷ,ನೌಕರೂ,ಮಹಿಳಾ ನೌಕರ ಎಂಬ ಭೇದ NPS ಗೆ ಇಲ್ಲ ಹಾಗಾದರೆ ಹೋರಾಟಕ್ಕೆ ಏಕೆ ಈ ಬೇಧ ಎಲ್ಲಾ ಮಹಿಳಾ ನೌಕರರು ಇಲ್ಲದ ಕಾರಣ ಗಳನ್ನು ಹೇಳಿ ಹೋರಾಟದಿಂದ ವಿಮುಕರಾಗಬಾ ರದು ಅಂಗನವಾಡಿ, ಆಶಾ,ಬಿಸಿ ಊಟದ ಕಾರ್ಯಕರ್ತರು ಮಹಿಳೆಯರಲ್ಲವೇ ಹೋರಾಟಕ್ಕೆ ಅವರೇ ನಮಗೆ ಮಾದರಿಯಾಗ ಬೇಕು ಚಿಕ್ಕ ಗೌರವಧನ ಪಡೆಯುವ ಅವರಿಗಿಲ್ಲದ ಸಮಸ್ಯೆ ಕೈ ತುಂಬಾ ಸಂಬಳ ಪಡೆಯುವ ನಮಗಿದೆಯೇ ಬೆಂಗಳೂರಿನ ಪ್ರೀಡಂ*
ಪಾರ್ಕ್ ನಲ್ಲಿ ಮಹಿಳಾ ಮಣಿಗಳ ಧ್ವನಿಗೆ ಸರಕಾರಮಣಿಯಲೇಬೇಕು ಮನಕರಗಿಸಲೇ ಬೇಕು ಈ ಎನ್‌ಪಿಎಸ್ ಹೋಗಲಾಡಿಸುವ ಹೋರಾಟದಲ್ಲಿ ಪುರುಷ ನೌಕರರಿಗಿಂತ ಮಹಿಳಾ ನೌಕರರೇ ಹೆಚ್ಚು ಕಾರಣವಾಗಬೇಕಿದೆ ಮತ್ತು ಬಲ ತುಂಬ ಬೇಕಾಗಿದೆ ಹಾಗಂತ ಪುರುಷ ನೌಕರರು ಮನೆಯಲ್ಲಿ ಕುಳಿತುಕೊಳ್ಳಬೇಕಾ ಎಂಬ ಪ್ರಶ್ನೆ ಈಗ ಅಪ್ರಸ್ತುತ.
ರಾಜ್ಯದ ಪ್ರತಿಯೊಬ್ಬ ಪುರುಷ ನೌಕರ ಭಾಗವ ಹಿಸಿ ಎನ್‌ಪಿಎಸ್ ವಿರುದ್ಧದ ತನ್ನ ಬದ್ಧತೆಯನ್ನು ಪ್ರದರ್ಶಿಸಲೇಬೇಕು ಸಬೂಬುಗಳನ್ನು ಹೇಳಿ ಕೈ ಚೆಲ್ಲಿ ಕುಳಿತಿದ್ದೆ ಆದರೆ ನಮಗೆ ನಾವೇ ಮಾಡಿ ಕೊಂಡ ಮೋಸವಿದ್ದಂತೆ
ರಾಜ್ಯ ಘಟಕ, ಜಿಲ್ಲಾ ಘಟಕ, ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು ಆರು ತಿಂಗಳಿನಿಂದ ಕಷ್ಟ ಪಟ್ಟು ಸಂಘಟಿಸಿರುವುದನ್ನು ಪದಗಳಲ್ಲಿ ಹೇಳಲು ಸಾಧ್ಯವೇ ಇಲ್ಲ ಅವರಿಗೂ ಕುಟುಂಬ ವಿದೆ,ಆರೋಗ್ಯವಿದೆ, ಹಣಕಾಸಿನ ಅಡಚಣೆ ಇದೆ, ಬೇರೆ ಬೇರೆ ಜವಾಬ್ದಾರಿಗಳಿವೆ.