ವಿಜಯ ರಾಘವೇಂದ್ರ ಪತ್ನಿ ಬಗ್ಗೆ ನಿಮಗೇಷ್ಟು ಗೊತ್ತು – ಮರೆಯಾದ ಕರಾವಳಿ ಮೂಲದ ಸ್ಪಂದನ ಅವರ ಪರಿಚಯದ ಸಂಕ್ಷಿಪ್ತ ಮಾಹಿತಿ ನಿಮಗಾಗಿ…..

Suddi Sante Desk
ವಿಜಯ ರಾಘವೇಂದ್ರ ಪತ್ನಿ ಬಗ್ಗೆ ನಿಮಗೇಷ್ಟು ಗೊತ್ತು – ಮರೆಯಾದ ಕರಾವಳಿ ಮೂಲದ ಸ್ಪಂದನ ಅವರ ಪರಿಚಯದ ಸಂಕ್ಷಿಪ್ತ ಮಾಹಿತಿ ನಿಮಗಾಗಿ…..

ಬೆಂಗಳೂರು

ವಿಜಯ ರಾಘವೇಂದ್ರ ಪತ್ನಿ ಬಗ್ಗೆ ನಿಮಗೇಷ್ಟು ಗೊತ್ತು – ಮರೆಯಾದ ಕರಾವಳಿ ಮೂಲದ ಸ್ಪಂದನ ಅವರ ಪರಿಚಯದ ಸಂಕ್ಷಿಪ್ತ ಮಾಹಿತಿ ನಿಮಗಾಗ

ನಟ ವಿಜಯ ರಾಘವೇಂದ್ರ ರವರ ಪತ್ನಿ ಸ್ಪಂದನ ಹೃದಯಘಾತದಿಂದ ನಿಧನರಾಗಿದ್ದಾರೆ.ವರ್ಷದ ಹಿಂದೆ ಅಷ್ಟೇ ಪುನೀತ್ ರಾಜಕುಮಾರ್ ಮತ್ತು ಚಿರಂಜೀವಿ ಸರ್ಜಾ ರವರು ಹೃದಯಾಘಾತಕ್ಕೆ ಬಲಿಯಾಗಿ ದುಃಖದಲ್ಲಿರುವಾಗ ಇದೀಗ ಈಗ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ ಎದುರಾಗಿದೆ

ಕುಟುಂಬದೊಂದಿಗೆ ಥೈಲ್ಯಾಂಡ್ ಪ್ರವಾಸಕ್ಕೆಂದು ಮೂರು ದಿನದ ಹಿಂದೆ ಅಷ್ಟೇ ತೆರಳಿದ್ದ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಮಲಗಿದ್ದಲ್ಲೇ ಹೃದಯಾಘಾತವಾಗಿದೆ ಎಂದು ವರದಿಗಳು ತಿಳಿಸಿವೆ.

ಕರಾವಳಿ ಮೂಲದ ಸ್ಪಂದನ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ ಅವರ ಕುರಿತು ನೋಡೊ ದಾದರೆ.ಸ್ಪಂದನ ರವರು ಮೂಲತಹ ದಕ್ಷಿಣ ಕನ್ನಡ ಜಿಲ್ಲೆ ಯ ಬೆಳ್ತಂಗಡಿಯವರಾಗಿದ್ದಾರೆ

ಬೆಂಗಳೂರಿನಲ್ಲಿ ಜನಿಸಿದ ಅವರು ತಂದೆ ಬಿ ಕೆ ಶಿವರಾಂ ಇವರು ಸಹಾಯಕ ಪೋಲಿಸ್ ಆಯುಕ್ತರಾಗಿ (ACP) ಸೇವೆ ಸಲ್ಲಿಸಿದ್ದರು. ಸ್ಪಂದನ ರವರು ತಮ್ಮ ಶಾಲಾ ಶಿಕ್ಷಣವನ್ನು ಬೆಂಗಳೂರಿನ ಸ್ಟೆಲ್ಲಾ ಮೇರಿಸ್ ಶಾಲೆಯಲ್ಲಿ ಪೂರ್ಣಗೊಳಿಸಿ ನಂತರ ಕೇರಳದ ಎಂಇಎಸ್ ಕಾಲೇಜ್ ನಲ್ಲಿ ಪದವಿಯನ್ನು ಗಳಿಸಿದರು.

