ಪಠ್ಯ ಪುಸ್ತಕ ಗಳಿಲ್ಲದೇ ಶಾಲೆಗಳನ್ನು ಆರಂಭ ಮಾಡಿದ್ದೇಕೆ ಹೈಕೋರ್ಟ್ ಪ್ರಶ್ನೆ – ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ

Suddi Sante Desk

ಬೆಂಗಳೂರು –

ಸಧ್ಯ ರಾಜ್ಯದಲ್ಲಿ ಕರೋನ ಆತಂಕದ ನಡುವೆಯೂ ಶಾಲೆಗಳು ಆರಂಭವಾಗಿವೆ.ಇನ್ನೂ ಪಠ್ಯ ಪುಸ್ತಕ ಗಳಿಲ್ಲದೇ ಶಾಲೆಗಳನ್ನು ಆರಂಭ ಮಾಡಿದ ಕುರಿತು ಹೈಕೋರ್ಟ್ ರಾಜ್ಯ ಸರ್ಕಾರದ ವಿರುದ್ಧ ಅಸಮಾ ಧಾನ ವ್ಯಕ್ತಪಡಿಸಿದೆ.

ಆ ಮಕ್ಕಳಿಗೆ ಪುಸ್ತಕ ನೀಡದೆ 9 ಮತ್ತು 10ನೇ ತರಗತಿಗಳನ್ನು ಆರಂಭಿಸಲಾಗಿದ್ದು ರಾಜ್ಯ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ಅಸಮಾಧಾ ನವನ್ನು ವ್ಯಕ್ತಪಡಿಸಿದೆ.

ಪಠ್ಯಪುಸ್ತಕಗಳನ್ನು ಒದಗಿಸಲು ಪೂರ್ವಸಿದ್ಧತೆ ಏಕೆ ಕೈಗೊಂಡಿಲ್ಲ? ಪಠ್ಯಪುಸ್ತಕಗಳು ಇಲ್ಲದೆ ಮಕ್ಕಳಿಗೆ ಶಾಲೆ ಆರಂಭಿಸಿರುವುದು ಅರ್ಥಹೀನವಾಗಿದೆ. ಪಠ್ಯಪುಸ್ತಕ ಪೂರೈಕೆ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳ ಬೇಕು.

ಸರ್ಕಾರಿ,ಅನುದಾನಿತ ಶಾಲೆಗಳಿಗೆ ಪಠ್ಯಪು ಸ್ತಕ ಪೂರೈಸಬೇಕು.9, 10 ನೇ ತರಗತಿಯ ಮಕ್ಕಳಿಗೆ ಪಠ್ಯ ಪುಸ್ತಕ ಪೂರೈಕೆ ಮಾಡಬೇಕು ಎಂದು ತಿಳಿಸ ಲಾಗಿದ್ದು ಆಗಸ್ಟ್ 30 ರೊಳಗೆ ವಿವರಣೆ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.