ಬೆಂಗಳೂರು –
7ನೇ ವೇತನ ಆಯೋಗದ ಇತಿಹಾಸದ ಬಗ್ಗೆ ನಿಮಗೇಷ್ಟು ಗೊತ್ತು – 7ನೇ ವೇತನ ಆಯೋಗ ರಚನೆಗೊಂಡಿದ್ದು ಯಾವಾಗ ನಡೆದು ಬಂದ ದಾರಿಯ ಕುರಿತ ಬಗ್ಗೆ ಒಂದಿಷ್ಟು ಮಾಹಿತಿ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕ್ರರಣೆ ವಿಚಾರ ಕುರಿತಂತೆ ರಾಜ್ಯ ಸರ್ಕಾರವು 7ನೇ ವೇತನ ಆಯೋಗವನ್ನು ರಚಿಸಿತು.
ನಿವೃತ್ತ ಐಎಎಸ್ ಅಧಿಕಾರಿ ಸುಧಾಕರ್ ರಾವ್ ಅವರ ಅಧ್ಯಕ್ಷತೆಯಲ್ಲಿ ಈ ಒಂದು ಆಯೋಗ ವನ್ನು ರಚನೆ ಮಾಡಲಾಯಿತು.ಇವರ ನೇತ್ರತ್ವ ದಲ್ಲಿ ಹೀಗೆ ರಚನೆ ಮಾಡಿರುವ 7ನೇ ವೇತನ ಆಯೋಗದಲ್ಲಿ ಸದಸ್ಯರಾಗಿ ಪಿ ಬಿ ರಾಮಮೂರ್ತಿ ಶ್ರೀಕಾಂತ ವನಹಳ್ಳಿ,ಹೆಪ್ಸಿಬಾ ರಾಣಿ ಕೋರ್ಲಪಾಟಿ ಅವರನ್ನು ನೇಮಕ ಮಾಡಲಾಯಿತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ ಬೆನ್ನಲ್ಲೇ ಈ ಒಂದು ಆಯೋಗದ ಕಾರ್ಯ ಚಟುವಟಿಕೆಗಳು ಒಂದೊಂದಾಗಿ ಆರಂಭಗೊಂಡವು. 19-11-2022 ರಂದು ಅಧಿಕೃತವಾಗಿ ಈ ಒಂದು ಆಯೋಗವು ರಚನೆ ಗೊಂಡಿತು
ಈ ಒಂದು ಕುರಿತಂತೆ ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಆದೇಶಗೊಂಡಿತು.ಇದರ ನಂತರ ಆಯೋಗದ ಕಾರ್ಯ ಚಟುವಟಿಕೆಗಳಿಗಾಗಿ ಹುದ್ದೆಗಳನ್ನು ಸೃಷ್ಟಿಸುವ ಕುರಿತಂತೆ 01-12-2022 ರಂದು 7ನೇ ರಾಜ್ಯ ವೇತನ ಆಯೋಗಕ್ಕೆ ಹುದ್ದೆಗಳನ್ನು ಸೃಜಿಸುವ ಬಗ್ಗೆ ಆದೇಶವನ್ನು ಕೂಡಾ ಮಾಡಿ ಆಯೋಗಕ್ಕೆ ಒಟ್ಟು 44 ಹುದ್ದೆ ಗಳನ್ನು ಕೂಡಾ ನೀಡಲಾಯಿತು.
ಇನ್ನೂ ಇದರ ನಂತರ 06-02-2023 ರಂದು 7ನೇ ರಾಜ್ಯ ವೇತನ ಆಯೋಗಕ್ಕೆ ಪ್ರಶ್ನಾವಳಿ ಗಳಿಗೆ ಮಾಹಿತಿ ಒದಗಿಸುವ ಕುರಿತಂತೆ ಮತ್ತೊಂದು ಸುತ್ತೋಲೆಯನ್ನು ಕೂಡಾ ಮಾಡ ಲಾಯಿತು.01-03-2023 ರಂದು ರಾಜ್ಯ ಸರ್ಕಾರಿ ನೌಕರರಿಗೆ ತಾತ್ಕಾಲಿಕ ರೂಪದಲ್ಲಿ ಪರಿಹಾರವನ್ನು ಮಂಜೂರಾತಿ ಮಾಡಲಾಯಿತು 08-03-2023
7ನೇ ರಾಜ್ಯ ವೇತನ ಆಯೋಗದ ಪರಿಶೀಲ ನಾರ್ಹ ಅಂಶಗಳಿಗೆ ಸೇರ್ಪಡೆ ಮಾಡುವ ಕುರಿತು.15-05-2023 7ನೇ ರಾಜ್ಯ ವೇತನ ಆಯೋಗದ ಅವಧಿಯನ್ನು ಮೊದಲನೆಯ ಬಾರಿಗೆ ವಿಸ್ತರಿಸಿಸಲಾಯಿತು.ನಂತರ ರಾಜ್ಯದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಹೊಸದಾಗಿ ಸರ್ಕಾರ ರಚನೆಗೊಂಡ ನಂತರ ಎರಡನೇ ಬಾರಿಗೆ ಈ ಬಗ್ಗೆ 06-11-2023 ರದು 7ನೇ ರಾಜ್ಯ ವೇತನ ಆಯೋಗದ ಅವಧಿಯನ್ನು ವಿಸ್ತರಿಸ ಲಾಯಿತು
ಬಗ್ಗೆ ಸಧ್ಯ ಕೊನೆಗೂ ಈ ಒಂದು ವರದಿಯನ್ನು ಸಲ್ಲಿಕೆ ಮಾಡಲಾಗುತ್ತಿದೆ.ಇನ್ನೂ ಸ್ವೀಕಾರ ಮಾಡಿದ ರಾಜ್ಯ ಸರ್ಕಾರ ಯಾವಾಗ ಜಾರಿಗೆ ತರಲಿದೆ ಎಷ್ಟು ಸಮಯಾಕಾಶವನ್ನು ತಗೆದು ಕೊಳ್ಳಲಿದೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..