ದಾವಣಗೆರೆ –
ಎಂಟು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಗೃಹಿಣಿಯೊಬ್ಬರು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆಯ ಬಂಬೂಬಜಾರ್‌ನ ಮನೆಯಲ್ಲಿ ಈ ಒಂದು ಘಟನೆ ನಡೆದಿದೆ.ಬಿಬೀ ಅಜೀರಾ (19) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿಯಾಗಿದ್ದಾರೆ.ಕಳೆದ ತಿಂಗಳ ಹಿಂದೆ ಬಿಬೀ ಅಜಿರಾ-ಇಮ್ರಾನ್ ಜೊತೆಗೆ ಮದುವೆಯಾಗಿದ್ದರು.

1ಲಕ್ಷ ನಗದು, 3 ತೊಲೆ ಚಿನ್ನಾಭರಣ ಕೊಟ್ಟು ಅದ್ದೂರಿಯಾಗಿ ಮದುವೆ ಮಾಡಿದ್ದರಂತೆ.ವ್ಯಾಪಾರ ಮಾಡಲು ತವರು ಮನೆಯಿಂದ ಹಣ ಹಾಗೂ ಬೈಕ್ ತರುವಂತೆ ಪೀಡಿಸುತ್ತಿದ್ದರಂತೆ ಪತಿ ಹಾಗೂ ಮನೆ ಯವರು.

ಇದರಿಂದ ಮನನೊಂದು ತವರು ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ ಬಿಬೀ ಅಜೀರಾ.ಇನ್ನೂ ನ್ಯಾಯಕ್ಕಾಗಿ ಬಿಬೀ ಅಜೀರಾ ಕುಟುಂಬಸ್ಥರ ಆಗ್ರಹ ಮಾಡಿದ್ದಾರೆ. ಜಿಲ್ಲಾಸ್ಪತ್ರೆ ಶವಾಗಾರಕ್ಕೆ ತಹಸೀಲ್ದಾರ್ ಗಿರೀಶ್ ಭೇಟಿ, ಪರಿಶೀಲನೆ ಮಾಡಿದರು.ಇನ್ನೂ ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.