ಧಾರವಾಡ –
ಧಾರವಾಡ ಹೊಸ ಬಸ್ ನಿಲ್ದಾಣದಲ್ಲಿ ಹೇಗಿದೆ ವ್ಯವಸ್ಥೆ ನೋಡಿ – ಹೀಗೆ ಮಲಗಬೇಕು…..ಹೆಸರಿಗೆ ಮಾತ್ರ ದೊಡ್ಡ ಬಸ್ ನಿಲ್ದಾಣ…..
ಧಾರವಾಡದ ಹೊಸ ಬಸ್ ನಿಲ್ದಾಣ ಹೆಸರಿಗೆ ಮಾತ್ರ ದೊಡ್ಡ ಬಸ್ ನಿಲ್ದಾಣ ಈ ಒಂದು ಬಸ್ ನಿಲ್ದಾಣದಲ್ಲಿ ಬಸ್ ತಪ್ಪಿದರೆ ಮಲಗಲು ಯಾವುದೇ ರೀತಿಯ ವ್ಯವಸ್ಥೆ ಇಲ್ಲ.ಶ್ರೀಮಂತರಾದರೆ ಲಾಡ್ಜ್ ಗಳಿಗೆ ಹೋಗುತ್ತಾರೆ ಬಡವರಿಗೆ ಬಸ್ ನಿಲ್ದಾಣದಲ್ಲಿ ಯಾವುದೇ ರೀತಿಯ ವ್ಯವಸ್ಥೆ ಸೌಲಭ್ಯಗಳಿಲ್ಲ ಹೀಗಾಗಿ ಅಪ್ಪಿ ತಪ್ಪಿ ಬಸ್ ತಪ್ಪಿದರೆ ಸಾಕು ನಿಲ್ದಾಣದಲ್ಲಿನ ಕುಳಿತುಕೊಳ್ಳುವ ಆಸನಗಳ ಮೇಲೆಯೇ ಮಲಗುವ ಪರಸ್ಥಿತಿ.
ಈ ಹಿಂದೆ ಇದ್ದ ವಿಶ್ರಾಂತಿ ಕೋಠಡಿಯನ್ನು ತಗೆದು ಸಧ್ಯ ಆ ಒಂದು ಜಾಗೆಯಲ್ಲಿ ಬೇಕರಿ ಆರಂಭ ಮಾಡಲಾಗಿದೆ. ಎಷ್ಟು ಬೇಕರಿಗಳಿದ್ದರೆ ಎಷ್ಟು ಬಾಡಿಗೆ ಬಂದರು ಕೂಡಾ ಇಲಾಖೆಯ ಅಧಿಕಾರಿಗಳಿಗೆ ಸಮಾಧಾನವಿಲ್ಲ ಇದ್ದ ಸೌಲಭ್ಯಗಳನ್ನು ಬಂದ್ ಮಾಡುತ್ತಾರೆ ಆದರೆ ಬಾಡಿಗೆ ಬರುವ ಮೂಲವನ್ನು ಬಂದ್ ಮಾಡೊದಿಲ್ಲ ಹೀಗಾಗಿ ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ವಿಶ್ರಾಂತಿಗಾಗಿ ವ್ಯವಸ್ಥೆ ಇಲ್ಲದ ಪರಸ್ಥಿತಿ ಕಂಡು ಬರುತ್ತಿದೆ
ಸಾರ್ವಜನಿಕರು ಅದರಲ್ಲೂ ಮಹಿಳೆಯರಿಗೆ ಇದೊಂದು ದೊಡ್ಡ ಸಮಸ್ಯೆಯಾಗಿದ್ದು ಇನ್ನಾದರೂ ಅಧಿಕಾರಿಗಳು ಇತ್ತ ಗಮನ ಹರಿಸಿ ವಿಶ್ರಾಂತಿಗಾಗಿ ಒಂದು ರೂಮ್ ವ್ಯವಸ್ಥೆ ಮಾಡಿದರೆ ಸಾರ್ವಜನಿಕರ ಹಿತ ಕಾಪಾಡಿದಂತೆ ಆಗುತ್ತದೆ ಈ ಒಂದು ನಿರೀಕ್ಷೆಯಲ್ಲಿ ಸುದ್ದಿ ಸಂತೆ ಟೀಮ್ ನೊಂದಿಗೆ ಸಾರ್ವಜನಿಕರು ಇದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ……