ಧಾರವಾಡ ಜಿಲ್ಲೆಯ ಹೊಸ ಜಿಲ್ಲಾಧಿಕಾರಿ ದಿವ್ಯಪ್ರಭು ಬಗ್ಗೆ ನಿಮಗೆಷ್ಟು ಗೊತ್ತು – ತಮಿಳುನಾಡಿನ 2014 ನೇ ಬ್ಯಾಚ್ ಮಹಿಳಾ ಅಧಿಕಾರಿಯ ಸಾಧನೆ ಅವಲೋಕನದ ಒಂದಿಷ್ಟು ಮಾಹಿತಿ…..

Suddi Sante Desk
ಧಾರವಾಡ ಜಿಲ್ಲೆಯ ಹೊಸ ಜಿಲ್ಲಾಧಿಕಾರಿ ದಿವ್ಯಪ್ರಭು ಬಗ್ಗೆ ನಿಮಗೆಷ್ಟು ಗೊತ್ತು – ತಮಿಳುನಾಡಿನ 2014 ನೇ ಬ್ಯಾಚ್ ಮಹಿಳಾ ಅಧಿಕಾರಿಯ ಸಾಧನೆ ಅವಲೋಕನದ ಒಂದಿಷ್ಟು ಮಾಹಿತಿ…..

ಧಾರವಾಡ

ಧಾರವಾಡ ಜಿಲ್ಲೆಯ ಹೊಸ ಜಿಲ್ಲಾಧಿಕಾರಿಯಾಗಿ ದಿವ್ಯಪ್ರಭು ಜಿ.ಆರ್.ಜೆ ಅಧಿಕಾರ ಸ್ವೀಕಾರ ಖಡಕ್ ಮಹಿಳಾ ಅಧಿಕಾರಿ ಯ ಕುರಿತು ಒಂದಿಷ್ಟು ಮಾಹಿತಿ ನಿಮ್ಮ ಸುದ್ದಿ ಸಂತೆ ಯಲ್ಲಿ

ಹೌದು ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿ ಶ್ರೀಮತಿ ದಿವ್ಯಪ್ರಭು ಜಿ.ಆರ್.ಜೆ ಅವರು  ಧಾರವಾಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಯಾಗಿ ಅಧಿಕಾರ ಸ್ವೀಕರಿಸಿದರು.

ಜಿಲ್ಲಾಧಿಕಾರಿಗಳಾಗಿದ್ದ ಗುರುದತ್ತ ಹೆಗಡೆ ಅವರು ವರ್ಗಾವಣೆ ಆಗಿದ್ದು ಅವರ ಸ್ಥಳಕ್ಕೆ ಹಿರಿಯ ಐಎಎಸ್ ಅಧಿಕಾರಿ ಶ್ರೀಮತಿ ದಿವ್ಯಪ್ರಭು ಜೆ.ಆರ್.ಜಿ ಅವರನ್ನು ನೇಮಕಗೊಳಿಸಿ, ಸರಕಾರ ಆದೇಶ ಹೊರಡಿಸಿದೆ

ತಮಿಳುನಾಡು ಮೂಲದ ದಿವ್ಯಪ್ರಭು ಅವರು 2014 ನೇ ಸಾಲಿನ ಐ.ಎ.ಎಸ್.ಬ್ಯಾಚ್ ಅಧಿಕಾರಿ ಆಗಿದ್ದು, ಈಗಾಗಲೇ ವಿವಿಧ ಆಡಳಿತಾತ್ಮಕ ಹುದ್ದೆ ಗಳಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ.

ರಾಯಚೂರು ಜಿಲ್ಲೆಯ ಲಿಂಗಸಗೂರಿನಲ್ಲಿ ಉಪವಿಭಾಗಾಧಿಕಾರಿಯಾಗಿ ಸೇವೆ ಆರಂಭಿ ಸಿರುವ ಇವರು, ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತರಾಗಿ, ಮಂಡ್ಯ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಾಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಪ್ರಸ್ತುತ ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧಿಕಾರಿಗಳಾ ಗಿದ್ದ ಶ್ರೀಮತಿ ದಿವ್ಯಪ್ರಭು ಅವರು ಸರಕಾರದ ಆದೇಶದಂತೆ ಸಧ್ಯ ಧಾರವಾಡ ಜಿಲ್ಲಾಧಿಕಾರಿ ಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ದಿವ್ಯಪ್ರಭು ಅವರು ಚಿತ್ರದುರ್ಗ ಜಿಲ್ಲಾಧಿಕಾ ರಿಗಳಾಗಿದ್ದಾಗ ಚುನಾವಣಾ ಕಾರ್ಯಗಳನ್ನು ಉತ್ತಮವಾಗಿ ನಿರ್ವಹಿಸಿದ್ದಕ್ಕಾಗಿ ಭಾರತ ಚುನಾವಣಾ ಆಯೋಗದಿಂದ ರಾಷ್ಟ್ರೀಯ ಪ್ರಶಸ್ತಿಯನ್ನು

ಮತ್ತು ರಾಷ್ಟ್ರೀಯ ಸ್ವಚ್ಛ ಸರ್ವೇ ಕ್ಷಣಾ ಅಭಿ ಯಾನದಲ್ಲಿ ಇವರ ನೇತೃತ್ವದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕು ಉತ್ತಮ ಸಾಧನೆ ಮಾಡಿದ್ದರಿಂದ ಕೇಂದ್ರ ಸರಕಾರದ ಸ್ವಚ್ಛ ಸರ್ವೇಕ್ಷಣಾ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿ ದ್ದಾರೆ.

ಜನಪರ ಕರ್ತವ್ಯ ನಿರ್ವಹಣೆಯ ಆಶಯದ ನೂತನ ಜಿಲ್ಲಾಧಿಕಾರಿಗಳು ಆರೋಗ್ಯ, ಶಿಕ್ಷಣ, ಗ್ರಾಮೀಣ ಅಭಿವೃದ್ದಿ, ಮಹಿಳೆಯರ, ದುರ್ಬಲವ ರ್ಗದವರ ಏಳಿಗೆಯಯೊಂದಿಗೆ ಸರಕಾರದ ಯೋಜನೆಗಳನ್ನು ಸಮರ್ಪಕ ಅನುಷ್ಠಾನ ಗೊಳಿಸಿ

ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ, ನೌಕರರ, ಸಾರ್ವಜನಿಕರ ಸಹಕಾರದಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಕಾರ್ಯನಿರ್ವಹಿಸುವದಾಗಿ ತಿಳಿಸಿದ್ದಾರೆ

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.