ಮನೆಯಲ್ಲಿ ಪುಟ್ಟ ಮಕ್ಕಳಿವೇ,ವಯೋವೃದ್ದ ಕಾಯಿಲೆ ಪೀಡಿತ ತಂದೆ ತಾಯಿಗಳಿದ್ದಾರೆ ಎಂಬ ಅರಿವು ನಮಗಿಲ್ಲವೇ?*
ಆದರೂ ಅವರಷ್ಟೇ ಎತ್ತರದ ಮರಕ್ಕೆ ಕಲ್ಲು ಬೀಸಬೇಕೆ ಒಂದು ಕಲ್ಲು ಎಷ್ಟು ಬಾರಿ ಎಸೆದರು ಹಣ್ಣು ಬೀಳದು ಹತ್ತಾರು ಕಲ್ಲುಗಳು ಏಕಕಾಲಕ್ಕೆ ಬೀಸಿದಾಗ ಒಂದಾದರೂ ಹಣ್ಣನ್ನು ಉದುರಿ ಸುತ್ತದೆ ಉದುರಿದ ಹಣ್ಣು ಎಲ್ಲರ ಪಾಲಾಗುತ್ತದೆ ನಾವೇಲ್ಲರೂ ಹಣ್ಣು ತಿನ್ನುವ ನೀರಿಕ್ಷೇಯಲ್ಲಿದ್ದೇವೆ ವಿನಃ ಕಲ್ಲು ಎಸೆಯುವ ಪ್ರಯತ್ನದಲ್ಲಿಲ್ಲ ಆಲಸಿಗ ಳಾಗಿದ್ದೆವೇ ನಮ್ಮ ಸಮಸ್ಯೆ ಜಗತ್ತಿನಲ್ಲಿಇನ್ನಾರಿಗೂ ಇಲ್ಲದಂತೆ ನಟಿಸುತ್ತಿದ್ದೇವೆ ವಿನಃ ವಾಸ್ತವಂಶ ಅರಿತುಕೊಳ್ಳುತ್ತಿಲ್ಲ
ಇದು ಚುನಾವಣಾ ವರ್ಷವಾದ್ದರಿಂದ ರಾಜ್ಯದ ಎಲ್ಲ ಎನ್ ಪಿ ಎಸ್ ನೌಕರರು ಕಡ್ಡಾಯವಾಗಿ ಭಾಗವಹಿಸಿ ಬೆಂಗಳೂರಿನ ಪ್ರತಿ ಗಲ್ಲಿ ಗಲ್ಲಿಗಳಲ್ಲಿ ಯೂ ಎನ್ ಪಿ ಎಸ್ ಸಮವಸ್ತ್ರದೊಂದಿಗೆ ಟೋಪಿ ಧರಿಸಿ ಕಾಣಬೇಕಿದೆ ವಿಶಾಲವಾದ ಪ್ರೀಡಂ ಪಾರ್ಕ್ ನೌಕರರ ಜಂಗುಳಿಯಿಂದ ತುಂಬಿ ತುಳುಕಬೇಕಿದೆ ಘೋಷಣೆಯ ಧ್ವನಿ ವಿಧಾನಸೌಧವನ್ನು ಅಲುಗಾಡಿಸಬೇಕಿದೆ ಕಂಪನ ವನ್ನುಂಟು ಮಾಡಬೇಕಿದೆ ಆದಾಗ ಮಾತ್ರ ಇಷ್ಟು ದಿನದ ಹೋರಾಟ ತಾರ್ಕಿಕ ಅಂತ್ಯಕ್ಕೆ ಬರುವುದು ನಿಶ್ಚಿತ.
