This is the title of the web page
This is the title of the web page

Live Stream

[ytplayer id=’1198′]

April 2025
T F S S M T W
 12
3456789
10111213141516
17181920212223
24252627282930

| Latest Version 8.0.1 |

State News

ಶಿಕ್ಷಕರ ದಿನಾಚರಣೆ ಬಗ್ಗೆ ನಿಮಗೇಷ್ಟು ಗೊತ್ತು – ಶಿಕ್ಷಕರ ದಿನಾಚರಣೆ ದಿನದಂದು ಶಿಕ್ಷಕರ ದಿನಾಚರಣೆ ಕುರಿತು ಒಂದು ಅವಲೋಕನ…..

WhatsApp Group Join Now
Telegram Group Join Now

ಬೆಂಗಳೂರು –

ಸಾಮಾನ್ಯವಾಗಿ ಎಲ್ಲಾ ದಿನಾಚರಣೆಗಳು ಒಂದೇ ದಿನಕ್ಕೆ ಮಾತ್ರ ಮೀಸಲಾಗಿರುತ್ತವೆ.ಒಂದೊಂದು ದಿನಾಚರಣೆಗಳ ಹಿಂದೆ ಒಂದೊಂದು ಇತಿಹಾಸ ಇದ್ದೇ ಇರುತ್ತದೆ.ಹೌದು ಇದಕ್ಕೆ ಶಿಕ್ಷಕರ ದಿನಾಚರಣೆ ಕೂಡಾ ಒಂದಾಗಿದ್ದು ಸಮಾಜವನ್ನು ನಿರ್ಮಾಣ ಮಾಡುವ ಕಟ್ಟುವ ಗುರುಗಳ ಕಾರ್ಯ ಸಮಾಜ ದಲ್ಲಿ ಬಹುದೊಡ್ಡದಾಗಿದೆ.

ಇವರಿಗೆ ಮಹಾನ್ ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ.ಇದು ಆದಿ ಶಂಕರರು ರಚಿಸಿದ ಶ್ಲೋಕ. ಗುರು ಬ್ರಹ್ಮ, ಗುರು ವಿಷ್ಣು, ಗುರು ಮಹೇಶ್ವರ, ಈ ಲೋಕದ ಸೃಷ್ಟಿಕರ್ತ ಗುರು. ಆ ಮಹಾನ್ ಗುರುವಿಗೆ ನಮನ ಎನ್ನುವು ದರ ಮೂಲಕ ಇಡೀ ಲೋಕವೇ ಗುರುವಿಗೆ ತಲೆ ಬಾಗುತ್ತದೆ.

ಪ್ರತಿ ವ್ಯಕ್ತಿಯು ತಮ್ಮ ಜೀವನದಲ್ಲಿ ತಂದೆ ತಾಯಿಯ ನಂತರದ ಸ್ಥಾನವನ್ನು ಗುರುವಿಗೆ ನೀಡುತ್ತಾರೆ.ಶಿಕ್ಷಣ ಮೂಲಾರ್ಥವನ್ನು ತಿಳಿಸಿ ಪ್ರತಿ ವ್ಯಕ್ತಿಯ ಬದುಕನ್ನು ಬೆಳಗುವವರು ಶಿಕ್ಷಕರಾಗಿರುವು ದರಿಂದ ಇಡೀ ಪ್ರಪಂಚವೇ ಇವರನ್ನು ಅಗ್ರಸ್ಥಾನದ ಲ್ಲಿಟ್ಟು ಪೂಜಿಸುತ್ತದೆ.

ಪ್ರತಿ ವ್ಯಕ್ತಿಯ ಬದುಕಿನ ದೀಪವಾಗಿರುವ ಶಿಕ್ಷಕ ರಿಗೂ ಸಹ ಒಂದು ದಿನವನ್ನು ಮೀಸಲಿಡಲಾಗಿದೆ. ಅದುವೇ ಸೆಪ್ಟೆಂಬರ್ 5 ಈ ದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಇಡೀ ದೇಶವೇ ಆಚರಿ ಸುತ್ತದೆ ಆ ದಿನ ಅವರ ಶಿಕ್ಷಕರ ನೆನೆದು ಸಣ್ಣ ದೊಂದು ಧನ್ಯವಾದ ಹೇಳುತ್ತಾರೆ.

