ಮಂಡ್ಯ –
ರಾಜ್ಯಾಧ್ಯಂತ ಮಳೆರಾಯ ಅಬ್ಬರಿಸುತ್ತಿದ್ದು ಧಾರಾಕಾರ ಮಳೆಗೆ ಅಲ್ಲಲ್ಲಿ ಅವಘಡಗಳು ಸಂಭವಿಸುತ್ತಿದ್ದು ಇತ್ತ ಮಂಡ್ಯ, ಮತ್ತು ಚಾಮರಾಜನಗರ ಜಿಲ್ಲೆಯಲ್ಲೂ ನಿರಂತರ ವಾಗಿ ಮಳೆಯಾಗುತ್ತಿದ್ದು ಇನ್ನೂ ಈ ಒಂದು ಮಳೆಗೆ ಮುಂಜಾಗೃತವಾಗಿ ಜಿಲ್ಲಾಧಿಕಾರಿಗಳು ರಜೆಯನ್ನು ಘೋಷಣೆ ಮಾಡಿದ್ದಾರೆ
ಹೌದು ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿಕ್ಷಕರಿಗೆ ಮಕ್ಕಳಿಗೆ ಯಾವುದೇ ತೊಂದರೆ ಸಮಸ್ಯೆಯಾಗದಂತೆ ಹಾಗೇ ಪರದಾಡಬಾರದು ಎಂಬ ಒಂದು ಕಾರಣದಿಂದಾಗಿ ಹಾಗೇ ಈ ಒಂದು ವಿಚಾರ ಕುರಿ ತಂತೆ ಶಿಕ್ಷಕರ ಸಂಘಟನೆಗಳು ಸೇರಿದಂತೆ ಕೆಲವೊಂದಿಷ್ಟು ಪೋಷಕರು ರಜೆಯನ್ನು ಘೋಷಣೆ ಮಾಡುವಂತೆ ಒತ್ತಾಯವನ್ನು ಮಾಡಿದ್ದರು ಇದರ ಬೆನ್ನಲ್ಲೇ ಜಿಲ್ಲಾಧಿಕಾರಿ ಅಶ್ವತಿ ಎಸ್ ಅವರು ಜಿಲ್ಲೆಯಲ್ಲಿನ ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಿದ್ದಾರೆ.ನಾಳೆ ದಿನಾಂಕ ಆಗಸ್ಟ್ 5 ರಂದು ಮಾತ್ರ ಒಂದು ದಿನ ರಜೆಯನ್ನು ಘೋಷಣೆ ಮಾಡಿ ರಜೆ ದಿನವನ್ನು ಮುಂದಿನ ದಿನಗಳಲ್ಲಿ ಸರಿದೂಗಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.
ಇನ್ನೂ ಇತ್ತ ಚಾಮರಾಜ ನಗರ ಜಿಲ್ಲೆಯಲ್ಲಿ ಮಳೆಯಿಂ ದಾಗಿ ಜಿಲ್ಲಾಧಿಕಾರಿಗಳು ರಜೆಯನ್ನು ಘೋಷಣೆ ಮಾಡಿದ್ದು ಮಳೆ ಇನ್ನೂ ಮೂರು ನಾಲ್ಕು ದಿನಗಳ ಕಾಲ ಸುರಿಯುವ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿದ್ದು ಹೀಗಾಗಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಎರಡು ದಿನ ರಜೆಗಳನ್ನು ಘೋಷಣೆ ಮಾಡಿ ದ್ದಾರೆ.