ಚಿಕ್ಕಬಳ್ಳಾಪುರ –
ಮಹಾಮಾರಿ ಕೋವಿಡ್ ನ ಸೋಂಕಿಗೆ ಚಿಕ್ಕಬಳ್ಳಾ ಪುರ ಜಿಲ್ಲೆಯಲ್ಲಿ ಇಲ್ಲಿಯವರೆಗೂ 17 ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಒಬ್ಬ ಪ್ರಥಮ ದರ್ಜೆ ಸಹಾಯಕರು ಮೃತಪಟ್ಟಿದ್ದಾರೆ.ಜಿಲ್ಲೆಯಲ್ಲಿಯೇ ಶಿಕ್ಷಣ ಇಲಾಖೆಯಲ್ಲಿ ಅತಿ ಹೆಚ್ಚು ಸಿಬ್ಬಂದಿ ಗಳು ಮೃತರಾಗಿದ್ದು ಚಿಂತಾಮಣಿ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ಅಂದರೆ ಗರಿಷ್ಠ 9 ಜನ ಶಿಕ್ಷಕರು ಸಾವನ್ನಪ್ಪಿದ ಮಾಹಿತಿ ಇಲಾಖೆಯಿಂದ ಬಹಿರಂಗಗೊಂಡಿದೆ

ಕೋವಿಡ್ ಸೋಂಕಿನ ಮೊದಲ ಅಲೆಗಿಂತ ಎರಡನೇ ಅಲೆಯು ಜಿಲ್ಲೆಯಲ್ಲಿ ಸಾವಿನ ಪ್ರಮಾಣವನ್ನು ಹೆಚ್ಚಿ ಸಿದೆ.ಈ ಅಲೆಯಲ್ಲಿ ಶಿಕ್ಷಕರು ಸಹ ಹೆಚ್ಚಿನ ಸಂಖ್ಯೆ ಯಲ್ಲಿ ಮೃತಪಟ್ಟಿದ್ದಾರೆ.ಮೊದಲ ಅಲೆಯಲ್ಲಿ ಚಿಂತಾ ಮಣಿಯ ಇಬ್ಬರು ಹಾಗೂ ಚಿಕ್ಕಬಳ್ಳಾಪುರದ ಒಬ್ಬ ಶಿಕ್ಷಕರು ಮೃತಪಟ್ಟಿದ್ದರು.ಇನ್ನೂ ಸಧ್ಯದ ಎರಡನೇ ಅಲೆಯಲ್ಲಿ ಏಪ್ರಿಲ್ 18 ರಿಂದ ಮೇ 22ರವರೆಗೆ 15 ಜನ ಶಿಕ್ಷಕರು ಮೃತರಾಗಿದ್ದಾರೆ

ಇನ್ನೂ ಪ್ರಮುಖವಾಗಿ ಕೋವಿಡ್‌ಗೆ ಸಂಬಂಧಿಸಿದ ಕೆಲಸಗಳಿಗೆ ನಿಯೋಜನೆಯಾದ ಸಂದರ್ಭದಲ್ಲಿ ಸೋಂಕು ತಗುಲಿ ಮೃತಪಟ್ಟರೆ ಅವರನ್ನು ಕೊರೊ ನಾ ವಾರಿಯರ್ಸ್ ಎಂದು ಪರಿಗಣಿಸಲಾಗುತ್ತದೆ. ಆದರೆ ಶಿಕ್ಷಣ ಇಲಾಖೆಯಿಂದ ಅವರ ಕುಟುಂಬಕ್ಕೆ ದೊರೆಯುವ ಸೌಲಭ್ಯಗಳಲ್ಲದೆ ಕೋವಿಡ್ ಕೆಲಸದ ವೇಳೆ ಮರಣ ಹೊಂದಿದರು ಎಂದು ₹ 30 ಲಕ್ಷ ಪರಿಹಾರ ಸಹ ದೊರೆಯುತ್ತದೆ.ಆದರೆ ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟಿರುವ ಶಿಕ್ಷಕರಲ್ಲಿ ಬಹುತೇ ಕರು ಗ್ರಾಮೀಣ ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿ ದ್ದರು ಈವರೆಗೆ ಮಾತ್ರ ಯಾವುದೇ ಭರವಸೆ ಪರಿಹಾರದ ಮಾತು ಯಾರಿಂದಲೂ ಸಾಧ್ಯವಾಗಿಲ್ಲ

ಜಿಲ್ಲೆಯಲ್ಲಿ ಮೃತರಾದ ಶಿಕ್ಷಣ ಇಲಾಖೆ ಸಿಬ್ಬಂದಿಗಳ ವಿವರ ಮಾಹಿತಿ
ಚಿಕ್ಕಬಳ್ಳಾಪುರ – 3
ಚಿಂತಾಮಣಿ – 9
ಶಿಡ್ಲಘಟ್ಟ – 2
ಗೌರಿಬಿದನೂರು – 2
ಬಾಗೇಪಲ್ಲಿ – 2
ಒಟ್ಟು – 18
ಪ್ರಮುಖವಾಗಿ ಮೃತರಾದ ಇಲಾಖೆಯ ಸಿಬ್ಬಂದಿ ಮತ್ತು ಶಿಕ್ಷಕರಿಗೆ ಸ್ಥಳೀಯ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿ ಕಾರಿ,ಇಲಾಖೆಯ ಅಧಿಕಾರಿಗಳು ಅವರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.ಅಲ್ಲದೇ ಸೌಲಭ್ಯ ಗಳನ್ನು ಪಡೆಯಲು ಎಲ್ಲ ರೀತಿಯ ಸಹಕಾರ ಸಹ ನೀಡುತ್ತಿದ್ದಾರೆ.ಆ ಕುಟುಂಬದವರು ನಮ್ಮನ್ನೂ ಸಹ ಸಂಪರ್ಕಿಸಬಹುದು ಎನ್ನುತ್ತಾ ಜಿಲ್ಲೆಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಧ್ವನಿಯಾಗಿ ಜಿಲ್ಲಾ ಅಧ್ಯಕ್ಷ ರಾಗಿ ನಾರಾಯಣಸ್ವಾಮಿ ಚಿಂತಾಮಣಿ ಅವರು ಕೆಲಸವನ್ನು ಮಾಡತಾ ಇದ್ದಾರೆ.ಅಲ್ಲದೇ ಕೋವಿಡ್ ಕೆಲಸದಲ್ಲಿ ನಿರತ ಮೃತಪಟ್ಟಿರುವ ಕುಟುಂಬಗಳಿಗೆ ಕೋವಿಡ್ ಪರಿಹಾರ ನೀಡಬಹುದು ತಹಶೀಲ್ದಾರರು ಈ ಬಗ್ಗೆ ದಾಖಲೆಗಳನ್ನು ಜಿಲ್ಲಾಡ ಳಿತಕ್ಕೆ ಸಲ್ಲಿಸುವರು ಎಂದು ಹೇಳಿದ್ದಾರೆ