ಬೆಂಗಳೂರು –
ಇದುವರೆಗಿನ ಅಖಂಡ ಸೇವಾ ಜೇಷ್ಠತೆಯನ್ನು ಕಾಪಾಡ ಲಾಗುತ್ತದೆಯೇ? ಪ್ರೌಢಶಾಲೆಗೆ ಪ್ರಮೋಷನ್ ನೀಡುವಾಗ ಯಾವ ದಿನಾಂಕವನ್ನು ಪರಿಗಣಿಸಲಾಗುತ್ತದೆ PSTಗೆ ಸೇರಿದ ದಿನಾಂಕವೇ? GPT ಗೆಸೇರಿದ ದಿನಾಂಕವೇ?
GPT ಗೆ ಪ್ರಮೋಷನ್ ನೀಡಿದ ನಂತರ ಪ್ರೌಢಶಾಲೆಗೆ ಬಡ್ತಿ ನೀಡುವಾಗ ಉಂಟಾಗುವ ಗೊಂದಲಗಳು ಪ್ರೌಢಶಾಲಾ ಬಡ್ತಿಯನ್ನು ಸಹ ಜಿಪಿಟಿ ಶಿಕ್ಷಕರಿಗೆ ಮತ್ತು ಶಿಕ್ಷಕರಿಗೆ ಹಂಚ ಲಾಗುತ್ತದೆಯೇ?
PST ಯಿಂದ GPT ಗೆ ಮುಂಬಡ್ತಿ ಹೊಂದಿದ ಶಿಕ್ಷಕರಿಗೆ 10,15,20,25, ವರ್ಷದ ಕಾಲಮಿತಿ ವೇತನ ಬಡ್ತಿ ನೀಡಲಾಗುತ್ತದೆಯೇ?
- ಈಗಾಗಲೇ ಅನೇಕ ಶಿಕ್ಷಕರು MA.BED ಹೊಂದಿರುವ ಶಿಕ್ಷಕರು ಮುಖ್ಯಗುರುಗಳ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. GPT ಗೆ ವಿಲೀನ ಮಾಡುವಾಗ ಇವರು ಮುಂದೆ ಯಾವ ಹುದ್ದೆ ಬಡ್ತಿಗೆ ಅರ್ಹರು ?
ಈಗಾಗಲೇ ಮುಖ್ಯಗುರುಗಳ ವರ್ಗಾವಣೆ ಜೊತೆ ಶಿಕ್ಷಕರ ಹೆಚ್ಚುವರಿ ಹುದ್ದೆಗಳ ಮರುಹೊಂದಾಣಿಕೆ PST ಹಾಗೂ GPT ಶಿಕ್ಷಕರಿಗೆ ಹೇಗೆ ಹೊಂದಾಣಿಕೆ ಮಾಡುತ್ತೀರಿ?
ಮೇಲ್ಕಂಡ ಗೊಂದಲಗಳಿಗೆ ಸ್ಪಷ್ಟ ಪರಿಹಾರವನ್ನು ಈಗಲೇ ಕಂಡುಕೊಳ್ಳುವುದು ಒಳಿತು.