ಬೆಂಗಳೂರು –
ಜೂನ್ 20ರಂದು ಪ್ರಧಾನಿ ಕಾರ್ಯಕ್ರಮ ಹಿನ್ನಲೆ ಯಲ್ಲಿ ಬೆಂಗಳೂರು ಆಯ್ದ ಮಾರ್ಗಗಳ ಕಾಲೇಜುಗಳಿಗೆ ರಜೆ ಯನ್ನು ಘೋಷಣೆ ಮಾಡಲಾಗಿದೆ ಹೌದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದೇ 20ರ ಸೋಮವಾರ ದಂದು ನಗರಕ್ಕೆ ಆಗಮಿಸುತ್ತಿದ್ದು ಅನೇಕ ಕಾರ್ಯಕ್ರಮಗ ಳಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಅವರು ಸಂಚರಿಸಲಿರುವ ಮಾರ್ಗದಲ್ಲಿ ಬರುವ ಶಿಕ್ಷಣ ಸಂಸ್ಥೆಗಳಿಗೆ ಅಂದು ಬಿಗಿಭದ್ರ ತೆಯ ದೃಷ್ಟಿಯಿಂದ ರಜೆ ಘೋಷಿಸಲಾಗಿದೆ.

ಈ ಬಗ್ಗೆ ಸರಕಾರ ಆದೇಶ ಹೊರಡಿಸಿದ್ದು ಇದರಂತೆ ಪ್ರಧಾನಿ ಹಾದು ಹೋಗಲಿರುವ ಐಐಎಸ್ಸಿ,ಗೊರಗುಂಟೆ ಪಾಳ್ಯ,ಸಿಎಂಟಿಐ,ವರ್ತುಲ ರಸ್ತೆ,ಡಾ.ರಾಜಕುಮಾರ್ ಸ್ಮಾರಕ ಮೇಲ್ಸೇತುವೆ,ಲಗ್ಗೆರೆ ಸೇತುವೆ,ನಾಯಂಡಹಳ್ಳಿ, ಮೈಸೂರು ರಸ್ತೆ ಆರ್.ವಿ.ಕಾಲೇಜು,ನಾಗರಬಾವಿ, ಸುಮನಹಳ್ಳಿ ಮೇಲ್ಸೇತುವೆ,ಎಂಇಐ ಜಂಕ್ಷನ್, ಗೋವ ರ್ಧನ್ ಚಿತ್ರಮಂದಿರ,ಯಶವಂತಪುರ ಮತ್ತು ಜಕ್ಕೂರು ವಿಮಾನ ನಿಲ್ದಾಣ ಮಾರ್ಗಗಳ ಸುತ್ತಮುತ್ತಲಿನ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಈ ರಜೆ ಅನ್ವಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

