ಬೆಂಗಳೂರು –
ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ದಿನೇ ದಿನೇ ವ್ಯಾಪಕವಾಗುತ್ತಿದ್ದು ದುಡ್ಡು ಕೊಡದೇ ಯಾವ ಫೈಲೂ ಮುಂದಕ್ಕೆ ಚಲಿಸುವುದಿಲ್ಲ ಎಂಬ ದುಃಸ್ಥಿತಿ ನಿರ್ಮಾಣ ವಾಗಿದೆ ಹೀಗಾಗಿ ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಭ್ರಷ್ಟಾಚಾರ ಆವರಿಸಿಕೊಂಡಿದೆ ಎಂದು ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.ಬೆಂಗಳೂರು ಅಭಿ ವೃದ್ಧಿ ಪ್ರಾಧಿಕಾರದ (ಬಿಡಿಎ) ಸಹಾಯಕ ಎಂಜಿನಿಯರ್ ಬಿ.ಟಿ.ರಾಜು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಆರೋಪಿ ರಾಜು ವಿರುದ್ಧ ಬಲವಾದ ಸಾಕ್ಷ್ಯಗಳಿರುವ ಕಾರಣ ಜಾಮೀನು ನೀಡಲು ಆಗದು ಎಂದು ವಜಾಗೊಳಿಸಿದೆ.
ಬಿ.ಟಿ.ರಾಜು ಅನುಕೂಲಕರ ಆದೇಶ ನೀಡಲು ಮಂಜುನಾಥ್ ಅವರಿಗೆ ₹ 1 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ಫಿರ್ಯಾದುದಾರ ಮಂಜುನಾಥ್ ಚೌಕಾಶಿ ನಡೆಸಿದ ನಂತರ ₹ 60 ಲಕ್ಷಕ್ಕೆ ಕೆಲಸ ಮಾಡಲು ಒಪ್ಪಿಕೊಂ ಡಿದ್ದರು.2022ರ ಜೂನ್ 7ರಂದು ಲಂಚದ ಮೊತ್ತದಲ್ಲಿ ₹ 5 ಲಕ್ಷ ಮುಂಗಡ ಪಡೆದಾಗ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದರು ಈ ಒಂದು ವಿಚಾರದಲ್ಲಿ ಹೈಕೊರ್ಟ್ ನ್ಯಾಯಮೂರ್ತಿಗಳು ಕಳವಳವನ್ನು ವ್ಯಕ್ತಪಡಿಸಿ ಅಭಿಪ್ರಾಯವನ್ನು ವ್ಯಕ್ತಪಡಿ ಸಿದ್ದಾರೆ.