This is the title of the web page
This is the title of the web page

Live Stream

[ytplayer id=’1198′]

April 2025
T F S S M T W
 12
3456789
10111213141516
17181920212223
24252627282930

| Latest Version 8.0.1 |

State News

ಶಾಸಕ ಅಮೃತ ದೇಸಾಯಿ ಬಗ್ಗೆ ನಿಮಗೇಷ್ಟು ಗೊತ್ತು – ಧಣಿ ಎಂದೇ ಹೆಸರಾದ ಅಮೃತ ದೇಸಾಯಿ ನಡೆದು ಬಂದ ಕುರಿತು ಒಂದು ಅವಲೋಕನ…..

WhatsApp Group Join Now
Telegram Group Join Now

ಧಾರವಾಡ –

ಸಾಮಾನ್ಯವಾಗಿ ಯಾವುದೇ ಒಂದು ವ್ಯಕ್ತಿಗೆ ಒಂದು ಬಿರುದಾಂಕಿತ ಒಂದು ಪದವಿ ಸಿಗೊದು ಅಷ್ಟೊಂದು ಸರಳ ಸುಲಭದ ಮಾತಲ್ಲ.ಅದರಲ್ಲೂ ಆ ಒಂದು ವ್ಯಕ್ತಿಯನ್ನು ನಮ್ಮ ನಾಯಕ ಅಂತಾ ಅಂದುಕೊಳ್ಳೊದು ಸುಲಭದ ಮಾತೇ ಅಲ್ಲ ಹೀಗಿರುವಾಗ ಧಾರವಾಡ ದಲ್ಲಿ ಸಾಮಾನ್ಯ ವ್ಯಕ್ತಿಯೊಬ್ಬರನ್ನು ನಮ್ಮ ಧಣಿ ನಮ್ಮ ನಾಯಕ ಅಂತಾ ಶಾಸಕ ಅಮೃತ ದೇಸಾಯಿ ಅವರಿಗೆ ಎನ್ನುತ್ತಿದ್ದಾರೆ ಜನರು

ಹೌದು ಈ ಒಂದು ಮಾತಿಗೆ ಸಾಕ್ಷಿ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ.ಧಾರವಾಡ ತಾಲ್ಲೂಕಿನ ಹಂಗರಕಿ ಗ್ರಾಮದ ಪ್ರಸಿದ್ಧ ದೇಸಾಯಿ ಮನೆತನದಲ್ಲಿ ನವೆಂಬರ್ 16,1977 ರಲ್ಲಿ ಜನಿಸಿದರು. ಇವರ ಅಜ್ಜನ ವರಾದ ಬಸಪ್ಪ ದೇಸಾಯಿಯವರು 1952 ರಿಂದ 1962 ರವರೆಗೆ ಎರಡು ಬಾರಿ ಧಾರವಾಡ ಮತ್ತು ಕಲಘಟಗಿ ಕ್ಷೇತ್ರದಿಂದ ಶಾಸಕರಾಗಿದ್ದರು.

ನಂತರ ತಂದೆಯವರಾದ ಎ ಬಿ ದೇಸಾಯಿ ಅವರು 1985 ರಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಶಾಸಕರಾಗಿ ಸಾಕಷ್ಟು ಪ್ರಮಾಣದಲ್ಲಿ ಕ್ಷೇತ್ರದಲ್ಲಿ ಜನಪರ ಕೆಲಸವನ್ನು ಮಾಡಿ ಜನಪ್ರಿಯ ಶಾಸಕರಾಗಿ ಜನರಿಂದ ಕರೆಯಿಸಿ ಕೊಂಡು ಈಗಲೂ ಕೂಡಾ ಜನ ಸೇವೆಯನ್ನು ಮಾಡತಾ ಇದ್ದಾರೆ

ಇನ್ನೂ ತಂದೆ ಎ ಬಿ ದೇಸಾಯಿ ತಾಯಿ ಇಂದುಮತಿ ದೇಸಾಯಿ ಹಾವೇರಿ ಜಿಲ್ಲೆಯ ಹಂದಿಗನೂರ ಗ್ರಾಮದ ಪ್ರಸಿದ್ಧ ಮನೆತನವಾದ ಆರ್ ಬಿ ಮಾಮಲೆ ದೇಸಾಯಿ ಯವರ ಸುಪುತ್ರಿಯಾಗಿದ್ದಾರೆ.ಇವರ ಪುತ್ರ ರಾಗಿರುವ ಅಮೃತ ದೇಸಾಯಿ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವನ್ನು ಧಾರವಾಡದ ಕೆಇ ಬೊರ್ಡ್ ಶಾಲೆಯಲ್ಲಿ ಕಲಿತು ನಂತರ ಕೆಸಿಡಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ದಲ್ಲಿ ಪದವಿ ಪೊರೈಸಿ ಪಡೆದ ನಂತರ ಸಮಾಜ ಸೇವೆ ಯೊಂದಿಗೆ ಕೃಷಿ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡರು

ನಂತರ ಧಾರವಾಡ 71 ಮತ ಕ್ಷೇತ್ರದಲ್ಲಿ ಜನರ ಮಧ್ಯೆ ಇದ್ದುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಸಮಸ್ಯೆ ಗಳನ್ನು ಹೊತ್ತುಕೊಂಡು ಬಂದ ಕ್ಷೇತ್ರದ ಸಾರ್ವಜನಿಕರ ನೋವಿಗೆ ಧ್ವನಿಯಾಗಿ ಸ್ಪಂದಿಸಿ ಜನಪ್ರಿಯ ಜನಾನುರಾಗಿ ನಾಯಕರಾಗಿ ಗುರುತಿಸಿಕೊಂಡರು

