ಬೆಂಗಳೂರು –
ಕೆಲಸ ಕೊಡಿಸುವುದಾಗಿ ಪುಸಲಾಯಿಸಿ ಹೊರ ರಾಜ್ಯದ ಮಹಿಳೆಯರನ್ನು ನಗರಕ್ಕೆ ಕರೆತಂದು ವೇಶ್ಯಾವಾಟಿಕೆ ದಂಧೆಗೆ ದೂಡುತ್ತಿದ್ದ ರೌಡಿಶೀಟರ್ ರೊಬ್ಬರನ್ನು ಬಂಧಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಿಸಿಬಿ ವಿಶೇಷ ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ಗೂಂಡಾ ಕಾಯಿದೆಯಡಿ ಬಂಧಿಸಿ ದ್ದಾರೆ.ಎಂ.ಎನ್.ನವೀನ್ (28) ಬಂಧಿತ ಆರೋಪಿ.
ಆರೋಪಿ ವಿರುದ್ಧ ಜಯನಗರ,ಜೆಪಿನಗರ,ಕೆಎಸ್ ಲೇಔಟ್,ಬಾಣಸವಾಡಿ ಪೋಲಿಸ್ ಠಾಣೆಗಳಲ್ಲೂ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಬಗ್ಗೆ ಪ್ರಕರಣ ದಾಖಲಾಗಿವೆ.
ನವೀನ್ ಜೈಲಿಗೆ ಹೋಗಿ ಬಂದ ಬಳಿಕವೂ ದಂಧೆ ಮುಂದುವರಿಸಿದ್ದ.ಹಾಗಾಗಿ ಈತನನ್ನು ಗೂಂಡಾ ಕಾಯಿದೆಯಡಿಯಲ್ಲಿ ಬಂಧಿಸಲು ಸಿಸಿಬಿ ಅಧಿಕಾರಿ ಗಳು ವರದಿ ಸಲ್ಲಿಸಿದ್ದರು.ಸಿಸಿಬಿ ಅಧಿಕಾರಿಗಳ ವರದಿಯನ್ನು ಅಪರಾಧ ವಿಭಾಗದ ಡಿಸಿಪಿ ಕೆ.ಪಿ. ರವಿಕುಮಾರ್ ಹಾಗೂ ಜಂಟಿ ಪೋಲಿಸ್ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್ ಈತನ ಬಂಧನ ಕ್ಕೆ ಶಿಫಾರಸು ಮಾಡಿದ್ದರು.ಅದರಂತೆ ನಗರ ಪೋಲಿಸ್ ಆಯುಕ್ತ ಕಮಲ್‍ಪಂತ್ ಅವರು ಆರೋಪಿಯನ್ನು ಗೂಂಡಾ ಕಾಯಿದೆಯಡಿ ಬಂಧಿಸುವಂತೆ ಆದೇಶಿಸಿದ್ದರು ಇದೆಲ್ಲದರ ನಡುವೆ ಈಗ ಕಾರ್ಯಾಚರಣೆ ನಡೆಸಿ ಬಂಧನ ಮಾಡಲಾ ಗಿದ್ದು ಹೊರ ರಾಜ್ಯದ ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