ಧಾರವಾಡದಲ್ಲಿ ಭೀಕರ ಅಪಘಾತ ತಾಯಿ ಮಗಳು ಸ್ಥಳದಲ್ಲೇ ಸಾವು – ಬೈಕ್ ಗೆ ಡಿಕ್ಕಿಯಾದ ಅಪರಿಚಿತ ವಾಹನ…..

Suddi Sante Desk
ಧಾರವಾಡದಲ್ಲಿ ಭೀಕರ ಅಪಘಾತ ತಾಯಿ ಮಗಳು ಸ್ಥಳದಲ್ಲೇ ಸಾವು – ಬೈಕ್ ಗೆ ಡಿಕ್ಕಿಯಾದ ಅಪರಿಚಿತ ವಾಹನ…..

ಧಾರವಾಡ

ಹಿಂಬದಿಯಿಂದ ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ ತಾಯಿ ಮಗಳೊಬ್ಬಳು ದಾರುಣವಾಗಿ ಸಾವಿಗೀ ಡಾದ ಘಟನೆ ಧಾರವಾಡ ದಲ್ಲಿ ನಡೆದಿದೆ. ನಗರದ ಹೊರಹೊಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಒಂದು ಅಪಘಾತ ನಡೆದಿದೆ.

ಬೆಳಗಾವಿ ರಸ್ತೆಯ ಬೇಲೂರು ಬಳಿ ಈ ಒಂದು ಘಟನೆ ನಡೆದಿದೆ.ಘಟನೆ ವೇಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಸಂಗವ್ವ ಹೆಗ್ಗಣ್ಣವರ(20) ಹಾಗೂ ಮಾಯಕ್ಕ(1)ಸಣ್ಣಪುಟ್ಟ ಗಾಯಕ್ಕೊ ಳಗಾಗಿದ್ದಾರೆ ಜಕ್ಕಪ್ಪ.

ಪತ್ನಿ ಹಾಗೂ ಒಂದು ವರ್ಷದ ಮಗುವಿನ ಜೊತೆ ಹುಬ್ಬಳ್ಳಿಗೆ ಬರುವಾಗ ಈ ಒಂದು ಘಟನೆ ನಡೆದಿದೆ.ಮೃತರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಾಗರಾಳ ಗ್ರಾಮದವರಾಗಿದ್ದಾರೆ. ಸ್ಥಳಕ್ಕೆ ಗರಗ ಪೊಲೀಸರು ಭೇಟಿ, ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.