ಶಿಕ್ಷಕರ ದಿನಾಚರಣೆಯನ್ನು ವಿವಿಧ ದೇಶಗಳಲ್ಲಿ ಬೇರೆ ಬೇರೆ ದಿನ ದಿನಾಂಕದಂದು ಆಚರಿಸುತ್ತಾರೆ. ಭಾರತದಲ್ಲಿ ಇದನ್ನು ಪ್ರತಿವರ್ಷ ಸೆಪ್ಟೆಂಬರ್ 5 ರಂದು ಪ್ರಸಿದ್ಧ ವಿದ್ವಾಂಸ, ಭಾರತ ರತ್ನ ಪುರಸ್ಕ್ರತ, ಮೊದಲ ಉಪರಾಷ್ಟ್ರಪತಿ, ಮತ್ತು ಸ್ವತಂತ್ರ ಭಾರತದ ಎರಡನೇ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿಗಾಗಿ ಆಚರಿಸಲಾಗುತ್ತದೆ.

ಶಿಕ್ಷಕರ ದಿನದ ಇತಿಹಾಸ

ಶಿಕ್ಷಕರ ದಿನವನ್ನು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನದಂದು ಆಚರಿಸಲಾಗುತ್ತದೆ. ಇವರು ಸೆಪ್ಟೆಂಬರ್ 5, 1888 ರಂದು ತಿರುತ್ತಾನಿ ಪಟ್ಟಣದಲ್ಲಿ ಒಂದು ತೆಲುಗು ಕುಟುಂಬದಲ್ಲಿ ಜನಿಸಿದರು ಅವರು ಅತ್ಯುತ್ತಮ ಶಿಕ್ಷಕ ತತ್ವಜ್ಞಾನಿ ಮತ್ತು ರಾಜ್ಯಪಾಲರೂ ಆಗಿದ್ದರು.

ಅವರು 1952 ರಿಂದ 1962 ರವರೆಗೆ ಭಾರತದ ಮೊದಲ ಉಪರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು ಮತ್ತು 1962 ರಲ್ಲಿ ಭಾರತದ ರಾಷ್ಟ್ರಪತಿ ಹುದ್ದೆ ಯನ್ನು ಅಲಂಕರಿಸಿದರುಮೊದಲ ಶಿಕ್ಷಕರ ದಿನವನ್ನು 5 ಸೆಪ್ಟೆಂಬರ್ 1962 ರಂದು ಆಚರಿಸಲಾಯಿತು. ಅಂದಿನಿಂದ ಇಂದಿನವರೆಗೂ ಸೆಪ್ಟೆಂಬರ್ 5 ಅನ್ನು ಶಿಕ್ಷಕರಿಗಾಗಿ ಮೀಸಲಿಡಲಾಗಿದೆ.

ಶಿಕ್ಷಕರ ದಿನದ ಮಹತ್ವ

ದೇಶವನ್ನು ಕಟ್ಟುವಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದ್ದಾಗಿದೆ. ಗುರುಕುಲ ಶಿಕ್ಷಣದಿಂದ ಹಿಡಿದು ಇಂದಿನ ಶಿಕ್ಷಣದವರೆಗೂ ಶಿಕ್ಷಕರು ಇತರರ ಜೀವನವನ್ನು ರೂಪಿಸಲು ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಿದ್ದಾರೆ.ಅವರು ನಮ್ಮನ್ನು,ನಮ್ಮ ಆತ್ಮವಿಶ್ವಾಸ,ಬದುಕನ್ನು ಬಲಪಡಿಸುತ್ತಾರೆ.

ಜೀವನದ ಪ್ರತಿಯೊಂದು ಅಂಶಗಳನ್ನು ತಿದ್ದಿ ತೀಡಿ ಮತ್ತು ಜವಾಬ್ದಾರಿ ಬಗ್ಗೆ ನಮಗೆ ಕಲಿಸುತ್ತಾರೆ. ವಿದ್ಯಾರ್ಥಿಗಳ ಬದುಕು ಯಾವಾಗಲೂ ಹಸನಾಗಿ ರಲಿ ಎಂದು ಹಾರೈಸುವ ಅವರ ಪ್ರಯತ್ನಗಳನ್ನು ಗುರುತಿಸುವುದು ಮತ್ತು ಆಚರಿಸುವುದು ಮುಖ್ಯ ವಾಗಿದೆ.ಹಾಗಾಗಿ ಈ ದಿನವನ್ನು ಆಚರಿಸಲು ಹಲವು ಕಾರ್ಯಕ್ರಮಗಳನ್ನು ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಆಯೋಜಿಸಲಾಗಿದೆ.ಈ ದಿನ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ವಿಶೇಷ ಉಡುಗೊರೆಗಳನ್ನು ಸಹ ನೀಡಿ ಶುಭಾಶಯ ತಿಳಿಸಿ ಖುಷಿ ಪಡುತ್ತಾರೆ.


Google News

 

 

WhatsApp Group Join Now
Telegram Group Join Now
Suddi Sante Desk