ಹೊಟೇಲ್ ಮಾಲೀಕ ಆತ್ಮಹತ್ಯೆ – ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಗಣೇಶ್…..

Suddi Sante Desk

ವಿಜಯಪುರ‌ –

ಹೋಟೆಲ್‌ ಉದ್ಯಮದಲ್ಲಿ ನಷ್ಟದಿಂದ ಬೇಸತ್ತ ಹೊಟೇಲ್ ಮಾಲೀಕರೊಬ್ಬರು ಆತ್ಮಹತ್ಯೆ ಮಾಡಿ ಕೊಂಡ ಘಟನೆ ವಿಜಯಪುರ ದಲ್ಲಿ ನಡೆದಿದೆ. ಹೊಟೇಲ್ ನಲ್ಲಿ ಅನುಭವಿಸಿದ ಅತಿಯಾದ ನಷ್ಟ ದಿಂದ ಬೇಸತ್ತು ಈ ಒಂದು ಕಾರಣಕ್ಕೆ ಹೋಟೆಲ್ ಮಾಲೀಕ ಆತ್ಮಹತ್ಯೆಗೆ ಶರಣಾಗಿದ್ದಾರೆ.ಮೃತರನ್ನು ಗಣೇಶ್‌ (40) ಎಂದು ಗುರುತಿಸಲಾಗಿದ್ದು ಮಂಗ ಳೂರು ಮೂಲದವರಾಗಿದ್ದಾರೆ.ಇವರು ಇಂಡಿಯಲ್ಲಿ ಹೋಟೆಲ್ ನಡೆಸುತ್ತಿದ್ದರು.30 ಲಕ್ಷಕ್ಕೂ ಅಧಿಕ ಸಾಲ ಹೊಂದಿದ್ದ ಇವರು ಬಾಡಿಗೆ ಕಟ್ಟಡ ದಲ್ಲಿ ಹೋಟೆಲ್ ಮತ್ತು ಲಾಡ್ಜಿಂಗ್ ಆರಂಭಿಸಿದ್ದರು. ಕೋವಿಡ್ ಕಾರಣದಿಂದ ಹೋಟೆಲ್ ಉದ್ಯಮದ ಮೇಲೆ ಭಾರೀ ಹೊಡೆತ ಬಿದ್ದಿದ್ದರಿಂದ ಗಣೇಶ್ ಆರ್ಥಿಕ ಸಂಕಷ್ಟದಲ್ಲಿದ್ದರು ಎನ್ನಲಾಗಿದೆ.

ಹೋಟೆಲ್ ನಡೆಸಲು ಪಡೆದ ಸಾಲ ಹಿಂದಿರುಗಿಸ ಲಾಗದೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಇಂಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲೀಸರು ತನಿಖೆ ನಡೆಸು ತಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.