ಕಲಬುರ್ಗಿ –
ಭೀಕರ ರಸ್ತೆ ಅಪಘಾತಕ್ಕೆ 5 ಜನ ಸ್ಥಳದಲ್ಲೇ ಸಾವಿಗೀಡಾದ ಧಾರುಣ ಘಟನೆ ಕಲಬುರ್ಗಿಯ ಅಫಜಲಪೂರ ಹೊರ ವಲಯದಲ್ಲಿ ನಡೆದಿದೆ. ಅಫಜಲಪೂರ ಕಡೆಯಿಂದ ಮಹಾರಾಷ್ಟ್ರ ಕಡೆ ಹೊರಟಿದ್ದ ಕಾರು ಅಪಘಾತಕ್ಕಿಡಾಗಿದೆ. ಇನ್ನೂ ಅಪಘಾತಕ್ಕೆ ಕಾರಿನಲ್ಲಿದ್ದ ಡ್ರೈವರ್ ಹಾಗೂ ನಾಲ್ಕು ಜನ ಹೆಣ್ಣು ಮಕ್ಕಳು ಸಾವಿಗೀಡಾಗಿದ್ದಾರೆ.ಡ್ರೈವರ್ ಗೆ ನಿದ್ದೆ ಬಂದಿದ್ದರಿಂದ ಕಾರಿನ ನಿಯಂತ್ರಣವನ್ನು ಕಳೆದುಕೊಂಡಿ ದ್ದಾನೆ ಚಾಲಕ.

ಹೀಗಾಗಿ ವೇಗವಾಗಿದ್ದ ಕಾರು ಮರಕ್ಕೆ ಹೋಗಿ ಡಿಕ್ಕಿ ಹೊಡದಿದ್ದು ಭೀಕರ ಅಫಘಾತ ಸಂಭವಿಸಿದೆ.ಇನ್ನೂ ಈ ಒಂದು ಘಟನೆಯಿಂದಾಗಿ ಕಾರಿನಲ್ಲಿ ಪ್ರಯಾಣ ಬೆಳೆಸುತ್ತಿ ದ್ದವರು ಕಾರಿನಲ್ಲಿಯೇ ಪ್ರಾಣವನ್ನು ಬಿಟ್ಟಿದ್ದಾರೆ.ಹಾಗೇ ಅಫಜಲಪುರ ತಾ.ದೇವಲಗಾಣಗಾಪುರದ ದತ್ತಾತ್ರೇಯನ ದರ್ಶನ ಮಾಡಿಕೊಂಡು ವಾಪಸ್ ಹೋಗುವಾಗ ಈ ಒಂದು ಘಟನೆ ನಡೆದಿದೆ.

ಘಟನೆಯಲ್ಲಿ ಇಬ್ಬರು ಹುಡುಗರು ಎರಡು ವರ್ಷದ ಹುಡುಗನಿಗೆ ಗಂಭೀರ ಗಾಯಗಳಾಗಿದ್ದು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಇನ್ನೂ ಸುದ್ದಿ ತಿಳಿದ ಅಫಜಲಪೂರ ಪೊಲೀಸರು ಸ್ಥಳಕ್ಕೇ ಆಗಮಿಸಿ ಪರಿಶೀಲನೆ ಮಾಡುತ್ತಿದ್ದು ಮೃತರ ಕುರಿತಂತೆ ಮಾಹಿತಿ ಯನ್ನು ಕಲೆಹಾಕುತ್ತಿದ್ದಾರೆ. ಅಫಜಲಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ
ಪರಶುರಾಮ ಗೌಡರ ಜೊತೆ ಮಂಜು ಸರ್ವಿ ಸುದ್ದಿ ಸಂತೆ ಕ್ರೈಮ್ ಡೆಸ್ಕ್ ಧಾರವಾಡ