ಬೆಂಗಳೂರು –
ಮೇ 16 ರಿಂದ ರಾಜ್ಯದಲ್ಲಿ ಶಾಲೆಗಳು ಆರಂಭವಾಗಲಿವೆ ಇನ್ನೂ ಶಾಲೆಗಳು ಆರಂಭಕ್ಕೂ ಮುನ್ನ ನಂತರ ಶಿಕ್ಷಕರು ಏನೇಲ್ಲಾ ಮಾಡಬೇಕು ಈ ಒಂದು ವಿಚಾರ ಕುರಿತು ಶಿಕ್ಷಣ ಇಲಾಖೆ ಕೆಲವೊಂದಿಷ್ಟು ಮಾಹಿತಿಯನ್ನು ರಾಜ್ಯದ ಶಿಕ್ಷಕರಿಗೆ ನೀಡಿದೆ
- ದಿ :14:05:22 ರಂದು sdmc ಸಭೆ ಕರೆಯುವುದು. ಪ್ರಸಕ್ತ ಶೈಕ್ಷಣಿಕ ವರ್ಷದ ವಿಷಯಗಳ ಚರ್ಚಿಸಿ ನಡಾವಳಿ ದಾಖಲಿಸುವುದು.
- ಎಲ್ಲಾ ಶಿಕ್ಷಕರು ಹಾಜರಿದ್ದು, ಶಾಲಾ ಕೊಠಡಿ, ಅಡುಗೆ ಕೋಣೆ, ಸ್ಪೋರ್ಟ್ಸ್ ಕೊಠಡಿ, ಶಾಲಾ ಆವರಣ ಸ್ವಚ್ಛತೆ ಮಾಡಿಕೊಳ್ಳುವುದು.
ಶಾಲಾ ಪ್ರಾರಂಭೋತ್ಸವ ಕುರಿತು 21ಪುಟಗಳ ಸುತ್ತೋಲೆ, 9 ಪುಟಗಳ ಮೌಲ್ಯ0ಕನ ಸುತ್ತೋಲೆ. 2 ಪುಟಗಳ ಸುತ್ತೋಲೆ. ಈ ಮೂರು ಸುತ್ತೋಲೆಗಳು ಶಾಲೆಯಲ್ಲಿಡುವುದು. - ಎಲ್ಲಾ ತರಗತಿಯಲ್ಲಿ ಪ್ರತಿ ವಿಷಯದ ಕಲಿಕಾ ಫಲಗಳ ಪಟ್ಟಿ ಸಿದ್ಧಪಡಿಸಿಕೊಳ್ಳುವುದು.
- ಎಲ್ಲಾ ಶಿಕ್ಷಕರು ಕಡ್ಡಾಯವಾಗಿ work done ಕಲಿಕಾ ಫಲಗಳನ್ನು ಅಳವಡಿಸಿಕೊಂಡು ಬರೆದಿಡುವುದು.
ಕಲಿಕಾ ಫಲಗಳ ಆಧಾರಿತ ಪೂರ್ವ ಪರೀಕ್ಷೆ ಮಾಡುವುದು. SAP ಕಡ್ಡಾಯವಾಗಿ ಬರೆಯುವುದು. - ದಿ:16:05:22 ರಂದು ಶಾಲಾ ಪ್ರಾರಂಭೋತ್ಸವ ಅದ್ದೂರಿಯಾಗಿ ಮಾಡುವುದು. Sdmc, ಮಾಡುವುದು. ಗ್ರಾಮ ಪಂಚಾಯತ್ ಸದಸ್ಯರು, ಎಲ್ಲಾ ಶಿಕ್ಷಕರು ಹಾಜರಿರುವುದು.
- ದಿ.16:05:22 ರಿಂದ ಶಾಲಾ ವ್ಯಾಪ್ತಿಯ ಅರ್ಹ ವಯೋಮಿತಿಯ ಮಕ್ಕಳನ್ನು 1 ನೇ ತರಗತಿಗೆ ದಾಖಲು ಮಾಡಿಕೊಳ್ಳುವುದು.
ಪಠ್ಯ ಪುಸ್ತಕವನ್ನು ಪೂರಕ ಸಾಮಗ್ರಿಯಾಗಿ ಬಳಸಿಕೊಳ್ಳುವುದು. - ದಿ:15:05:22 ರಂದು ದಾಖಲಾತಿ ಆಂದೋಲನ ಆಯೋಜಿಸುವುದು.
- ಕಲಿಕಾ ಚೇತರಿಕೆ ಕಾರ್ಯಕ್ರಮ ಕುರಿತು ಜಾಥಾ ಮಾಡುವುದರ ಮೂಲಕ ಅರಿವು ಮೂಡಿಸುವುದು.