ಜನರ ಒತ್ತಾಸೆಯದ ಮೇರೆಗೆ 2005 ರಲ್ಲಿ ಧಾರವಾಡದ ಕೊಟೂರ ಮತ ಕ್ಷೇತ್ರದಿಂದ ಮೊದಲ ಬಾರಿಗೆ ಜಿಲ್ಲಾ ಪಂಚಾಯತ ಅಖಾಡಕ್ಕೆ ಸ್ಪರ್ಧಿಸಿ ಗೆದ್ದು ಬಂದರು.ನಂತರ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಸಾಕಷ್ಟು ಪ್ರಮಾಣದಲ್ಲಿ ಕೆಲಸ ಕಾರ್ಯ ಅಭಿವೃದ್ಧಿ ಗಳನ್ನು ಮಾಡಿ ಜನ ಸೇವೆಯನ್ನು ಮತ್ತೊಂದು ಹಂತದಲ್ಲಿ ಆರಂಭ ಮಾಡಿದರು

ಇದರೊಂದಿಗೆ ಸಾಕಷ್ಟು ಪ್ರಮಾಣದಲ್ಲಿ ಜನ ಸೇವೆ ಮಾಡುತ್ತಾ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ ಮಮ್ಮಿಗಟ್ಟಿ ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ಮಾಡಿದರು ಒಂಸು ಕಡೆ ಜಿಲ್ಲಾ ಪಂಚಾಯತ ನಲ್ಲಿ ಮಾಡಿದ ಅಭಿವೃದ್ಧಿ ಕೆಲಸ ಕಾರ್ಯ ಮತ್ತೊಂದು ಕಡೆಗೆ ವಯಕ್ತಿಕವಾಗಿ ಮಾಡಿದ ಜನಪರ ಕೆಲಸಗಳು ಇವೆಲ್ಲದರ ನಡುವೆ 2008 ರಲ್ಲಿ ಮೊದಲ ಬಾರಿಗೆ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಅಲ್ಪ ಮತಗಳಿಂದ ಪರಾಭವಗೊಂಡು ಕ್ಷೇತ್ರದ ಜನರು ಸೋಲಿಸಿದ್ದಾರೆಂದು ಕೈಕಟ್ಟಿ ಸುಮ್ಮನೆ ಕುಳಿತುಕೊಳ್ಳದೇ 2013 ರಲ್ಲಿ ಮತ್ತೊಮ್ಮೆ ಸ್ಪರ್ಧಿಸಿ 36864 ಮತಗಳನ್ನು ಪಡೆದು ಇಲ್ಲೂ ಕೂಡಾ ಅಲ್ಪ ಮತಗಳಿಂದ ಪರಾಭವಗೊಂಡರು

ಮತ್ತೆ ಫಲಿತಾಂಶವನ್ನು ನೋಡಿ ಸುಮ್ಮನೆ ಕುಳಿತುಕೊಳ್ಳದೇ ಪಕ್ಷದಲ್ಲಿ ಸಾಕಷ್ಟು ಪ್ರಮಾಣದಲ್ಲಿ ತಮ್ಮನ್ನು ತಾವು ತೊಡ ಗಿಸಿಕೊಂಡು ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಪ್ರಹ್ಲಾದ್ ಜೋಶಿ ಅವರಿಗೆ ಮತ ಹಾಕಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು

ಎರಡು ಬಾರಿ ಪರಾಭವಗೊಂಡು ಸುಮ್ಮನೆ ಇರದೆ ಮೂರನೆಯ ಬಾರಿಗೆ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ ಸಧ್ಯ ಶಾಸಕರಾಗಿ ಕೆಲಸವನ್ನು ಮಾಡತಾ ಇದ್ದಾರೆ ಜಿಲ್ಲಾ ಪಂಚಾಯತ ಸದಸ್ಯರಾಗಿ ಆರಂಭಗೊಂಡ ವಯಕ್ತಿಕ ರಾಜಕೀಯ ಲೈಪ್ ಈಗ ಶಾಸಕರಾಗಿ ಆಯ್ಕೆಯಾಗಿ ಜನಪರ ಕೆಲಸವನ್ನು ಮಾಡತಾ ಇದ್ದಾರೆ

ಒಟ್ಟಾರೆ ಒಂದು ಕಡೆಗೆ ಅಜ್ಜ ಇನ್ನೊಂದು ಕಡೆ ತಂದೆ ಮಾಡಿದ ಕೆಲಸ ಕಾರ್ಯ ಇವೆಲ್ಲದರ ಜೊತೆಗೆ ಜಿಲ್ಲಾ ಪಂಚಾಯತ ಸದಸ್ಯರಾಗಿ ಆರಂಭಗೊಂಡ ರಾಜಕೀಯ ಮಾಡಿದ ಜನಪ್ರಿಯ ಕೆಲಸ ಹೀಗಾಗಿ ಸಧ್ಯ ಶಾಸಕರಾಗಿ ಅಧಿಕಾರ ದೊಂದಿಗೆ ಜನ ಸೇವೆ ಮಾಡತಾ ಇರುವ ಇವರಿಗೆ ಕ್ಷೇತ್ರದ ಜನತೆಯ ಪರವಾಗಿ Happy Birthday


Google News

 

 

WhatsApp Group Join Now
Telegram Group Join Now
Suddi Sante Desk