ಬೆಂಗಳೂರು –
ರಾಜ್ಯದಲ್ಲಿ ಮಹಾಮಾರಿ ಕರೋನಾ ತೀವ್ರವಾಗಿ ಹರಡು ತ್ತಿದ್ದು ಇನ್ನೂ ಸಮಾಜದೊಂದಿಗೆ ಶಾಲೆಗಳಲ್ಲೂ ಕೂಡಾ ಹರಡುತ್ತಿದ್ದು ಒಂದೇ ವಾರದಲ್ಲಿ ರಾಜ್ಯದಲ್ಲಿ 900 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢವಾಗಿದೆ. 1 ರಿಂದ 10 ನೇ ತರಗತಿಯ 900 ವಿದ್ಯಾರ್ಥಿಗಳಿಗೆ ಕೊರೊನಾ ಸೊಂಕು ತಗುಲಿದೆ ಎಂದು ಬಿ.ಸಿ. ನಾಗೇಶ್ ಮಾಹಿತಿ ನೀಡಿದ್ದಾರೆ.ಜನವರಿ 01 ರಿಂದ ಈವರೆಗೆ ಯಾವ ಜಿಲ್ಲೆಯಲ್ಲಿ ಎಷ್ಟು ಮಕ್ಕಳಿಗೆ (1ರಿಂದ 14 ವರ್ಷದ) ಕೊರೊನಾ ಸೋಂಕು ತಗುಲಿದೆ ಅನ್ನೊದನ್ನು ನೋಡೊ ದಾದರೆ

ಕೋಲಾರ- 43
ಮೈಸೂರು- 209
ವಿಜಯಪುರ- 32
ಗದಗ- 5
ದಕ್ಷಿಣ ಕನ್ನಡ- 329
ಚಿಕ್ಕಬಳಳಾಪುರ- 19
ಬೆಳಗಾವಿ- 152
ಚಿಕ್ಕಮಗಳೂರು- 58
ಕೊಡಗು- 5
ಕಲಬುರಗಿ- 10
ಚಿತ್ರದುರ್ಗ- 10
ಧಾರವಾಡ- 41
ಮಂಡ್ಯ- 124
ಹಾಸನ- 58
ದಾವಣಗೆರೆ- 43
ಬೆಂಗಳೂರು ಗ್ರಾಮಾಂತರ- 71
ತುಮಕೂರು ಜಿಲ್ಲೆ ಶಿರಾ ತಾಲೂಕಿನ ಅಂಬೇಡ್ಕರ್ ವಸತಿ ಶಾಲೆಯಲ್ಲಿ 38 ಮಕ್ಕಳಿಗೆ ಕೊರೊನಾ ಸೋಂಕು ದೃಢವಾ ಗಿದೆ ಇನ್ನೂ ಈ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ಅಧಿಕಾರಿಗಳಿಗೆ ಖಡಕ್ ಸೂಚನೆ ಯನ್ನು ನೀಡಿದ್ದು ಸರಿಯಾಗಿ ಸೂಕ್ತವಾದ ಕ್ರಮವನ್ನು ಕೈಗೊಳ್ಳುವಂತೆ ಹಾಗೆ ವ್ಯವಸ್ಥೆಯನ್ನು ಮಾಡುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಇತ್ತ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಕೂಡಾ ಮಾತನಾಡಿ ಯಾವುದೇ ಕಾರಣಕ್ಕೂ ಶಾಲೆಯನ್ನು ಬಂದ್ ಮಾಡಲಾಗುವುದಿಲ್ಲ ಪೋಷಕರು ಯಾವುದೇ ರೀತಿಯಲ್ಲೂ ಆತಂಕವನ್ನು ಪಡದಂತೆ ಹೇಳಿದ್ದಾರೆ.