ಮೈಸೂರು –
ಲಾಕ್ ಡೌನ್ ತೆರವು ಬಳಿಕ ರಾಜ್ಯದಲ್ಲಿ ಕ್ರೈಮ್ ರೇಟ್ ಹೆಚ್ಚಾಗುತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಮೈಸೂರಿನಲ್ಲಿ ಮಾತನಾಡಿದ ಅವರು ಕೋವಿಡ್ ವೇಳೆ ಕ್ರೈಂ ರೇಟ್ ಕಡಿಮೆಯಾಗಿತ್ತು.ಲಾಕ್ ಡೌನ್ ತೆರವು ಬಳಿಕ ರಾಜ್ಯದಲ್ಲಿ ಕ್ರೈಂ ರೇಟ್ ಜಾಸ್ತಿಯಾ ಗುತ್ತಿದೆ.ಸರಗಳ್ಳತನ,ದರೋಡೆ ಯಂತಹ ಪ್ರಕರಣ ಗಳು ಲಾಕ್ ಡೌನ್ ಮುಗಿದ ಬಳಿಕ ಕಂಡುಬರು ತ್ತಿದೆ.ಮೈಸೂರು ನಗರದಲ್ಲಿ ಸರಗಳ್ಳತ ಇತ್ತು, ಆದರೆ ಈಗ ಜಿಲ್ಲೆಯ ಗ್ರಾಮೀಣ ಭಾಗದಲ್ಲೂ ಸರಗಳ್ಳತನ ಆಗುತ್ತಿವೆ ಎಂದರು. ಇನ್ನೂ ಸಿಂಥೆಟಿಕ್ ಡ್ರಗ್ಸ್ ತಡೆಗಟ್ಟುವ ಚಾಲೆಂಜ್ ನಮಗಿದೆ.ಈಗಾಗಲೇ 50 ಕೋಟಿ ಅಷ್ಟು ಡ್ರಗ್ ನಾಶ ಮಾಡಿದ್ದೇವೆ.5 ವರ್ಷ ದಷ್ಟು ಡ್ರಗ್ ಕೇವಲ ಒಂದೇ ವರ್ಷದಲ್ಲಿ ಸಂಗ್ರಹ ವಾಗಿದೆ.ಸಿಂಥೆಟಿಕ್ ಡ್ರಗ್ಸ್ ತಡೆಗಟ್ಟುವ ಕೆಲಸ ವಾಗುತ್ತಿದೆ.

ಡ್ರಗ್ಸ್ ವಿದೇಶದಿಂದ ಡಾರ್ಕ್ ವೆಬ್ ನಲ್ಲಿ ಬರುತ್ತಿವೆ. ಬಹಳ ಸೆಕ್ಯೂರಿಟಿ ನಲ್ಲಿ ಬರುತ್ತಿದೆ,ಇದನ್ನ ಕರ್ನಾಟಕ ಪೊಲೀಸರು ಯಶಸ್ವಿಯಾಗಿ ಹಿಮ್ಮೆಟ್ಟಿದ್ದಾರೆ. ಬಹಳಷ್ಟು ಸಾರಿ ಸಾಮಾನ್ಯ ಪೋಸ್ಟ್ ನಲ್ಲಿ ಡ್ರಗ್ಸ್ ಸರಬರಾಜುಗುತ್ತದೆ.ಡ್ರಗ್ ಕೇಸ್ ಸಂಬಂದಿಸಿದಂತೆ ವಿದೇಶಿಗರ ಬಂಧನವಾಗಿದೆ.ಕಳೆದ ವರ್ಷದಲ್ಲಿ 15 ರಿಂದ 20 ಮಂದಿ ಬಂಧನವಾಗಿದೆ.ಈ ಪೈಕಿ ಆಫ್ರಿಕನ್ಸ್ ನವರೆ ಹೆಚ್ಚಿದ್ದಾರೆ ಎಂದರು.