ಬೆಂಗಳೂರು –
ಒಂದು ಕಡೆ ಇನ್ನೂ ಕಡಿಮೆಯಾಗದ ಕೋವಿಡ್ ಪ್ರಮಾಣ ಮತ್ತೊಂದು ಕಡೆ ತರಾತುರಿಯಲ್ಲಿ ಶಾಲೆ ಗಳ ಆರಂಭ ಶಿಕ್ಷಕರಿಗೆ ಆದೇಶವನ್ನು ಸರ್ಕಾರ ನೀಡಿದೆ.ಇವೆಲ್ಲದರ ನಡುವೆ ರಾಜ್ಯದಲ್ಲಿ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಆನ್‌ಲೈನ್ ಕ್ಲಾಸ್ ನಲ್ಲಿ ಪಾಠ ಕೇಳಲು ಸ್ಮಾರ್ಟ್ ಫೋನ್, ಕಂಪ್ಯೂಟರ್, ಲ್ಯಾಪ್‌ಟಾಪ್,ಟ್ಯಾಬ್,ಇಂಟರ್‌ನೆಟ್ ಸೌಲಭ್ಯ ಹೊಂದಿರುವ ಮಕ್ಕಳ ಸಂಖ್ಯೆ ಎಷ್ಟು? ಎಂದು ಹೈಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಪ್ರಶ್ನೆ ಮಾಡಿದೆ. ಆನ್ ಲೈನ್ ಕ್ಲಾಸ್ ಗೆ ಕೂರಲು ಅಗತ್ಯ ಸೌಲಭ್ಯ ಹೊಂದಿರುವ ಮಕ್ಕಳ ಶಾಲಾವಾರು ಅಂಕಿ ಅಂಶ ವನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಆನ್ ಲೈನ್ ತರಗತಿಗಳಿಗೆ ಕೂರಲು ತಂತ್ರಜ್ಞಾನದ ಲಭ್ಯತೆ ಬಗ್ಗೆ ಶಾಲಾವಾರು ಅಂಕಿ-ಅಂಶಗಳನ್ನು ಜುಲೈ 1 ರೊಳಗೆ ಒದಗಿಸಲು ಸರ್ಕಾರಕ್ಕೆ ಹೈಕೋ ರ್ಟ್ ನಿರ್ದೇಶನ ನೀಡಿದೆ.ಇದೇ ವೇಳೆ ಹೈಕೋರ್ಟ್ ಗೆ ಕೆಲವು ಮುಖ್ಯ ಮಾಹಿತಿಗಳನ್ನು ರಾಜ್ಯ ಸರ್ಕಾರ ತಿಳಿಸಿದೆ.


2021-22ನೇ ಶೈಕ್ಷಣಿಕ ವರ್ಷ ಆರಂಭಕ್ಕೆ ಕಾರ್ಯ ಯೋಜನೆಯನ್ನು ವಿವರಿ ಸಿದೆ.ಜುಲೈ 1ರಿಂದ ಆನ್ ಲೈನ್ ತರಗತಿಗಳನ್ನು ಪುನಃ ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ಲಾಕ್ ಡೌನ್ ಪರಿಣಾಮ ಪಠ್ಯಪುಸ್ತ ಕಗಳನ್ನು ಮುದ್ರಿಸಲು ವಿಳಂಬವಾಗಿದೆ.ಆಗಸ್ಟ್, ಸೆಪ್ಟಂಬರ್ ತಿಂಗಳಲ್ಲಿ ಪಠ್ಯ ಪುಸ್ತಕ ಪೂರೈಕೆ ಮಾಡಲಾಗುತ್ತದೆ ಎಂದು ಹೈಕೋರ್ಟ್ ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.