ರಮೇಶ ಜಾರಕಿಹೊಳಿ ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಹೈ ಕಮಾಂಡ್ ಸೂಚನೆ

Suddi Sante Desk

ಬೆಂಗಳೂರು –

ಕಾಮ ಪುರಾಣದಲ್ಲಿ ಸಿಲುಕಿಕೊಂಡು ಪಕ್ಷಕ್ಕೆ ತೀವ್ರವಾಗಿ ಮುಜುಗರವನ್ನುಂಟು ಮಾಡಿರುವ ಸಚಿವ ರಮೇಶ್‌ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪಕ್ಷದ ಹೈ ಕಮಾಂಡ್ ಸೂಚನೆ ನೀಡಿದೆಯಂತೆ‌. ಸೆಕ್ಸ್‌ ಸಿಡಿಗೆ ಸಂಬಂಧಪಟ್ಟಂತೆ ಸಿಟ್ಟಾಗಿರುವ ಬಿಜೆಪಿ ಹೈಕಮಾಂಡ್‌ ಈ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.

ಪಂಚರಾಜ್ಯದ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಬಿಜೆಪಿಗೆ ಮುಜುಗರ ಉಂಟಾಗುವು ದರಿಂದ ತಪ್ಪಿಸಿಕೊಳ್ಳುವ ಸಲುವಾಗಿ. ಈ ಕೂಡಲೇ ರಮೇಶ್‌ ಜಾರಕಿಹೊಳಿ ಅವರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಂತ ಈಗಾಗಲೇ ಸಿಎಂ ಬಿಎಸ್‌ವೈ ಸೇರಿ ರಾಜ್ಯ ನಾಯಕರುಗಳಿಗೆ ಬಿಜೆಪಿಯಿಂದ ಆದೇಶ ಬಂದಿದ್ದು, ಇಂದು ರಾತ್ರಿ ಅಥಾವ ನಾಳೆ ಬೆಳಗ್ಗೆ ರಮೇಶ್ ಜಾರಕಿ ಹೊಳಿ ಯವರು ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ. ಇನ್ನೇನು ಕೆಲವೇ ದಿನದಲ್ಲಿ ವಿಧಾನಸಭಾ ಬಜೆಟ್ ಅಧಿವೇಶನ ನಡೆಯಲಿದ್ದು, ಸದನದಲ್ಲಿ ವಿರೋಧ ಪಕ್ಷಗಳು ಸಹಜವಾಗಿ ಅಡಳಿತ ಪಕ್ಷದ ಮೇಲೆ ಮುಗಿ ಬೀಳುವ ಸಾಧ್ಯತೆ ಹೆಚ್ಚಾಗಿದ್ದು, ಸದನದಲ್ಲಿ ರಾಜೀನಾಮೇ ಕೂಗು ಕೇಳಿ ಬರಲಿದೆ ಎನ್ನುವುದನ್ನು ಕೂಡ ಬಿಜೆಪಿ ಗಮನಿಸಿ, ಹೈಕಮಾಂಡ್‌ ಈ ಕೂಡಲೇ ಸಚಿವ ರಮೇಶ್ ಜಾರಕಿಹೊಳಿ ಅವ ರಿಂದ ರಾಜೀನಾಮೆ ಪಡೆದುಕೊಳ್ಳ ಬೇಕು ಅಂತ ಸೂಚನೆ ನೀಡಿದೆ ಎನ್ನಲಾಗಿದೆ.ಒಟ್ಟಿನಲ್ಲಿ ಬಹುತೇಕವಾಗಿ ರಮೇಶ್‌ ಜಾರಕಿಹೊಳಿಯವರ ಸಚಿವ ಸ್ಥಾನದ ತಲೆ ದಂಡವಾಗುವುದು ನಿಶ್ಚಿತವಾಗಿದೆ ಅಂಥ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.