ಬೆಂಗಳೂರು –
ಯೊಗೀಶಗೌಡ ಕೊಲೆ ಪ್ರಕರಣದಲ್ಲಿ ಬಂಧನವಾಗಿ ರುವ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿಯ ತೀರ್ಪನ್ನು ಹೈಕೊರ್ಟ್ ಕಾಯ್ದಿರಿಸಿದೆ. ಇಂದು ಮತ್ತೆ ಮಧ್ಯಾಹ್ನ ಅರ್ಜಿಯನ್ನು ವಿಚಾರಣೆಗೆ ತಗೆದುಕೊಂಡ ನ್ಯಾಯಮೂರ್ತಿಗಳು ಸಿಬಿಐ ಮತ್ತು ವಿನಯ ಕುಲಕರ್ಣಿ ಪರ ನ್ಯಾಯವಾದಿಗಳಿಂದ ಸಮಗ್ರವಾಗಿ ವಿಚಾರಣೆ ಮಾಡಿದ ನ್ಯಾಯಾಲಯ ಅರ್ಜಿಯ ಅಂತಿಮ ತೀರ್ಪನ್ನು ಕಾಯ್ದಿರಿಸಿದರು.
ವಿನಯ ಕುಲಕರ್ಣಿ ಪರವಾಗಿ ಶಶಿಕಿರಣ ಶೆಟ್ಟಿ ವಾದ ವನ್ನು ಮಂಡಿಸಿದರು.ಇನ್ನೂ ಸಿಬಿಐ ಪರವಾಗಿ ಕೆ ಸಿ ರಾಜು ಅವರು ವಾದವನ್ನು ಮಂಡಿಸಿದರು.ಇಂದು ಮಧ್ಯಾಹ್ನ ಮತ್ತೆ ಎರಡು ಕಡೆಗಳಿಂದ ವಾದವನ್ನು ಆಲಿಸಿದ ನ್ಯಾಯವಾದಿಗಳು ಸಮಗ್ರವಾಗಿ ಮತ್ತೆ ವಾದವನ್ನು ಆಲಿಸಿ ಅಂತಿಮ ತೀರ್ಪನ್ನು ಕಾಯ್ದಿರಿಸಿ ದರು.
ಇನ್ನೂ ನಾಳೆ ನ್ಯಾಯಾಲಯಕ್ಕೆ ಕೊನೆಯ ಕೆಲಸದ ದಿನವಾಗಿದ್ದು ಹೀಗಾಗಿ ರಜೆಯ ಯಾವುದಾದರೂ ದಿನದಲ್ಲಿ ತೀರ್ಪನ್ನು ನ್ಯಾಯಾಲಯ ಪ್ರಕಟಿಸುವ ಸಾಧ್ಯತೆ ಇದೆ ಒಟ್ಟಾರೆ ಇಂದೇ ಜಾಮೀನಿನ ಕುರಿ ತಾದ ತೀರ್ಪು ಪ್ರಕಟವಾಗುವ ಸಾಧ್ಯತೆ ಇತ್ತು ಆದರೆ ಈಗಾಗಲೇ ಮತ್ತು ಇಂದು ಮತ್ತೊಮ್ಮೆ ವಾದವನ್ನು ಆಲಿಸಿದ ನ್ಯಾಯಮೂರ್ತಿಗಳು ಅಂತಿಮ ತೀರ್ಪನ್ನು ಕಾಯ್ದಿರಿಸಿದ್ದಾರೆ