ಕಾಯಿ ಹಣ್ಣಾಗುವುದು ಖಂಡಿತ ಈ ಬಾರಿ ಮಾತ್ರ ಎನಾ ಪಿ,ಎಸ್ ರದ್ದಾಗಬೇಕು ಇಲ್ಲದಿದ್ದಲ್ಲಿ ಯಾವತ್ತು ಆಗದು ಎಂಬ ಸತ್ಯವನ್ನು ನಾವು ಮೊದಲು ತಿಳಿದುಕೊಳ್ಳಬೇಕಿದೆ
ನಾನೊಬ್ಬ ಹೋಗದಿದ್ದರೆ ಈ ಹೋರಾಟ ನಿಲ್ಲುತ್ತಾಎಂಬ ದರಿದ್ರ ಪ್ರಶ್ನೆಯನ್ನು ಹಾಕಿಕೊಳ್ಳದೆ ನಾನು ಹೋಗಲೇಬೇಕು ಹೋರಾಟ ಮಾಡ ಲೇಬೇಕು ನಾನೊಬ್ಬ ಸೈನಿಕನಂತೆ ವರ್ತಿಸಲೇ ಬೇಕು ಎಂಬ ನಿಲುವು ತಾಳಿದಾಗ ಮಾತ್ರ ಯಶಸ್ವಿಗೊಳ್ಳುವಲ್ಲಿ ಯಾವುದೇ ಸಂಶಯವಿಲ್ಲ ಪ್ರತಿ ಕಚೇರಿಯಲ್ಲಿ ಆಕಸ್ಮಿಕ ರಜೆಯನ್ನೋ ಗಳಿಕೆ ರಜೆಯನ್ನೋ ಮತ್ತಿನ್ಯಾವುದಾದರೂ ಕೊಟ್ಟು ಆಡಳಿತ ಯಂತ್ರ ನಿಂತಾಗ ಮಾತ್ರ ಸರ್ಕಾರಕ್ಕೆ ಬಿಸಿ ಮುಟ್ಟುತ್ತದೆ ಸಿ.ಎಲ್ ಇಲ್ಲದಿದ್ದರೆ ಇ.ಎಲ್ ಇಲ್ಲಾ ಪ್ರತಿ ನೌಕರ ತನ್ನನ್ನು ತಾನು ಪ್ರಶ್ನೆ ಮಾಡಿ ಕೊಂಡು ಇಚ್ಛೆಯಿಂದ ಭಾಗವಹಿಸಬೇಕು ಯಾರದೋ ಒತ್ತಡಕ್ಕೆ, ಮುಲಾಜಿಗೆ ಒಳಗಾಗಿ ಬರುವ ಸಮಾರಂಭವಲ್ಲ ಇದೊಂದು ಹೋರಾಟ
ಅಧ್ಯಕ್ಷ ,ಪದಾಧಿಕಾರಿಗಳು ಕರೆಯಲಿಲ್ಲ ಆಮಂತ್ರಣ ಪತ್ರಿಕೆನೀಡಲಿಲ್ಲ ಅವರಿಗೂ ನನಗೂ ಭಿನ್ನಾಭಿಪ್ರಾಯವಿದೆ ಮನೆಯಲ್ಲಿ ಮಕ್ಕಳಿದ್ದಾರೆ, ತಂದೆ ತಾಯಿಗಳಿದ್ದಾರೆ,ನಾಲ್ಕು ದಿನಗಳಿಂದ ನೆಗಡಿ,ಕೆಮ್ಮಾಗಿದೆ, ನನಗಂತೂ ಅಲರ್ಜಿ ಪ್ರವಾಸ ಸರಿ ಹೊಂದುವುದಿಲ್ಲ ನಮ್ಮ ಯಜಮಾನ್ರಿಗೆ ಬೆಳಗ್ಗೆನೆ ಊಟ ಬೇಕು
ಅವರಿಗೆ ಹೊಟೇಲ್ ಊಟ ಸೇರೋದಿಲ್ಲ ನಮ್ಮ ಅತ್ತೆ ತುಂಬಾ ಸ್ಟ್ರೀಕ್ಟು ನಾನು ಊರಿಗೆ ಹೋಗ ಬೇಕಿದೇ ದೂರದ ಸಂಬಂಧಿಗಳ ಮದುವೆ ಇದೆ ನನ್ನ ಹೆಂಡತಿ ಬೈತಾಳೆ ನಮ್ಮ ಬಾಸ್ ರಜೆ ಕೊಡೋದಿಲ್ಲ, ಕಚೇರಿಲೀ ತುಂಬಾ ಕೆಲಸವಿದೆ, ಎರಡು ದಿನ ಕಛೇರಿ ಬಿಟ್ರೆ 4000 ಗಿಂಬಳ ಕೈ ತಪ್ಪುತ್ತೇ
