ಹೆತ್ತ ತಾಯಿಗೆ ಬೈದಿದನ್ನು ಪ್ರಶ್ನೆ ಮಾಡಿದ್ದಕ್ಕೆ ಚಾಕುವಿನಿಂದ ಇರಿದು ಕೊಲೆ

Suddi Sante Desk

ವಿಜಯಪುರ –                                 ಹಾಡುಹಗಲೇ ಯುವಕನ ಬರ್ಭರ ಹತ್ಯೆ ಮಾಡಿರೋ ಘಟನೆ ವಿಜಯಪುರ ತಾಲೂಕಿನ ಖತಿಜಾಪುರ ಗ್ರಾಮದಲ್ಲಿ ನಡೆದಿದೆ.

ಇದೇ ಗ್ರಾಮದ ಇಸ್ಮಾಯಿಲ್ ಮುಲ್ಲಾ 22 ಕೊಲೆಯಾದ ಯುವಕನಾಗಿದ್ದಾನೆ.ತನ್ನ ತಾಯಿಗೆ ಅವಾಚ್ಚ ಶಬ್ದಗಳಿಂದ ನಿಂದಿಸಿದನ್ನು ಪ್ರಶ್ನೆ ಮಾಡಿದಕ್ಕೆ ಫಾಜಲ್ ಚಿಕನ್ ಕತ್ತರಿಸುವ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ.

ಫಾಜಲ್ ಚುಚ್ಟಿದ ಚಾಕು ಇಸ್ಮಾಯಿಲ್ ದೇಹದಲ್ಲಿಯೇ ಉಳಿದೆ. ಗಲಾಟೆಯಲ್ಲಿ ಫಾಜಲ್ ಗೂ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.ಇನ್ನೂ ಸ್ಥಳದಲ್ಲಿ ಮೃತ ಯುವಕನ‌ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.