- ವಿದ್ಯಾಪ್ರವೇಶ ಕಾರ್ಯಕ್ರಮ ಅನುಷ್ಠಾನ ಪರಿಣಾಮಕಾರಿ ಮಾಡುವುದು.
- ದಿ :16:05:22 ರೊಳಗೆ ನಲಿಕಲಿ ಕೊಠಡಿ ಸಿದ್ಧವಿರಬೇಕು.
- ಗ್ರಾಮ ಶಿಕ್ಷಣ ಪಡೆ ಸಭೆ ನಡೆಸುವುದು. ಗ್ರಾಮ ಶಿಕ್ಷಣ ವಹಿ ನಿರ್ವಹಿಸುವುದು.
15.ಅರ್ಹ ವಯಸ್ಸಿನ ಅಂಗನವಾಡಿ ಮಕ್ಕಳ ಪಟ್ಟಿಯಾದರಿಸಿ ದಾಖಲಾತಿ ಮಾಡಿಕೊಳ್ಳುವುದು.
16.ಅಕ್ಷರ ದಾಸೋಹ ಹಣವನ್ನು ಮಕ್ಕಳ ಅಥವಾ ಪೋಷಕರ ಖಾತೆಗೆ ಕಡ್ಡಾಯವಾಗಿ ದಿ:28:05:22 ರ ಒಳಗೆ DBT ಮೂಲಕ ವರ್ಗಾವಣೆ ಮಾಡುವುದು. - ದಿ :16:05:22 ರಂದು ಶಾಲಾ ಪ್ರಾರಂಭೋತ್ಸವಕ್ಕೆ ಮಕ್ಕಳಿಗೆ ಸಿಹಿ ಊಟ ಮಾಡಿಸುವುದು.
- ಅಕ್ಷರ ದಾಸೋಹ ದಸ್ತಾನುವನು mdm ತಂತ್ರಾ0ಶ ದಲ್ಲಿ ಕಡ್ಡಾಯವಾಗಿ ದಾಖಲಿಸುವುದು.
- ದಿ:14:05:22 ರ ಒಳಗೆ cce result, ಪ್ರಮೋಷನ್ ಪ್ರಕ್ರಿಯೆ ಪೂರ್ಣಗೊಳಿಸುವುದು.
20.5 ನೇ ತರಗತಿ ಮತ್ತು 7ನೇ ತರಗತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ದಾಖಲು ಮಾಡಿಸುವುದು.
21.ಶಿಥಿಲಗೊಂಡ ಕೊಠಡಿ ಮಾಹಿತಿಯ photo ಸಹಿತ ವರದಿಯನ್ನು ತಕ್ಷಣ ಕಚೇರಿಗೆ ಸಲ್ಲಿಸುವುದು.
22.book bank ನ್ನು ಶಾಲೆಯಲ್ಲಿ ಕಡ್ಡಾಯವಾಗಿ ವಿಷಯವಾರು ಕ್ರೋಡಿಕರಣ ಮಾಡುವುದು.
23.ಹಳೆ ವಿದ್ಯಾರ್ಥಿಗಳ ಸಂಘವನ್ನು ಕಡ್ಡಾಯವಾಗಿ ರಚಿಸುವುದು.
24.sop ಪಾಲಿಸುವುದು. - ಮಕ್ಕಳಿಗೆ ಶೇ 100 vaccine ಹಾಕಿಸಲು ಅಗತ್ಯ ಕ್ರಮ ವಹಿಸುವುದು.
- ದಾಖಲಾತಿ ಮಾಡಿಕೊಳ್ಳುವ ಸಮಯದಲ್ಲಿ ಜಾತಿಯನ್ನು ಪರಿಶೀಲನೆ ಮಾಡಿ ನಮೂದಿಸುವುದು.
- ಶಾಲಾ ಆಸ್ತಿಯನ್ನು ಕಡ್ಡಾಯವಾಗಿ ಶಾಲೆಯ ಹೆಸರಿಗೆ ನೋಂದಣಿ ಮಾಡಿಸುವುದು.
28.ಶಾಲೆಯಲ್ಲಿ ಹುದ್ದೆ ಮಂಜೂರಾತಿ ವಹಿ ನಿರ್ವಹಿಸುವುದು. - ದಿ:16:05:22 ಕಡ್ಡಾಯವಾಗಿ ಎಲ್ಲಾ ಮಕ್ಕಳನ್ನು ಶಾಲೆಗೆ ಕರೆತಂದು ಪೂರ್ವ ಪರೀಕ್ಷೆ ಮಾಡುವುದು.
30.2022-23 ನೇ ಶೈಕ್ಷಣಿಕ ವರ್ಷ ಕಲಿಕಾ ಚೇತರಿಕೆ ವರ್ಷ ಯಶಸ್ಸು ಕ್ರಿಯಾಶೀಲ ಶಿಕ್ಷಕರಾದ ನಿಮ್ಮ ಮೇಲಿದೆ.