ನಾನು ಇಲ್ಲ ಅಂದ್ರೆ ನಮ್ಮ ಆಫೀಸ್ ಬೀಗಾನೆ ತೆಗೆಯಲ್ಲ ನಾನಿಲ್ಲ ಅಂದ್ರೆ ನಮ್ಮೂರಲ್ಲಿ ಸೂರ್ಯನೆ ಹುಟ್ಟೋದಿಲ್ಲ ಎಂಬ ಎಲ್ಲ ಕ್ಷುಲ್ಲಕ ಕಾರಣಗಳನ್ನು ಮೊದಲು ಬಿಡಿ
ಈ ಸಮಸ್ಯೆಗಳೆಲ್ಲವೂ ಎಲ್ಲ ನೌಕರರ ಬದುಕ ಲ್ಲಿಯೂ ಸರ್ವೇಸಾಮಾನ್ಯ ಹೋರಾಟಕ್ಕೆ ಹೋದರೆ ನಮ್ಮೂರಲ್ಲಿ ಸೂರ್ಯ ಹುಟ್ಟುವುದಿಲ್ಲ ಎನ್ನುವವರು ಮಾತ್ರ ಈ ಹೋರಾಟಕ್ಕೆ ಬರಬೇಡಿ ಪಾಪ ನೀವು ಬಂದ್ರೆ ನಿಮ್ಮೂರು ಕತ್ತಲೆಯಲ್ಲಿ ರುತ್ತದೆ ಊರು ಕತ್ತಲಲ್ಲಿಟ್ಟುಕೊಂಡು ಕರೆದು ಕೊಂಡು ಹೋದರೆ ಕರೆದವರಿಗೂ ಪಾಪ ತಟ್ಟುತ್ತೆ
ಇಂತಹ ಎಲ್ಲ ನೆಪಗಳನ್ನು ಬದಿಗೊತ್ತಿ ಕೇವಲ ಎರಡು ದಿನ ಬೆಂಗಳೂರಿಗೆ ಬನ್ನಿ ನಮ್ಮ ಸಂಕಲ್ಪ ಸಿದ್ದಿಸಿಕೊಳ್ಳೋಣ ಹೋರಾಟ ಇದೊಂದು ತಪಸ್ಸು,… ಫ್ಯಾಷನ್ ಅಲ್ಲ ರಾಜ್ಯ ಹಂತದಲ್ಲಿ ಎಲ್ಲ ವ್ಯವಸ್ಥೆಗಳನ್ನು ಮಾಡಿದ್ದಾರೆ ಮಹಿಳಾ ನೌಕರರಿಗೆ ವಸತಿ ಊಟ ನೀರು ಶೌಚಾಲಯ ಮೂಲಭೂತ ಅವಶ್ಯಕತೆಯನ್ನು ಉದಾರ ಮನಸ್ಸಿನಿಂದ ಸಹಿಸಿಕೊಂಡು ಬೆಂಗಳೂರಿಗೆ ಬನ್ನಿ ಕೈ ಜೋಡಿಸಿ ಹೋರಾಟಕ್ಕೆ ಬಲಪಡಿಸಿ
ನಾನು ನನ್ನ ಪರಿವಾರದೊಂದಿಗೆ ಬ್ಯಾಗ್ ಸಿದ್ದ ಪಡಿಸಿಕೊಂಡಿದ್ದೇನೆ ನನಗೂ ವೃದ್ದ ತಾಯಿ ಇದ್ದಾಳೆ ಪುಟಾಣಿ ಮಕ್ಕಳಿವೆ ಹೆಂಡತಿಯೂ ಇದ್ದಾಳೆ.ಆದರೆ ಸಮಸ್ಯೆ ಅಂತು ಅನಿಸಿಲ್ಲ ನಿಮಗೂ ಸಮಸ್ಯೆ ನೆಪ ಇಲ್ಲ ತಾನೇ.
ಹಾಗಾದರೆ ಏಕೆ ತಡ ಈಗಲೇ ಮನೆಗೆ ಕರೆ ಮಾಡಿ ಬ್ಯಾಗ್ ಸಿದ್ಧಪಡಿಸಿ ಜಿಲ್ಲೆಯ ಜಿಲ್ಲೆಯ ಎಲ್ಲಾ ತಾಲೂಕು ಘಟಕ ಗಳು ವಾಹನದ ವ್ಯವಸ್ಥೆ ಮಾಡಿದೆ ಹಾಗಾದ್ರೆ ತಡವೇಕೆ ಡಿಸೆಂಬರ್ 18 ರ ಸಂಜೆ ಬೆಂಗಳೂರಿಗೆ ಹೋಗೋಣ
ಜಯ ಸಾಧಿಸೋಣ ಬರುವಾಗ ಸಿಹಿ ಸುದ್ದಿ ಮತ್ತು ಸಿಹಿಯೊಂದಿಗೆ ಮರಳಿ ಬರೋಣ ಶುಭವಾಗಲಿ ಹೋಗಲೇಬೇಕಾ ಎನ್ ಪಿ ಎಸ್ ಹೋರಾಟಕ್ಕೆ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..