ಕರಾವಳಿ ಮೂಲದ ಸ್ಪಂದನ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ ವಿಜಯ ರಾಘವೇಂದ್ರ ಮತ್ತು ಸ್ಪಂದನ ರವರು 2007ರಲ್ಲಿ ಕೆಫೆ ಒಂದರಲ್ಲಿ ಭೇಟಿಯಾಗಿ ಇಬ್ಬರೂ ಒಬ್ಬರನ್ನು ಒಬ್ಬರು ಇಷ್ಟ ಪಟ್ಟಿದ್ದರು.

ತದನಂತರ ಕುಟುಂಬದವರ ಒಪ್ಪಿಗೆಯೊಂದಿಗೆ ಆಗಸ್ಟ್ 26ರಂದು ಮದುವೆಯಾಗಿದ್ದರು.ಈ ದಂಪತಿಗೆ ಶೌರ್ಯ ಎಂಬ ಮಗ ಇದ್ದಾನೆ. ಇನ್ನೇನು ಕೆಲವೇ ದಿನಗಳಲ್ಲಿ ತಮ್ಮ 16ನೇ ವಿವಾಹ ವಾರ್ಷಿಕೋತ್ಸವವನ್ನು ಕೂಡಾ  ಆಚರಿಸಿ ಕೊಳ್ಳಬೇಕಿತ್ತು

ಆದರೆ ವಿಧಿ ಆಟವೇ ಬೇರೆ ಯಾರಿಗೂ ಹೇಳದೆ ಎಲ್ಲರನ್ನೂ ಸ್ಪಂದನಾ ಅಗಲಿದ್ದಾರೆ.ಕರಾವಳಿ ಮೂಲದ ಸ್ಪಂದನ ಹುಟ್ಟಿ ಬೆಳೆದದ್ದು ಬೆಂಗಳೂರಿ ನಲ್ಲಿ.ವಿಜಯ ರಾಘವೇಂದ್ರ ಅವರು ಮೃದು ಸ್ವಭಾವದವರು ನಗುನಗುತ್ತಾ ಎಲ್ಲರೊಂದಿಗೆ ಬೆರೆತು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಚಲನ ಚಿತ್ರಗಳಲ್ಲಿ ನಟಿಸಿದವರು.

ಅದೇ ರೀತಿ ಅವರ ಪತ್ನಿ ಸ್ಪಂದನ ಕೂಡ ತುಂಬಾನೇ ಸರಳವಾಗಿದ್ದು ಕಡಿಮೆ ಮಾತು ಮತ್ತು ವಿಜಯರಾಘವೇಂದ್ರ ಅವರಿಗೆ ಬೆನ್ನೆಲು ಬುವಾಗಿ ನಿಂತಿದ್ದರು.ಕಳೆದ ವಿಧಾನಸಭಾ ಬೆಳ್ತಂಗಡಿ ಕ್ಷೇತ್ರದ ಚುನಾವಣಾ ಸಂದರ್ಭ ಸ್ಪಂದನ ರವರ ತಮ್ಮ ರಕ್ಷಿತ್ ಶಿವರಾಂ ರವರು ಸ್ಪರ್ಧಿಸಿದ್ದರು ತಮ್ಮ ತಮ್ಮನ ಪ್ರಚಾರಕ್ಕಾಗಿ ಸ್ಪಂದನ ಮತ್ತು ವಿಜಯ್ ರಾಘವೇಂದ್ರ ಅವರು 15 ದಿನ ಬೆಳ್ತಂಗಡಿಯಲ್ಲಿ ಇದ್ದು ತಮ್ಮನ ಪರವಾಗಿ ಸಾಕಷ್ಟು ಪ್ರಚಾರ ಮಾಡಿ ಬೆಂಬಲಿಸಿದ್ದರು.

ಇದೀಗ ಇವರ ಸಾವು ಎಲ್ಲರಿಗೂ ನೋವು ತಂದಿದೆ ಚಿಕ್ಕ ವಯಸ್ಸಿನಲ್ಲಿ ಸ್ಪಂದನ ರವರು ಇಹ ಲೋಕ ತ್ತಜಿಸಿದ್ದು ಸಾಕಷ್ಟು ಗಣ್ಯರು ಮನೆಗೆ ಆಗಮಿಸುತ್ತಿದ್ದು ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿದ್ದಾರೆ ಇನ್ನೂ ಪ್ರಾರ್ಥಿವ ಶರೀರವು ಬೆಂಗಳೂರಿಗೆಆಗಮಿಸಿ ನಂತರ ಸಕಲ ವಿಧಿ ವಿಧಾನದೊಂದಿಗೆ ಅಂತ್ಯಕ್ರಿಯ ನಡೆಯಲಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.