ಹುಬ್ಬಳ್ಳಿ ಧಾರವಾಡ –
ಸೆನ್ಸಾರ್ ಕಳೆದುಕೊಂಡು ಚಿಗರಿ ಬಸ್ ಗಳು ಡ್ರೈವರ್ ಗಳು ಹೇಗೆ ಡೂಟಿ ಮಾಡಬೇಕು DC ಸಾಹೇಬ್ರೆ – ಆ ಕೆಲಸ ಈ ಕೆಲಸ ಬಿಡಿ ದುಬಾರಿ ಚಿಗರಿ ಬಸ್ ನಲ್ಲಿ ದೊಡ್ಡ ಸಮಸ್ಯೆಯಾಗುತ್ತಿದೆ ಟುಯ್ ಟುಯ್ ಶಬ್ದ ನೋಡಿ…..ನೀವು ಬಸ್ ನಲ್ಲಿ ಹೋಗುವಾಗ ಗಮನಕ್ಕೆ ಬಂದಿಲ್ವಾ
ಹುಬ್ಬಳ್ಳಿ ಧಾರವಾಡ ಮಧ್ಯೆ ಸಂಚಾರ ಮಾಡುತ್ತಿ ರುವ ಚಿಗರಿ ಬಸ್ ಗಳು ದುಬಾರಿಯಾಗಿವೆ. ಒಂದರಿಂದ ಒಂದೂವರೆ ಕೋಟಿ ರೂಪಾಯಿ ಬೆಲೆಬಾಳುವ ಈ ಒಂದು ಬಸ್ ಗಳು ಬಹುತೇಕ ವಾಗಿ ಸೆನ್ಸಾರ್ ಗಳಿಂದ ಕೆಲಸ ಮಾಡುತ್ತಿವೆ.ಈ ಒಂದು ಬಸ್ ನಲ್ಲಿ ಸಮಸ್ಯೆಗಳು ಒಂದಲ್ಲ ಎರಡಲ್ಲ.ಆರಂಭಗೊಂಡು ಈವರೆಗೆ ಇದೇ ಬಸ್ ಗಳು ಸಂಚಾರವನ್ನು ಮಾಡುತ್ತಿದ್ದು ಸರಿಯಾದ ನಿರ್ವಹಣೆ ಮಾಡಿದ್ದರೆ ಸರಿಯಾದ ವ್ಯವಸ್ಥೆ ಯನ್ನು ಮಾಡಿದ್ದರೆ ಇಂದು ಬಸ್ ನಲ್ಲಿ ಯಾವುದೇ ಸಮಸ್ಯೆಗಳು ಕಂಡು ಬರುತ್ತಿರಲಿಲ್ಲ
ಎಲ್ಲೇಂದರಲ್ಲಿ ನಿಂತುಕೊಳ್ಳುವ ವ್ಯವಸ್ಥೆ ಬರುತ್ತಿರಲಿಲ್ಲ ಡ್ರೈವರ್ ಗಳಿಗೆ ಅಮಾನತು ಆಗುವ ಪರಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಇದ್ಯಾವುದು ಇಲ್ಲದ ಪರಿಣಾಮವಾಗಿ ಇಂದು ಚಿಗರಿ ಬಸ್ ಗಳು ಸೆನ್ಸಾರ್ ಗಳನ್ನು ಸಂಪೂರ್ಣ ವಾಗಿ ಕಳೆದುಕೊಂಡಿವೆ.ಬಸ್ ನಲ್ಲಿ ಸಧ್ಯ ಒಮ್ಮೆ ನೋಡಿದರೆ ಬಹುತೇಕವಾಗಿ ಸೆನ್ಸಾರ್ ಗಳನ್ನು ಕಳೆದುಕೊಂಡು ಸೆನ್ಸಾರ್ ಲೆಸ್ ಚಿಗರಿ ಬಸ್ ಗಳಾಗಿವೆ.ಸಮಸ್ಯೆ ಕಂಡು ಬಂದ ಕೂಡಲೇ ಕೆಲಸ ಗಳನ್ನು ಮಾಡಿದ್ದರೆ ಬಸ್ ಗಳು ತುಂಬಾ ಚೆನ್ನಾಗಿ ಕೆಲಸಗಳನ್ನು ಮಾಡುತ್ತಿದ್ದವು
ಆದರೆ ಏನು ಮಾಡೊದು ಯಾವುದು ಸರಿಯಾಗಿ ಇಲ್ಲದ ಪರಿಣಾಮವಾಗಿ ಇಂದು ಡ್ರೈವರ್ ಗಳು ಶಿಕ್ಷೆಯನ್ನು ಅನುಭವಿಸುವಂತಾಗಿದ್ದು ಇದನ್ನೇಲ್ಲ ವನ್ನು ಇಲಾಖೆಗೆ ಡಿಸಿ ಯಾಗಿ ಬೆಂಗಳೂರಿನಿಂದ ಬಂದಿರುವ ಸಿದ್ದಲಿಂಗಯ್ಯ ಸಾಹೇಬ್ರು ಬಸ್ ಗಳ ಸುಧಾರಣೆಯನ್ನು ಮಾಡೊದನ್ನು ಬಿಟ್ಟು ಡ್ರೈವರ್ ಗಳಿಗೆ ಬೇರೆ ಬೇರೆ ಶಿಕ್ಷೆಯನ್ನು ನೀಡು ತ್ತಿದ್ದಾರೆ.
ಏನಾದರೂ ಹೆಚ್ಚು ಕಡಿಮೆಯಾದರೆ ಅಮಾನತು ಮಾಡೊದು ಬೇರೆ ಕಡೆಗೆ ವರ್ಗಾವಣೆ ಮಾಡೊದು ಇಂತಹ ಕೆಲಸಗಳನ್ನು ಮಾಡುತ್ತಿದ್ದು ಇದನ್ನೇಲ್ಲನ್ನು ಬಿಡಿ ಸಾಹೇಬ್ರೆ ಮೊದಲು ಬಸ್ ಗಳನ್ನು ಸುಸಜ್ಜಿತವಾಗಿ ಸಂಚಾರ ಮಾಡುವಂತೆ ಮಾಡಿ ನಂತರ ಡ್ರೈವರ್ ಗಳ ಮೇಲೆ ಶಿಕ್ಷೆಯ ಪ್ರಯೋಗವನ್ನು ಮಾಡಿ ಸಧ್ಯ ಸೆನ್ಸಾರ್ ಗಳನ್ನು ಕಳೆದುಕೊಂಡಿರುವ ಬಸ್ ಗಳಲ್ಲಿ ಟುಯ್ ಟುಯ್ ಶಬ್ದ ಬರುತ್ತಿದ್ದು
ತಾವು ಕೂಡಾ ಡ್ರೈವರ್ ರ ಕಾರ್ಯವೈಖರಿ ಯನ್ನು ಪರೀಕ್ಷೆ ಮಾಡುವಾಗ ಈ ಒಂದು ವಿಚಾರ ಗಮನಕ್ಕೆ ಬಂದಿರಬೇಕು ಅಲ್ವಾ ಸಾರ್ ಇಲ್ಲವಾ ದರೆ ನೋಡಿ…..
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ ಧಾರವಾಡ…..