ಕಲಬುರ್ಗಿ –
ಹಿಜಾಬ್ ಆದೇಶ ಬರುವ ಹಿನ್ನಲೆಯಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ನಾಳೆ ಒಂದು ದಿನ ಶಾಲಾ ಕಾಲೇಜು ಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ ಹೌದು ನಾಳೆ ಹಿಜಾಬ್ ತೀರ್ಪು ಬರುವ ಸಾದ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ದೃಷ್ಟಿಯಿಂದ ರಜೆಯನ್ನು ಘೋಷಣೆ ಮಾಡಿದ್ದಾರೆ
ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ಹಾಗೂ ಖಾಸಗಿ ಶಾಲಾ ಕಾಲೇಜುಗಳಿವೆ ರಜೆಯನ್ನು ಘೋಷಣೆ ಮಾಡಲಾ ಗಿದೆ.ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಲಾ ಕಾಲೇಜುಗಳಿಗೆ ರಜೆಯನ್ನು ನೀಡಲಾಗಿದೆ.ಇನ್ನೂ ಜಿಲ್ಲೆ ಯಾದ್ಯಂತ ಇಂದು ರಾತ್ರಿ 8 ಗಂಟೆಯಿಂದ 19 ನೇ ತಾರೀಖಿನ ಮುಂಜಾನೆ 6 ಗಂಟೆಯ ವರೆಗೆ 144 ಜಾರಿ ಮಾಡಿ ಆದೇಶ ಮಾಡಲಾಗಿದೆ.ಜಿಲ್ಲಾಧಿಕಾರಿ ಯಶವಂತ ಗುರುಕರರಿಂದ ಆದೇಶ ಮಾಡಲಾಗಿದೆ.