ಕುಂದಾಪುರ –
ಭಾರಿ ಮಳೆಯ ಹಿನ್ನೆಲೆಯಲ್ಲಿ ಕುಂದಾಪುರ,ಬೈಂದೂರು ತಾಲೂಕು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಕುಂದಾಪುರ ಸಹಾಯಕ ಕಮಿಷನರ್ ಆದೇಶ ಹೊರಡಿಸಿ ದ್ದಾರೆ.ಇದೇ ಮೊದಲ ಬಾರಿಗೆ ಶಿರೂರು ಭಾಗದಲ್ಲಿ ಜಲದಿ ಗ್ಬಂಧನ ಉಂಟಾಗಿದೆ.ಅಲ್ಲದೇ ಕೆಳಪೇಟೆ,ಕರಾವಳಿ ರಸ್ತೆ ಭಾಗಶಃ ಮುಳುಗಡೆ ಆಗಿದ್ದು ಬಹುತೇಕ ಮನೆಗಳು ಜಲಾ ವ್ರತಗೊಂಡಿದೆ.ಕರಾವಳಿ ರಸ್ತೆ ನೀರು ತುಂಬಿ ಹರಿಯುತ್ತಿದೆ ಪೇಟೆ ಹೊಳೆ ತುಂಬಿ ಹರಿಯುತಿದ್ದು ನದಿ ದಂಡೆಯ ಮನೆ ಗಳು ಮುಳುಗಡೆಗೊಂಡಿದೆ.
ಸುಮಾರು ಹತ್ತಕ್ಕೂ ಅಧಿಕ ಮನೆ ಮುಳುಗಡೆ ಆಗಿದ್ದು ಅಗ್ನಿಶಾಮಕ ದಳ,ಸ್ಥಳೀಯರ ಸಹಕಾರದಿಂದ ಅಪಾಯದ ಲ್ಲಿದ್ದವರನ್ನು ರಕ್ಷಿಸಲಾಗಿದೆ.ಮನೆಯಲ್ಲಿರುವ ಕಾರುಗಳು ನೀರಲ್ಲಿ ಮುಳುಗಿ ಹೋಗಿದ್ದು ಒಂದು ಬೈಕ್ ನದಿಯಲ್ಲಿ ಕೊಚ್ಚಿ ಹೋಗಿದೆ.ದನಕರುಗಳು ನದಿಯಲ್ಲಿ ತೇಲಿ ಹೋಗಿದೆ
ಮಳೆಯ ಪ್ರಮಾಣ ಏರುತಿದ್ದು ರಕ್ಷಣಾ ಕಾರ್ಯ ನಡೆ ಯುತ್ತಿದೆ.ಸ್ಥಳದಲ್ಲಿ ಕಂದಾಯ ಇಲಾಖೆ,ಆರಕ್ಷಕ ಇಲಾಖೆ ಅಗ್ನಿಶಾಮಕ,ಪಂಚಾಯತ್ ಸದಸ್ಯರು ಅಧಿಕಾರಿಗಳು ಹಾಜರಿದ್ದಾರೆ.ಸ್ಥಳೀಯ ಯುವಕರು ಇಲಾಖೆಯೊಂದಿಗೆ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.1913 ರ ಬಳಿಕ ಇದೆ ಮೊದಲ ಬಾರಿಗೆ ಈ ರೀತಿಯ ಜಲ ಪ್ರಳಯ ಶಿರೂರಿನಲ್ಲಿ ಕಂಡು ಬಂದಿದೆ ಅನ್ನೋದು ಹಿರಿಯರ ಅಭಿ ಪ್ರಾಯವಾಗಿದ್ದು ರಕ್ಷಣಾ ಕಾರ್ಯ ಸೇರಿದಂತೆ ಹಲವು ಕಾರ್ಯಾಚರಣೆಗಳು ಸ್ಥಳದಲ್ಲೇ ಬಿಡುವಿಲ್ಲದೇ ನಡೆದಿವೆ.