ಬೆಂಗಳೂರು –
ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಆಮ್ಲ ಜನಕ ಕೊರತೆ ಹಿನ್ನೆಲೆಯಲ್ಲಿ ಕೋವಿಡ್ ಸೋಂಕಿತರ ಸಾವು ಪ್ರಕರಣದಲ್ಲಿ ಆಕ್ಸಿಜನ್ ಪೂರೈಕೆಗೆ ಸಂಬಂ ಧಿಸಿದ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯ ಮತ್ತು ಚಾಮರಾಜನಗರ ಜಿಲ್ಲಾಧಿಕಾರಿ ಮೈಸೂರು ಜಿಲ್ಲಾಧಿ ಕಾರಿ ಕಚೇರಿಯಲ್ಲಿನ ಎಲ್ಲಾ ದಾಖಲೆಗಳನ್ನು ತಕ್ಷಣ ಸೀಜ್ ಮಾಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್ ಆದೇಶಿಸಿದೆ.

ಈ ಬಗ್ಗೆ ಆದೇಶ ನೀಡಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸೀಜ್ ಮಾಡಿದ ದಾಖಲೆ ಗಳನ್ನು ಸರ್ಕಾರ ನೇಮಿಸಿದ ತನಿಖಾಧಿಕಾರಿ ಪರಿಶೀಲಿಸಬಹುದು ಎಂದು ಹೇಳಿ ಆದೇಶ ನೀಡಿದ್ದಾರೆ


ಆಕ್ಸಿಜನ್ ಕೊರತೆಯಿಂದ 24 ಕೋವಿಡ್ ಸೋಂಕಿ ತರು ಸಾವಿಗೀಡಾದ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಲು ಸರ್ಕಾರ ಸಿದ್ಧವಿದೆ. ನಿವೃತ್ತ ನ್ಯಾಯಮೂರ್ತಿಯೊಬ್ಬರಿಂದ ತನಿಖೆಗೆ ಆದೇಶ ಮಾಡಲಾಗಿದೆ ಇದನ್ನು ಅಂತಿಮಗೊಳಿಸಲಾಗಿದೆ ಎಂದು ಅಡ್ವೊಕೇಟ್ ಜನರಲ್ ಅವರು ಹೈಕೋ ರ್ಟ್‌ಗೆ ಮಾಹಿತಿ ನೀಡಿದರು

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಯ ವರು,ನ್ಯಾಯಾಂಗ ತನಿಖೆ ಕುರಿತು ನಿಲುವು ತಿಳಿಸ ಲಷ್ಟೇ ನಾವು ಹೇಳಿದ್ದೆವು.ನಿವೃತ್ತ ನ್ಯಾಯಮೂರ್ತಿ ಗಳನ್ನು ಸರ್ಕಾರ ನೇಮಕ ಮಾಡುವುದಿಲ್ಲ.


ಆ ನಿರ್ಧಾರವನ್ನು ಹೈಕೋರ್ಟ್‌ಗೆ ಬಿಡಿ ಎಂದರು. ಇದಕ್ಕೆ ಮುಂದಿನ ತೀರ್ಮಾನ ಹೈಕೋರ್ಟ್ ಗೆ ಬಿಟ್ಟಿದ್ದು ಎಂದು ಅಡ್ವೋಕೇಟ್ ಜನರಲ್ ಹೇಳಿದ ರು. ಒಟ್ಟಾರೆ ಆಕ್ಸಿಜನ್ ವಿಚಾರದಲ್ಲಿ ಹೈಕೋರ್ಟ್ ಮಧ್ಯ ಪ್ರವೇಶ ಮಾಡಿ ಮೈಸೂರು ಮತ್ತು ಚಾಮ ರಾಜನಗರ ಡಿಸಿ ಗೆ ಬಿಸಿ ಮುಟ್ಟಿಸಿದ್ದು ಮುಂದೇನಾ ಗುತ್ತದೆ ಎಂಬುದನ್ನು ಕಾದು ನೋಡಬೇಕು